ಆಲ್ದೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಆವತಿ ಹೋಬಳಿಯ ಕೆರೆಮಕ್ಕಿ ಗ್ರಾಮದ ಶಶಿಧರ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.
ಸೋಮವಾರ ರಾತ್ರಿ ಹಂಗರವಳ್ಳಿ ಗ್ರಾಮದಲ್ಲಿ ನಡೆದ ಕಾಳಗ ಹಬ್ಬದಲ್ಲಿ ಪಾಲ್ಗೊಂಡು ತಮಟೆ ಬಾರಿಸಿ ದೇವರ ಆಶೀರ್ವಾದ ಪಡೆದರು. ಗ್ರಾಮದ ಪಕ್ಷದ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ನಂತರ ಕೆರೆಮಕ್ಕಿ ಗ್ರಾಮದ ಶಶಿಧರ್ ಮನೆಯಲ್ಲಿ ಉಳಿದುಕೊಂಡರು.
ಮಂಗಳವಾರ ಬೆಳಗ್ಗೆ ಕಾಫಿ ತೋಟಕ್ಕೆ ಭೇಟಿ ನೀಡಿದ ಅವರು ಕಾಫಿ ಕೊಯ್ಲು ಮಾಡಿ, ಕಾಫಿ ಉದ್ಯಮದ ಬಗ್ಗೆ ಮಾಹಿತಿ ಪಡೆದರು. ಆವತಿ ಹೋಬಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಚುನಾವಣೆ ಸಂಬಂಧ ಚರ್ಚೆ ನೆಡೆಸಿದರು.
ಬೈಗೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಎಲ್ಲ ರೀತಿಯ ಸೌಲಭ್ಯ ಸಿಗುವಂತಾಗಬೇಕು. ಈ ದಿಸೆಯಲ್ಲಿ ಬೈಗೂರು ಗ್ರಾಪಂ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದರು. ಪಂಚಾಯತಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು. ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ಕುಡಿಯುವ ನೀರಿನ ಕಾಮಗಾರಿಯನ್ನು ವೀಕ್ಷಿಸಿ ಉಡುಪಿಗೆ ತೆರಳಿದರು.
ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮುಗಳವಳ್ಳಿ, ಬೈಗೂರು ನಾಗೇಶ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶಶಿ ಹಂಗರವಳ್ಳಿ, ಅರುಣ್, ಮಹೇಂದ್ರ, ಶಶೀಧರ್ ಇತರರಿದ್ದರು.