More

    ನಾಡದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಿ; ಹಾಲುಮತ ಸಮುದಾಯ ಆಗ್ರಹ


    ರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ಆಕ್ರೋಶ


    ಯಲಬುರ್ಗಾ: ಬೆಳಗಾವಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ದೇಶದ್ರೋಹಿಗಳನ್ನು ಬಂಧಿಸಿ, ಗಡಿಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದ ಕನಕದಾಸ ವೃತ್ತದಲ್ಲಿ ಮಂಗಳವಾರ ಹಾಲುಮತ ಸಮುದಾಯ ಸೇರಿದಂತೆ ವಿವಿಧ ಸಮುದಾಯದವರು ಪ್ರತಿಭಟನೆ ನಡೆಸಿದರು.

    ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಭಂಡತನ ಪ್ರದರ್ಶಿಸುತ್ತಿರುವ ಎಂಇಎಸ್ ಅನ್ನು ನಿಷೇಧಿಸಬೇಕು. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ನಾಡದ್ರೋಹಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿದರು.

    ಮುಖಂಡ ಹನುಮಂತಪ್ಪ ಹನುಮಾಪುರ ಮಾತನಾಡಿ, ಹಾಲುಮತ ಸಮುದಾಯದ ಮಹನೀಯರ ಮೇಲೆ ಪದೇಪದೆ ಅಗೌರವ ತೋರುತ್ತಿರುವುದು ಸಲ್ಲ. ಸಮಾಜದಲ್ಲಿ ಅಶಾಂತಿ ಕದಡುವ ಕೆಲಸ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಬೇಕು. ಸರ್ಕಾರ ಮಹಾತ್ಮರ ಪುತ್ಥಳಿಗಳ ರಕ್ಷಣೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

    ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಬಾವಿ, ಎಚ್.ಎಚ್.ಕುರಿ, ಈಶ್ವರ ಅಟಮಾಳಗಿ, ಶಿವು ರಾಜೂರು, ವಸಂತ ಬಾವಿಮನಿ, ದೊಡ್ಡಯ್ಯ ಗುರುವಿನ್, ರಸೂಲ್ ಸಾಬ್ ದಮ್ಮೂರು, ಶಿವಕುಮಾರ ನಾಗನಗೌಡ್ರ, ಸಾವಿತ್ರಿ ಶರಣಪ್ಪ ಗೊಲ್ಲರ್, ಕೆ.ಆರ್.ಬೆಟಗೇರಿ, ಸುರೇಶ ಜೋಗಿನ್, ರಮೇಶ ದಂಡಿನ, ಯಲ್ಲಪ್ಪ ಹುನಗುಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts