More

    ಮತಗಟ್ಟೆ ಅಂದ ಹೆಚ್ಚಿಸಿದ ವರ್ಲಿ ಕಲೆ: ಜಿಲ್ಲಾ ಸ್ವೀಪ್ ಸಮಿತಿ ಕ್ರಮ

    ವಿಜಯವಾಣಿ ವಿಶೇಷ ಕುಕನೂರು

    ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ, (District SVEEP Committee) ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಮತಗಟ್ಟೆಗಳನ್ನು ಸುಂದರಗೊಳಿಸುವ ಮೂಲಕ ಜನರ ಸೆಳೆಯಲು ಮುಂದಾಗಿದೆ.

    ತಾಲೂಕಿನ ವಿವಿಧ ಮತಗಟ್ಟೆ ಕೇಂದ್ರದ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆ ಬಿಡಿಸುತ್ತಿದ್ದು, ಮೇ 10 ರಂದು ಜನರನ್ನು ಸೆಳೆಯುವಂತೆ ಸಿಂಗರಿಸಲಾಗುತ್ತಿದೆ. ಮತದಾನ ಮಹತ್ವ ಮತ್ತು ಸಂಸ್ಕೃತಿ, ಸಂಪ್ರದಾಯ ಉತ್ತೇಜಿಸಲು ವಿಶಿಷ್ಟ ವಿಧಾನ ಕಂಡುಕೊಳ್ಳಲಾಗಿದೆ.

    ಚಿತ್ರಗಳಿಂದ ಮತದಾನ ಕೇಂದ್ರಗಳು ಅಲಂಕೃತ

    ಸಹ್ಯಾದ್ರಿ ಶ್ರೇಣಿಯ ಉತ್ತರ ಭಾಗದ ಬುಡಕಟ್ಟು ಜನರು ರಚಿಸಿದ ಚಿತ್ರಕಲೆಯ ಒಂದು ರೂಪ ವರ್ಲಿ ಕಲೆಯಾಗಿದೆ. ಜಾನಪದ ವರ್ಣರಂಚಿತ ಚಿತ್ರಗಳಿಂದ ಮತದಾನ ಕೇಂದ್ರಗಳು ಅಲಂಕೃತಗೊಂಡಿವೆ. ತಾಲೂಕಿನ ಇಟಗಿ, ದ್ಯಾಂಪೂರ, ತಳಕಲ್, ರಾಜೂರು, ಕುಕನೂರಿನ ಒಟ್ಟು ಏಳು ಮತಗಟ್ಟೆಗಳು ವರ್ಲಿ ಕಲೆಯಿಂದ ರಾರಾಜಿಸುತ್ತಿವೆ.

    ವರ್ಲಿ ಕಲೆ ಮೂಲ ಜ್ಯಾಮಿತೀಯ ಆಕಾರಗಳ ಒಂದು ಗುಂಪು. ವೃತ್ತ, ತ್ರಿಕೋನ ಮತ್ತು ಚೌಕಕಾರದಲ್ಲಿ ಇರುತ್ತದೆ. ಚುನಾವಣೆ ವೇಳೆಯಲ್ಲಿ ಮತದಾರರನ್ನು ಆಕರ್ಷಿಸಲು ಚಿತ್ರ ಕಲಾವಿದರು ಪ್ರಕೃತಿ ಸೊಬಗು, ಗ್ರಾಮೀಣ ಜಾನಪದ, ಧಾರ್ಮಿಕ ಪರಂಪರೆ, ಐತಿಹಾಸಿಕ ಸ್ಥಳಗಳನ್ನು ಗೋಡೆಯ ಮೇಲೆ ಬಿಡಿಸಿದ್ದಾರೆ.

    ಇದನ್ನೂ ಓದಿ : ಎನ್‌ಆರ್‌ಐ ಮತದಾರರ ಸೆಳೆಯಲು ಜಿಲ್ಲಾ ಸ್ವೀಪ್ ಸಮಿತಿ ವಿನೂತನ ಪ್ರಯತ್ನ

    ಕುಕನೂರು, ತಳಕಲ್, ರಾಜೂರಿನ ಮಾದರಿ ಮತಗಟ್ಟೆ, ದ್ಯಾಂಪೂರು, ಕುಕನೂರು ಸಖಿ ಮತಗಟ್ಟೆ, ಇಟಗಿಯ ಯುವ ಮತಗಟ್ಟೆ ಕೇಂದ್ರ, ಕುಕನೂರಿನ ಅಂಗವಿಕಲ ಸ್ನೇಹಿ ಮತಗಟ್ಟೆ ಕೇಂದ್ರಗಳು ವರ್ಲಿ ಪೇಂಟಿಂಗ್‌ನಿಂದ ಕಂಗೊಳಿಸುತ್ತಿದ್ದು, ಜನರನ್ನು ಸೆಳೆಯುತ್ತಿವೆ.

    ವಿವಿಧ ಕಾರ್ಯಕ್ರಮ ಮೂಲಕ ಮತದಾರರಲ್ಲಿ ಜಾಗೃತಿ

    ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಸ್ವೀಪ್ ಸಮಿತಿ ಕಲಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ ಹಲವು ವಿವಿಧ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    ಗ್ರಾಪಂ ಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದು, ಮತಗಟ್ಟೆಗಳಿಗೆ ವರ್ಲಿ ಕಲೆ ಸ್ಪರ್ಶ ನೀಡಿರುವುದು ಮತ್ತೊಂದು ವಿಶೇಷವಾಗಿದೆ.

    ಕುಕನೂರು ತಾಲೂಕಿನಲ್ಲಿ ಏಳು ಮತಗಟ್ಟೆಗಳನ್ನು ವರ್ಲಿ ಚಿತ್ರಕಲೆಯಿಂದ ಸಿಂಗರಿಸಲಾಗಿದೆ.ಅಗತ್ಯ ಸೌಲಭ್ಯ ಸಹ ಕಲ್ಪಿಸಲಾಗಿದೆ. ವರ್ಲಿ ಕಲೆ ಜನರನ್ನು ಸೆಳೆಯುತ್ತಿದ್ದು, ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು.
    | ರಾಮಣ್ಣ ದೊಡ್ಮನಿ, ತಾಪಂ ಇಒ, ಕುಕನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts