More

    ಬೇವೂರು, ತುಮ್ಮರಗದ್ದಿಯಲ್ಲಿ ಕಣ್ಮನ ಸೆಳೆದ ವರ್ಲಿ ಕಲೆ, ಪಿಂಕ್ ಮತಗಟ್ಟೆ

    ಯಲಬುರ್ಗಾ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಮತದಾರರ ಸೆಳೆಯಲು ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ತೆರೆದಿರುವ ಮಾದರಿ ಮತಗಟ್ಟೆಗಳು ಗಮನ ಸೆಳೆಯುತ್ತಿವೆ.

    ಕ್ಷೇತ್ರದಲ್ಲಿ ಎರಡು ಪಿಂಕ್ ಮತಗಟ್ಟೆ, ಐದು ಮಾದರಿ ಮತಗಟ್ಟೆ ನಿರ್ಮಿಸಲಾಗಿದೆ. ಬೇವೂರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಮಾದರಿ ಹಾಗೂ ಪಿಂಕ್ ಮತಗಟ್ಟೆಗಳ ವರ್ಲಿ ಚಿತ್ರಗಳು ಮತದಾರರ ಗಮನ ಸೆಳೆಯುತ್ತಿವೆ. ಇನ್ನು ಬೇವೂರು ಮತ್ತು ಯಲಬುರ್ಗಾದಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾಗಿ ನಿರ್ಮಿಸಿರುವ ಪಿಂಕ್ ಮತಗಟ್ಟೆಗಳು ಬಣ್ಣ ಬಣ್ಣದಿಂದ ಕೂಡಿದ್ದು ಆಕರ್ಷಿಸುತ್ತಿವೆ.

    varli-painting
    ಯಲಬುರ್ಗಾದ ಸಪಪೂ ಕಾಲೇಜಿನಲ್ಲಿ ಸ್ಥಾಪಿಸಲಾದ ಅಂಗವಿಕಲ ಸ್ನೇಹಿ ಮತಗಟ್ಟೆ.

    ಮತದಾನ ಮಾಡಲು ವಿಶೇಷ ಆದ್ಯತೆ

    ಮಹಿಳೆಯರು ಮತದಾನ ಮಾಡಲು ವಿಶೇಷ ಆದ್ಯತೆ ನೀಡಲಾಗಿದೆ. ಮುಧೋಳ ಮತ್ತು ತುಮ್ಮರಗುದ್ದಿಯಲ್ಲಿನ ಮಾದರಿ ಮತಗಟ್ಟೆಗಳು ಸಂಪೂರ್ಣ ವರ್ಲಿ ಕಲೆಯಲ್ಲಿ ಬಣ್ಣ ಬಳಿದು ಆಕರ್ಷಣೀಯ ಚಿತ್ರಗಳನ್ನು ಬಿಡಿಸಲಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳನ್ನು ಬರೆಯಲಾಗಿದೆ.

    varli-painting
    ತುಮ್ಮರಗುದ್ದಿಯಲ್ಲಿ ಸ್ಥಾಪಿಸಲಾದ ಮಾದರಿ ಮತದಾನ ಕೇಂದ್ರ.

    ಮತಗಟ್ಟೆ ಕೇಂದ್ರಗಳು ಪ್ರಕೃತಿ ಸೊಬಗು, ಗ್ರಾಮೀಣ ಜಾನಪದ, ಧಾರ್ಮಿಕ ಪರಂಪರೆ ಐತಿಹ್ಯ ಸ್ಥಳಗಳನ್ನು ವರ್ಲಿ ಚಿತ್ರಕಲೆ ಮೂಲಕ ಗೋಡೆ ಮೇಲೆ ಬಿಡಿಸಲಾಗಿದೆ. ವಿಭಿನ್ನ ಹಾಗೂ ವಿಶೇಷದಿಂದ ಕೂಡಿವೆ. ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕೆಂಬ ಉದ್ದೇಶದಿಂದ ಸ್ವೀಪ್ ಸಮಿತಿ ಇಂಥ ಕಲಾತ್ಮಕ ಚಟುವಟಿಕೆಗಳಿಗೆ ಮುಂದಾಗಿದೆ. ಶೇ.100 ಮತದಾನವಾದಾಗ ಮಾಡಿದ ಕಾರ್ಯ ಸಾರ್ಥಕವಾಗಲಿದೆ ಎಂಬುದು ಸ್ವೀಪ್ ಸಮಿತಿಯ ಆಶಯವಾಗಿದೆ.

    ಇದನ್ನೂ ಓದಿ: ಮತಗಟ್ಟೆ ಅಂದ ಹೆಚ್ಚಿಸಿದ ವರ್ಲಿ ಕಲೆ: ಜಿಲ್ಲಾ ಸ್ವೀಪ್ ಸಮಿತಿ ಕ್ರಮ

    ಮತದಾನದ ಜನಪ್ರಿಯತೆ, ಸಂಸ್ಕೃತಿ ಮತ್ತು ಸಂಪ್ರದಾಯ ಉತ್ತೇಜಿಸಲು ವಿಶಿಷ್ಟ ವಿಧಾನ ಇದಾಗಿದ್ದು, ಸಹ್ಯಾದ್ರಿ ಶ್ರೇಣಿಯ ಉತ್ತರ ಭಾಗದ ಬುಡಕಟ್ಟು ಜನ ರಚಿಸಿದ ಬುಡಕಟ್ಟು ಕಲೆಯ ಒಂದು ರೂಪ ವರ್ಲಿ ಕಲೆಯಾಗಿದೆ. ಜನಪದ ವರ್ಣರಂಜಿತ ಚಿತ್ರಗಳಿಂದ ಮತದಾನ ಕೇಂದ್ರಗಳು ಅಲಂಕೃತಗೊಂಡಿವೆ. ಪಟ್ಟಣ ಸೇರಿ ತಾಲೂಕಿನ ಬೇವೂರು, ಮುಧೋಳ, ತುಮ್ಮರಗುದ್ದಿ ಸೇರಿದಂತೆ ನಾನಾ ಕಡೆ ಕೇಂದ್ರಗಳಿಗೆ ವಿಶಿಷ್ಟ ರೀತಿಯ ವರ್ಲಿ ಕಲೆ ಮೂಲಕ ಜನರನ್ನು ಸೆಳೆಯುವಂತೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts