More

    2ನೇ ಅಲೆಯಲ್ಲಿ ಮಹಿಳೆಯರಲ್ಲಿ ಸೋಂಕು ಹೆಚ್ಚಳ!; ಕಳೆದ ವರ್ಷಕ್ಕಿಂತ ಮಹಿಳಾ ಸೋಂಕಿತ ಪ್ರಮಾಣ ಶೇ. 4 ಏರಿಕೆ

    ಹೈದರಾಬಾದ್: ಮಾರಕ ಕರೊನಾ 2ನೇ ಅಲೆ ವೇಳೆ ಮಹಿಳೆಯರಲ್ಲಿ ಸೋಂಕು ಹೆಚ್ಚುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಸಂಖ್ಯೆಗಳಿಂದ ತಿಳಿದು ಬಂದಿದೆ. ತೆಲಂಗಾಣದಲ್ಲಿ ಪ್ರಸ್ತುತ ಒಟ್ಟು ಸೋಂಕಿತರಲ್ಲಿ ಮಹಿಳೆಯರ ಪಾಲು ಶೇಕಡ 38.5. ಕಳೆದ ವರ್ಷ ಜುಲೈನಲ್ಲಿ ಈ ಪ್ರಮಾಣ ಸುಮಾರು ಶೇ. 34 ಆಗಿತ್ತು.

    ರಾಷ್ಟ್ರ ಮಟ್ಟದಲ್ಲಿ ಮಹಿಳಾ ಸೋಂಕಿತರ ಪ್ರಮಾಣ 35% ಆಗಿದ್ದು ತೆಲಂಗಾಣಕ್ಕಿಂತ ಸ್ವಲ್ಪ ಉತ್ತಮವಾಗಿದೆ. ತೀವ್ರ ನಿಗಾ ವಿಭಾಗಕ್ಕೆ ದಾಖಲಾಗುವವರ ಸಂಖ್ಯೆ ಹಾಗೂ ಆ ಪೈಕಿ ಮಹಿಳಾ ರೋಗಿಗಳ ಪ್ರಮಾಣವನ್ನು ಗಮನಿಸುತ್ತಿದ್ದೇವೆ. ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಆದರೆ, ಮರಣ ಪ್ರಮಾಣ ಪುರುಷರು ಮತ್ತು ಮಹಿಳೆಯರಲ್ಲಿ ಸಮನಾಗಿದೆ ಎಂದು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಕಿರಣ್ ಮಾದಲ ಹೇಳಿದ್ದಾರೆ. ಹಿಂದೆ ಐಸಿಯು ದಾಖಲಾಗುವ ಮಹಿಳಾ ರೋಗಿಗಳ ಪ್ರಮಾಣ ಶೇ. 33 ಆಗಿತ್ತು. ಮಹಿಳೆಯರಲ್ಲೂ ಅಧಿಕ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆಯೆಂದರೆ ವೈರಸ್​ನ ವರ್ತನೆ ಬದಲಾಗಿದೆ ಎಂದೇ ಅರ್ಥ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆ ಹೋಲಿಕೆ ಮಾಡಿದರೆ ಈಗಲೂ ದೇಶದಲ್ಲಿ ಮಹಿಳಾ ಸೋಂಕಿತರ ಸಂಖ್ಯೆ ಕಡಿಮೆ. ಆದರೆ ಎರಡನೇ ಅಲೆಯಲ್ಲಿ ಇದು ಹೆಚ್ಚುತ್ತಿರುವುದು ಕಂಡುಬಂದಿದೆ.

    *ನಿಯಮ ಪಾಲನೆ*

    ಕರೊನಾ ಹರಡುವುದನ್ನು ತಡೆಯಲು ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಸಾಮಾನ್ಯವಾಗಿ ಮಹಿಳೆಯರೇ ಪುರುಷರಗಿಂತ ಚೆನ್ನಾಗಿ ಪಾಲಿಸುತ್ತಾರೆ. ಆದರೆ ಈಗ ಯುವತಿಯರು ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಎಎಸ್​ಸಿಐ ಪ್ರೊಫೆಸರ್ ಡಾ. ಸುಬೋಧ್ ಕಂದಮೂತನ್ ಹೇಳಿದ್ದಾರೆ. ಕುಟುಂಬದ ಅನೇಕ ಸದಸ್ಯರು ಕರೊನಾ ಸೋಂಕಿಗೆ ತುತ್ತಾಗುತ್ತಿದ್ದರೂ ಆ ಪೈಕಿ ಮಹಿಳೆಯರ ಪ್ರಮಾಣ ಕಡಿಮೆಯಾಗಿದೆ. ಆದಾಗ್ಯೂ ಮಹಿಳೆಯರು ತಮ್ಮ ಜಾಗೃತೆಯನ್ನು ಮರೆಯಬಾರದು ಎಂಬುದು ಅವರ ಸಲಹೆಯಾಗಿದೆ.

    2ನೇ ಅಲೆಯಲ್ಲಿ ಮಹಿಳೆಯರಲ್ಲಿ ಸೋಂಕು ಹೆಚ್ಚಳ!; ಕಳೆದ ವರ್ಷಕ್ಕಿಂತ ಮಹಿಳಾ ಸೋಂಕಿತ ಪ್ರಮಾಣ ಶೇ. 4 ಏರಿಕೆ

    *ಬಿಹಾರದಲ್ಲೇ ಅಧಿಕ*

    ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ರಾಷ್ಟ್ರೀಯ ಮಾಹಿತಿ ಪ್ರಕಾರ ಜೂನ್-ಜುಲೈ ಅವಧಿಯಲ್ಲಿ ಬಿಹಾರ ರಾಜ್ಯದಲ್ಲೇ ಅತ್ಯಧಿಕ ಮಹಿಳಾ ಸೋಂಕಿತರಿದ್ದಾರೆ. ರಾಜ್ಯದ ಒಟ್ಟು ಕೋವಿಡ್-19 ಸೋಂಕಿತರಲ್ಲಿ ಶೇಕಡ 42ರಷ್ಟು ಮಹಿಳೆಯರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts