More

    ಯಕ್ಷಗಾನ ಶುದ್ಧ ಕನ್ನಡ ಕಲೆ

    ಹೊಸನಗರ: ಅತ್ಯಂತ ಬಡತನ ಇದ್ದಾಗಲೂ ಕನ್ನಡದ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿರುವ ಹಿರಿಮೆ ಯಕ್ಷಗಾನ ಕಲಾವಿದರಿಗೆ ಸಲ್ಲುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಯಕ್ಷ ಸಂಗಮ ಬಳಗವು ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಯಕ್ಷ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಣಕ್ಕಾಗಿ ಕಲೆಯಲ್ಲ ಬದಲಾಗಿ ಕಲೆಗಾಗಿ ಬದುಕು ಎನ್ನುವುದನ್ನು ತೋರಿಸಿಕೊಟ್ಟ ಕೀರ್ತಿ ಯಕ್ಷಗಾನಕ್ಕೆ ಸಲ್ಲುತ್ತದೆ. ಸಿನಿಮಾಕ್ಕೂ, ಆಶು ಕಲೆಯಾಗಿರುವ ಯಕ್ಷಗಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಲಾವಿದನ ಶ್ರೇಷ್ಠತೆ ತಿಳಿಯುವುದು ಇಂತಹ ಕಲೆಯಲ್ಲಿ ಮಾತ್ರ. ಇಂದಿಗೂ ಎಲ್ಲ ಯಕ್ಷ ಕಲಾವಿದರ ಜೀವನ ಸಂತೋಷವಾಗಿಲ್ಲ. ಆದರೆ ರಂಗದಲ್ಲಿ ನಮಗೆ ಸಂತೋಷ ನೀಡುತ್ತಿದ್ದಾರೆ. ಇಂದಿಗೂ ಶುದ್ಧ ಕನ್ನಡದ ಏಕೈಕ ಕಲೆಯಾಗಿ ಯಕ್ಷಗಾನ ಉಳಿದುಬಂದಿದೆ ಎಂದರು.
    ಬಡಗು ತಿಟ್ಟಿನ ಖ್ಯಾತ ಭಾಗವತ ರಾಘವೇಂದ್ರ ಜನ್ಸಾಲೆ, ಯಕ್ಷ ಸಂಗಮ ಬಳಗದ ನಾಗರಾಜ್ ಕುಸುಗುಂಡಿ, ರಾಜಶ್ರೀ ಕಾರಣಗಿರಿ, ಸತೀಶ್ ರಿಪ್ಪನ್‌ಪೇಟೆ, ಗಾಯಕ ಸುರೇಶ್ ಇತರರಿದ್ದರು. ಅತಿಥಿ ಕಲಾವಿದರು ಕಣಾರ್ಜುನ ಕಾಳಗ ಮತ್ತು ಶಶಿಪ್ರಭೆ ಪ್ರಸಂಗದ ಪ್ರದರ್ಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts