More

    ಆಶ್ರಯ ಮನೆಗಳಿಗೆ ಅನುಮೋದನೆ ನೀಡಿ; ಬೇವೂರು ಗ್ರಾಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

    ಯಲಬುರ್ಗಾ: ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಮನೆಗಳು ಹಂಚಿಕೆಯಾಗಿ ಹಲವು ದಿನಗಳು ಕಳೆದಿದ್ದು, ಅಧಿಕಾರಿಗಳು ಕೂಡಲೇ ಅನುಮೋದನೆ ನೀಡಬೇಕು ಎಂದು ಗ್ರಾಪಂ ಸದಸ್ಯರು ಒತ್ತಾಯಿಸಿದರು.

    ಇದನ್ನೂ ಓದಿರಿ: Mother Daughter Becomes President, Vice President Of Gram Panchayat, Chikkamagalur | ಗ್ರಾಮ ಪಂಚಾಯಿತಿ ಗದ್ದುಗೆ ಏರಿದ ಅಮ್ಮ ಮಗಳು

    ತಾಲೂಕಿನ ಬೇವೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

    ಜನವರಿ ತಿಂಗಳಲ್ಲಿ ಗ್ರಾಪಂಗೆ ಬಸವ ವಸತಿ ಯೋಜನೆ, ಅಂಬೇಡ್ಕರ್ ಆಶ್ರಯ ಯೋಜನೆಯಡಿ 96 ಮನೆಗಳು ಮಂಜೂರಾಗಿದ್ದು, ಶೀಘ್ರ ಅನುಮೋದನೆ ನೀಡಬೇಕೆಂದು ಸದಸ್ಯ ಭೀಮೇಶ ಕರಡಿ ಪಿಡಿಒ ಗಮನಕ್ಕೆ ತಂದರು.

    ನರೇಗಾ ಯೋಜನೆಯಡಿ 17 ಲಕ್ಷ ರೂ. ವೆಚ್ಚದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಕಾಮನ್ ವರ್ಕಿಂಗ್ ಶೇಡ್ ನಿರ್ಮಿಸಲು ನಿವೇಶನವಿದೆ. ಇದರ ಜವಾಬ್ದಾರಿ ಜಿಪಂ ಎಇಇಗೆ ವಹಿಸಿದ್ದು, ಟೆಂಡರ್ ಕರೆಯಬೇಕಿದೆ ಎಂದು ಪಿಡಿಒ ಅಬ್ದುಲ್ ಗಫರ್ ತಿಳಿಸಿದರು.

    ಬೇವೂರು ಮುಖ್ಯರಸ್ತೆಯಿಂದ ಕೊಂಡದ ಮಲ್ಲೇಶ್ವರ ದೇವಸ್ಥಾನವರೆಗೆ ಸಿಟಿ ಲೇಟ್ಸ್ ಹಾಕಲಾಗಿದ್ದು, ಇದೂವರೆಗೂ ಬೆಳಕು ಇಲ್ಲ. ಗುತ್ತಿಗೆದಾರರಿಗೆ ತಿಳಿಸಿ ಸರಿಪಡಿಸಬೇಕೆಂದು. ಮಾರುತೇಶ್ವರ, ದುರ್ಗಾದೇವಿ ದೇವಸ್ಥಾನ ಹತ್ತಿರ ಹೈಮಾಸ್ಟ್ ದೀಪ ಬೆಳಗುತ್ತಿಲ್ಲ ಎಂದು ಸದಸ್ಯರಾದ ಪ್ರಕಾಶ ತಳವಾರ, ಭೀಮೇಶ ಕರಡಿ ಆರೋಪಿಸಿದರು.

    ಎಲ್ಲ ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಯಲಿವೆ ಎಂದು ಪಿಡಿಒ ತಿಳಿಸಿದರು. ಇದೇ ವೇಳೆ 27 ಲಕ್ಷ ರೂ. ವೆಚ್ಚದಲ್ಲಿ ಮಹಿಳೆಯರಿಗೆ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

    ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳೆಗಾರ, ಉಪಾಧ್ಯಕ್ಷೆ ಲಕ್ಷ್ಮವ್ವ ಚುಕ್ಕಾಡಿ, ಸದಸ್ಯರಾದ ಮಾರುತಿ ಚರಾರಿ, ಸೋಮಣ್ಣ ಇಂಗಳದಾಳ, ಸೋಮಲಿಂಗಪ್ಪ ಕೊಳಜಿ, ಇಮಾಮ್‌ಸಾಬ್ ವಾಲಿಕಾರ, ಶೇಖಪ್ಪ ಲಮಾಣಿ, ಬೀರಪ್ಪ ಬನ್ನಿ, ಯಮನಪ್ಪ ಕಡಾಕಡಿ, ರುದ್ರಪ್ಪ ವದ್ನಾಳ, ಮಲ್ಲಪ್ಪ ಗೊಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts