More

  ಕೆರೆ-ಕಟ್ಟೆಗಳ ಭರ್ತಿಯಿಂದ ಅಂತರ್ಜಲ ವೃದ್ಧಿ: ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ

  ಯಲಬುರ್ಗಾ: ಕ್ಷೇತ್ರದಾದ್ಯಂತ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳಿಗೆ ಅಧಿಕ ನೀರು ಬಂದಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

  ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕ ಗುರುವಾರ ಹಮ್ಮಿಕೊಂಡಿದ್ದ ಕೆಂಪುಕೆರೆಗೆ ಗಂಗಾಪೂಜೆ ಮತ್ತು 11 ರೈತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆರೆಗಳು ತುಂಬಿದ್ದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಹಾಗೂ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಕ್ಷೇತ್ರದ ಕೆರೆಗಳು ಅಭಿವೃದ್ಧಿಯಾಗಿವೆ. ಈ ಭಾಗದ ಕೆರೆಗಳ ಪುನಶ್ಚೇತನ ಹಾಗೂ ಅವುಗಳ ಭರ್ತಿಗೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುದಾನ ನೀಡಿದೆ ಎಂದರು.

  ನಾನು ಸಚಿವನಾಗಿದ್ದಾಗ ಸರ್ಕಾರದಿಂದ 5 ಕೋಟಿ, ಪಪಂನಿಂದ 1.75 ಕೋಟಿ ರೂ. ಅನುದಾನ ನೀಡಿ ಪಟ್ಟಣದ ಕೆಂಪುಕೆರೆ ಅಭಿವೃದ್ಧಿಪಡಿಸಲಾಗಿದೆ. ಯಲಬುರ್ಗಾ-ಕುಕನೂರು ತಾಲೂಕಿನ ಕೆರೆಗಳನ್ನು ಅಭಿವೃದ್ಧಿ ಮಾಡಿರುವುದು ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ. ಆದರೆ ಈಗಿನ ಸಚಿವರು ಎಲ್ಲಾ ಅಭಿವೃದ್ಧಿ ನಮ್ಮಿಂದಾಗಿದೆ ಎಂದು ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೆರೆಗಳಿಗೆ ಅನುದಾನ ನೀಡಲು ಆದೇಶ ಮಾಡಿರುವುದು ಜನ ಮರೆತಿಲ್ಲ. ಪ್ರಚಾರಕ್ಕಾಗಿ ಕೆಲವರು ಇದನ್ನು ನಾವೇ ಮಾಡಿದ್ದೇವೆ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ಬಿ.ಎಂ. ಶಿರೂರ, ರಾಮಣ್ಣ ಸಾಲಬಾವಿ, ಆರ್.ಜಿ. ನಿಂಗೋಜಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಗಿರಿಜಾ ರೇವಣಪ್ಪ ಸಂಗಟಿ, ಸಾವಿತ್ರಿ ಎಸ್. ಗೊಲ್ಲರ, ನಂದಿತಾ ಶಿವನಗೌಡ ದಾನರಡ್ಡಿ, ಈಶ್ವರ ಅಟಮಾಳಗಿ, ಫರಿದಾ ಬೇಗಂ, ಜಯಶ್ರೀ ಅರಕೇರಿ, ಮಲ್ಲಮ್ಮ ಗೊಂದಿ, ಶರಣಮ್ಮ ಪೂಜಾರ, ಜಯಶ್ರೀ ಕಂದಕೂರ, ಶರಣಪ್ಪ ಕೊಪ್ಪಳ, ಮಲ್ಲೇಶಗೌಡ ಮಾಲಿಪಾಟೀಲ್, ಶಿವಾನಂದ ಬಣಕಾರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts