More

    ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ: ಮಕ್ಕಳೆಂದೂ ನೋಡದೆ ತಡೆ; ವಿಡಿಯೋ ವೈರಲ್

    ಬೆಂಗಳೂರು: ಮಕ್ಕಳಿಂದಲೇ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವೊಂದನ್ನು ಪೊಲೀಸರ ಮೂಲಕ ನಿಲ್ಲಿಸಿದ ಪ್ರಕರಣವೊಂದು ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರು ಎಂಬಲ್ಲಿ ಈ ಪ್ರಕರಣ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.

    ಇಲ್ಲಿನ ಮಹಾಬಲ ಹೇರಿಕುದ್ರು ಎಂಬವರು ಸುಮಾರು ಐದು ವರ್ಷಗಳಿಂದ ಸ್ಥಳೀಯ ಹವ್ಯಾಸಿ ತಂಡಗಳ ಪ್ರೋತ್ಸಾಹಕ್ಕಾಗಿ ನವೆಂಬರ್ ತಿಂಗಳಲ್ಲಿ 10 ದಿವಸ ದಿನಕ್ಕೊಂದರಂತೆ ಹತ್ತು ತಂಡಗಳ ಯಕ್ಷಗಾನ ಮಾಡಿಕೊಂಡು ಬರುತ್ತಿದ್ದಾರೆ. ಅದರ ಭಾಗವಾಗಿ ಶನಿವಾರ 15 ವರ್ಷಗಳ ಒಳಗಿನ ಮಕ್ಕಳಿಂದ ಪ್ರಸಂಗವೊಂದರ ಪ್ರದರ್ಶನ ಹಮ್ಮಿಕೊಂಡಿದ್ದು, ಅದನ್ನು ಪೊಲೀಸರ ಮೂಲಕ ತಡೆಯಲಾಗಿದೆ.

    ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಉದಯ ಪೂಜಾರಿ ಎಂಬವರ ದೂರಿನ ಮೇರೆಗೆ ಪೊಲೀಸರು ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ್ದು, ಅನಿವಾರ್ಯವಾಗಿ ಪ್ರಸಂಗವನ್ನು ಇಲ್ಲಿಗೇ ನಿಲ್ಲಿಸಲಾಗುತ್ತಿದೆ ಎಂದು ಹೇಳಿ ಯಕ್ಷಗಾನ ಪ್ರದರ್ಶನವನ್ನು ಮೊಟಕುಗೊಳಿಸಲಾಗಿತ್ತು.

    ಇದನ್ನೂ ಓದಿ: ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಯಕ್ಷಗಾನಾಭಿಮಾನಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಣ್ಣ ಮಕ್ಕಳ ಯಕ್ಷಗಾನವಾಗಿದ್ದು, ಭಾಗವತಿಕೆ ಮಾಡುವ ಬಾಲಕನಿಗೆ ತಲೆ ಸುತ್ತು ಬಂದು 15 ನಿಮಿಷ ತಡವಾಗಿ ಯಕ್ಷಗಾನ ಶುರುವಾಗಿತ್ತು. ಹೀಗಾಗಿ 10.30ರಲ್ಲಿ ಮುಗಿಯಬೇಕಿದ್ದ ಯಕ್ಷಗಾನ ಮುಗಿಯುವುದು ತಡವಾಗಿತ್ತು. ಆಗ 10:30ರ ಸುಮಾರಿಗೆ ಪೊಲೀಸರಿಗೆ ದೂರು ನೀಡಿದ್ದ ಉದಯ ಪೂಜಾರಿ, ಪೊಲೀಸರ ಮೂಲಕ ಯಕ್ಷಗಾನ ನಿಲ್ಲಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಇನ್ನೇನು 15-20 ನಿಮಿಷಗಳಲ್ಲಿ ಮುಗಿಯಬಹುದಾಗಿದ್ದ ಆಟವನ್ನು ಆರಕ್ಷಕರು ನಿಲ್ಲಿಸಿದ್ದು ಖಂಡನೀಯ. ಅಲ್ಲಿ ನಡೆಯುತ್ತಿದ್ದುದು ನಮ್ಮ ಭವಿಷ್ಯದ ಯಕ್ಷರತ್ನಗಳ ಯಕ್ಷಗಾನ ಪ್ರದರ್ಶನ. ಊರಿನ ಪಂಚರು ಆರಕ್ಷಕರೊಂದಿಗೆ ಪಂಚಾಯತಿ ನಡೆಸಿ ಯಕ್ಷಗಾನ ಪೂರ್ಣಗೊಳ್ಳುವಂತೆ ನೋಡಿಕೊಂಡಿದ್ದರೆ ಆ ಮಕ್ಕಳಿಗೆ ಆದ ಘಾಸಿ ತಡೆಯಬಹುದಿತ್ತು ಎಂದು ಯಕ್ಷಗಾನಾಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಇದೇ ಮೊದಲಲ್ಲ…

    ಯಕ್ಷಗಾನ ನಡೆಯುತ್ತಿರುವುದನ್ನು ನಿಲ್ಲಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಮಂಗಳೂರಿನಲ್ಲೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಲೇಡಿಹಿಲ್ ಸಭಾಭವನದಲ್ಲಿ ಪತ್ರಕರ್ತರ ಸಂಘದ ಸದಸ್ಯರು ಹಮ್ಮಿಕೊಂಡಿದ್ದ ಯಕ್ಷಗಾನ ಪ್ರದರ್ಶನದ ಮಧ್ಯೆ ಸಭಾಂಗಣಕ್ಕೆ ಪ್ರವೇಶಿಸಿ ಮೈಕ್​ ಕಿತ್ತುಕೊಂಡು ಲೈಟ್ ಆಫ್ ಮಾಡಿ ಅಡ್ಡಿಪಡಿಸಿದ್ದ ಪ್ರಕರಣ ನಡೆದಿದೆ. ದೊಡ್ಡ ಹಿನ್ನೆಲೆ ಇರುವ ಯಕ್ಷಗಾನಕ್ಕೆ ಪದೇಪದೆ ಹೀಗಾಗುತ್ತಿರುವುದರ ವಿರುದ್ಧ ಯಕ್ಷಗಾನಾಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ಈ ಅಪಾರ್ಟ್​ಮೆಂಟ್​​ನಲ್ಲಿ ನಾಯಿಯನ್ನು ಸಾಕಲು 10 ಸಾವಿರ ರೂ. ಕೊಡಬೇಕಂತೆ!

    ಇಬ್ಬರ ಮಧ್ಯೆ ಮನಸ್ತಾಪ ಬಂದ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ: ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts