More

    ಯಡ್ರಾಮಿ: ಕಾಲುವೆ ನೀರು ಹರಿಸದ ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು

    ಯಡ್ರಾಮಿ: ಮಲ್ಲಾಬಾದ್ ಏತ ನೀರಾವರಿ ಲಿಫ್ಟ್-1ರ ಕಾಲುವೆಗೆ ನೀರು ಹರಿಸದ ಅಧಿಕಾರಿಗಳಿಗೆ ರೈತರು ದಿಗ್ಬಂಧನ ಹಾಕಿದ ಪ್ರಸಂಗ ಬಿಳವಾರ ಗ್ರಾಮದಲ್ಲಿ ಜರುಗಿದೆ.

    ಮಂಗಳವಾರ ಮಧ್ಯಾಹ್ನ ಕಾಲುವೆ ಪರಿಶೀಲಿಸಲು ಕೆಬಿಜೆಎನ್‌ಎಲ್ ಇಇ ಮಲ್ಲಿಕಾರ್ಜುನ ಮದನಿ, ಜೆಇ ಶರಣಪ್ಪ ಆಗಮಿಸಿದ್ದರು. ಈ ವೇಳೆ ಸುತ್ತುವರಿದ ರೈತರು ಕಾಲುವೆಗೆ ನೀರು ಹರಿಸುವವರೆಗೂ ನಿಮ್ಮನ್ನು ಬಿಡುವುದಿಲ್ಲ ಎಂದು ಹೇಳಿ ಕಾಲುವೆಯ ಮೇಲೆಯೇ ತಡೆದಿದ್ದಾರೆ. ಬುಧವಾರ ತಡರಾತ್ರಿವರೆಗೂ ದಿಗ್ಬಂಧನ ಮುಂದುವರಿಯಿತು.

    ಮಲ್ಲಾಬಾದ್​ ಏತ ನಿರಾವರಿ ಲಿಫ್ಟ್- 1 ಕಾಲುವೆ ಮಲ್ಲಾಬಾದ್‌ನಿಂದ ಬಿಳವಾರವರೆಗೆ 8.6 ಕಿಮೀ ಹೊಂದಿದೆ. ಕಾಲುವೆಗೆ ನೀರು ಹರಿಸಲು ಕೆಬಿಜೆಎನ್‌ಎಲï ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ನೀರು ಬಿಟ್ಟಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡು ಅಧಿಕಾರಿಗಳನ್ನು ಕೂಡಿಹಾಕಿದ್ದೇವೆ. ಇಷ್ಟಾದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಕಿಡಿಕಾರಿದರು.

    ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ 28 ಗಂಟೆಯಾದರೂ ಯಾವೊಬ್ಬ ಮೇಲಾಧಿಕಾರಿಯೂ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲ. ನಮ್ಮನ್ನೆ ಕಚೇರಿಗೆ ಬರಲು ಹೇಳುತ್ತಿದ್ದಾರೆ. ಕಾಲುವೆಗೆ ನೀರು ಬರುವವರೆಗೂ ಸ್ಥಳ ಬಿಟ್ಟು ಹೋಗಲ್ಲ, ಅಧಿಕಾರಿಗಳನ್ನು ಬಿಡಲ್ಲ ಎಂದು ಪಟ್ಟು ಹಿಡಿದರು.

    ಪ್ರಮುಖರಾದ ಮಲ್ಲಣ್ಣಗೌಡ ಕೊಡಮನಳ್ಳಿ, ಶರಣು ಪೂಜಾರಿ ಗುಳ್ಯಾಳ, ರಾಜು ಪೂಜಾರಿ, ರಾಮನಗೌಡ ನಾಗರಳ್ಳಿ, ಚಾಂದ್ ಪಟೇಲ್ ಪೊಲೀಸ್ ಬಿರಾದಾರ, ಮೌನೇಶ ತಳಗೇರಿ, ದೇವಪ್ಪ, ಜಟ್ಟೆಪ್ಪ ಪೂಜಾರಿ, ಬಲವಂತರಾಯ ಸುರಪುರ, ಗೌಡಪ್ಪಗೌಡ ಅಂಬರಖೇಡ, ಹಣಮಂತ ದಂಡುಲ್ಕರ್ ಬಿಳವಾರ, ಪರಶುರಾಮ ದಂಡುಲ್ಕರ್, ನಬಿಪಟೇಲï ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts