ಪ್ರತಿಯೊಂದು ಆಚರಣೆಯ ಹಿಂದಿದೆ ಸದುದ್ದೇಶ

ಸೊರಬ: ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಒಂದು ಅರ್ಥವಿರುತ್ತದೆ. ಅದನ್ನರಿತು ಮಾಡುವುದರಿಂದ ಹೆಚ್ಚು ಅರ್ಥವನ್ನು ಪಡೆದುಕೊಳ್ಳುತ್ತದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಉಜ್ಜನಿಪುರದ ಬಸವೇಶ್ವರ, ಗಣಪತಿ ಹಾಗೂ ನಾಗದೇವರ ಆಲಯ ಪ್ರವೇಶ ಹಾಗೂ ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮಸಭೆ ಉದ್ದೇಶಿಸಿ ಆಶೀರ್ವಚನ ನೀಡಿದರು.
ನಮ್ಮ ಆಚರಣೆಗಳ ಹಿಂದೆ ಒಂದು ಉದ್ದೇಶ ಇರುತ್ತದೆ. ಜಗತ್ತಿನ ಹಿತ ಕಾಯುವ ಅರ್ಥವಿರುತ್ತದೆ. ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ಉತ್ತಮ ರಹದಾರಿಯನ್ನು ತೋರುತ್ತದೆ. ಆದ್ದರಿಂದ ಇಂತಹ ಆಚರಣೆಗಳನ್ನು ಸಂಪ್ರದಾಯದ ಹೆಸರಿನಲ್ಲಿ ನಮ್ಮ ಪೂರ್ವಜರು ಆಚರಣೆಗೆ ತಂದರು ಎಂದರು.
ಆಧುನಿಕ ಯುಗದಲ್ಲಿ ಯುವಕರು ಅವುಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ನಮ್ಮ ಸಂಸ್ಕೃತಿಗೆ ಮಾಡುತ್ತಿರುವ ಅಪಚಾರವಾಗಿದೆ. ದೇವರು ಎಂದರೆ ನಮ್ಮ ಅಂತರಂಗದ ಅರಿವನ್ನು ತೋರಲು ಇರುವ ಸಾಧನ. ಅಂತರಂಗದ ಅರಿವನ್ನು ಹೊಂದುವುದೇ ಮನುಷ್ಯ ಜನ್ಮದ ಗುತಿಯಾಗಬೇಕು. ದೇವಾಲಯವನ್ನು ನಿರ್ಮಾಣ ಮಾಡುವಾಗ ಇರುವ ಭಕ್ತಿ ಅದನ್ನು ನಿರ್ಮಿಸಿದ ಮೇಲೂ ಇರಬೇಕು. ನಿತ್ಯವೂ ದೇವಾಲಯಕ್ಕೆ ಬರಬೇಕು. ಹತ್ತು ನಿಮಿಷ ಧ್ಯಾನ ಮಾಡಬೇಲು. ಇಂತಹ ಆಚರಣೆಗಳಿಂದ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಮೂಡಿ ಸಂಸ್ಥಾನ ಮಠದ ಶ್ರೀ ಸದಾಶಿವ ಸ್ವಾಮೀಜಿ, ಇಂತಹ ಕಾರ್ಯಗಳು ಮನಸ್ಸಿಗೆ ನೆಮ್ಮದಿ, ಶಾಂತಿ ತರುತ್ತವೆ. ದೇವಾಲಯಗಳು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುತ್ತವೆ ಎಂದರು. ತಾಳಗುಪ್ಪದ ಶ್ರೀ ಸಿದ್ಧವೀರ ಮಹಾಸ್ವಾಮೀಜಿ, ಶಾಂತಪುರದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಚರಂತಯ್ಯ ಶಾಸ್ತ್ರಿ ಮತ್ತು ಸಂಗಡಿಗರಿಂದ ಪ್ರತಿಷ್ಠಾಪನಾ ವಿಧಿವಿಧಾನ ನೆರವೇರಿದವು.

Share This Article

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…