More

    ಯಕ್ಕನಹಳ್ಳಿ ಬಸವೇಶ್ವರ ಸ್ವಾಮಿಯ ಅದ್ದೂರಿ ತೇರು

    ಹೊನ್ನಾಳಿ: ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿಗುರುವಾರ, ಬಸವೇಶ್ವರ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
    ರಥೋತ್ಸವ ವೇಳೆ ಗಡ್ಲವೇರ ತಿಪ್ಪೇಶ್ ಸಂಗಡಿಗರು ಪುರವಂತಿಕೆ ಒಡಪು ಹೇಳಿದರು. ಸಾವಿರಾರು ಭಕ್ತರು ಬಸವೇಶ್ವರ ರಥ ಎಳೆದು ಭಕ್ತಿ ಸಮರ್ಪಿಸಿದರು.
    ಸಂಜೆ 4ಕ್ಕೆ ಎತ್ತುಗಳ ಮೆರವಣಿಗೆ, ಓಕಳಿ ನಡೆದ ನಂತರ ಶ್ರೀ ಬಸವೇಶ್ವರ ಸ್ವಾಮಿ ಅಡ್ಡಪಲ್ಲಕ್ಕಿ ಮಹೋತ್ಸವ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು.
    ಮುನ್ನಾ ದಿನ ಬುಧವಾರ ಬೆಳಗ್ಗೆ ಉಚ್ಛಾಯ ಮಹೋತ್ಸವ ನಡೆಯಿತು. ಮಧ್ಯಾಹ್ನ ಕೂಲಂಬಿ ಶ್ರೀ ದುರ್ಗಮ್ಮ, ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಯರೇಚಿಕ್ಕನಹಳ್ಳಿ ಶ್ರೀ ಬಸವೇಶ್ವರ ದೇವರುಗಳನ್ನು ವಿವಿಧ ವಾದ್ಯಗಳೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
    ಸಂಜೆ ಮಹಿಳೆಯರು ಬಾಯಿ ಬೀಗದ ಸೇವೆ, ಮಕ್ಕಳು ಉರುಳು ಸೇವೆ ಸಮರ್ಪಿಸಿದರು. ನಂತರ ಜವಳ ಕಾರ್ಯಕ್ರಮ ನಡೆದವು. ರಾತ್ರಿ ಶ್ರೀ ಬಸವೇಶ್ವರ-ನೀಲಮ್ಮ ದೇವರಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿಶೇಷ ಪೂಜೆ ನೆರವೇರಿತು.
    ಯಕ್ಕನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ರಂಗಮ್ಮ, ಮಾಜಿ ಅಧ್ಯಕ್ಷ ವೈ.ಕೆ. ದಯಾನಂದ, ಸದಸ್ಯರಾದ ಎಸ್.ಎಲ್. ಜಯಪ್ಪ, ದಿನೇಶ್, ಮಂಜುಳಾ ತಿಪ್ಪೇಶ್, ಅನುಸೂಯಮ್ಮ ಚಂದ್ರಪ್ಪ, ಪವಿತ್ರ ರೇವಣಸಿದ್ದಪ್ಪ, ರೇಣುಕಮ್ಮ, ರಮೇಶ್‌ನಾಯ್ಕ, ಬಸವೇಶ್ವರಸ್ವಾಮಿ ಸಮಿತಿ ಅಧ್ಯಕ್ಷ ಎಸ್.ಎಂ. ನಾಗಪ್ಪ, ಜಿಪಂ ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಬಸವೇಶ್ವರ ರೈಸ್‌ಮಿಲ್ ಮಾಲೀಕ ಟಿ.ಎಸ್. ಬಸವರಾಜಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಟ್ಟೆರ ನಾಗರಾಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗದ್ದೇರ ಮಹದೇವಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts