More

    ಲಾಕ್​ಡೌನ್​ ನಡುವೆಯೂ ಅದ್ಧೂರಿಯಾಗಿ ನೆರವೇರಿದ ರಥೋತ್ಸವ! ಕಣ್ಮುಚಿ ಕುಳಿತ ಯಾದಗಿರಿ ಜಿಲ್ಲಾಡಳಿತ

    ಯಾದಗಿರಿ: ಮಹಾಮಾರಿ ಕರೊನಾ ವೈರಸ್​​ ನಿಯಂತ್ರಿಸಲು ಸರ್ಕಾರ ರಾಜ್ಯಾದ್ಯಂತ ಲಾಕ್​ಡೌನ್​ನಂತಹ ಕಠಿಣ ನಿಯಮ ಜಾರಿ ಮಾಡಿದ್ದರೂ ಅದನ್ನು ನಿಭಾಯಿಸುವಲ್ಲಿ ಯಾದಗಿರಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.

    ಲಾಕ್​ಡೌನ್​ ಸಮಯದಲ್ಲಿ ಜಾತ್ರೆಗಳ ಮೇಲೆ ಜಾತ್ರೆ ನಡೆಯುತ್ತಿದ್ದರೂ ಯಾದಗಿರಿ ಜಿಲ್ಲಾಡಳಿತ ಕಣ್ಣು ಮುಚ್ಟಿ ಕುಳಿತಿದೆ. ಪೊಲೀಸ್​ ಇಲಾಖೆಯಂತೂ ನಿದ್ರೆ ಜಾರಿದೆಯೇನೋ ಎಂಬ ಪ್ರಶ್ನೆ ಮೂಡುವಂತಾಗಿದೆ.

    ಏಕೆಂದರೆ ಲಾಕ್​ಡೌನ್ ನಡುವೆಯೇ ಯಾದಗಿರಿಯ ಸುರಪುರ ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಭೀಮಾಶಂಕರ್ ದೇವರ ಅದ್ದೂರಿ ರಥೋತ್ಸವ ನಡೆದಿದೆ.

    ಕಠಿಣ ನಿಯಮಗಳಿಗೂ ಕ್ಯಾರೇ ಎನ್ನದೆ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಮಂದಿ ರಥೋತ್ಸವದಲ್ಲಿ ಭಾಗಿಯಾಗಿ ಕೊವಿಡ್ ನಿಯಮ ಮುರಿದಿದ್ದಾರೆ. ಆಘಾತಕಾರಿ ವಿಚಾರವೆಂದರೆ ಯಾವೊಬ್ಬರು ಸಹ ಮಾಸ್ಕ್ ಅಥವಾ ಸಾಮಾಜಿಕ ಅಂತರವಾಗಲಿ ಕಾಯ್ದುಕೊಂಡಿಲ್ಲ.

    ಪೊಲೀಸರ ಕಣ್ಣು ತಪ್ಪಿಸಿ ಗ್ರಾಮಸ್ಥರು ರಥೋತ್ಸವ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬಳಿಚಕ್ರ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ನಡೆದಿತ್ತು. ಇದೀಗ ಸೋಮವಾರ ಚಂದ್ಲಾಪುರ ಗ್ರಾಮದಲ್ಲಿ ಅದ್ದೂರಿ ರಥೋತ್ಸವ ನಡೆದಿದೆ. ಇದೆಲ್ಲ ಗೊತ್ತಿದ್ದು ಜಿಲ್ಲಾಡಳಿತ ಕಣ್ಣು ಮುಚ್ಟಿ ಕುಳಿತಿದೆ.

    ಸೋಲಿನ ಪರಾಮರ್ಶೆಗೆ ಕಾಂಗ್ರೆಸ್​ನಿಂದ ತಂಡ ರಚನೆ

    2ನೇ ಅಲೆಯಲ್ಲಿ ಮಹಿಳೆಯರಲ್ಲಿ ಸೋಂಕು ಹೆಚ್ಚಳ!; ಕಳೆದ ವರ್ಷಕ್ಕಿಂತ ಮಹಿಳಾ ಸೋಂಕಿತ ಪ್ರಮಾಣ ಶೇ. 4 ಏರಿಕೆ

    ಎಡವಟ್ಟು ಮಾರ್ಗಸೂಚಿ ಫಜೀತಿ: ಪೊಲೀಸರಿಗೆ ಲಾಠಿ ಪ್ರಹಾರವಷ್ಟೇ ಪರಿಹಾರ, ಸ್ಪಷ್ಟತೆ ಸಿಗದ ವಿನಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts