More

    ಯಾದಗಿರಿಯಲ್ಲಿ ಗುಡುಗು ಸಹಿತ ಭಾರಿ ಮಳೆ! ಸಿಡಿಲು ಬಡಿದು ಹಸು ಸಾವು

    ಯಾದಗಿರಿ: ಜಿಲ್ಲೆಯಾದ್ಯಂತ ಇಂದು ಗುಡುಗು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಸ್ವಲ್ಪ ತಂಗಾಳಿಯನ್ನು ಮಳೆ ತಂದಿದ್ದರೆ, ಅದರೊಂದಿಗೆ ಕೆಲ ಸಮಸ್ಯೆಗಳನ್ನೂ ಸೃಷ್ಟಿಸಿ ಹೋಗಿದೆ.

    ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್​ ಕಂಬಗಳು ನೆಲಕ್ಕುರಳಿವೆ. ಸುಭಾಷ್​ ಚೌಕ್​ ಹತ್ತಿರವಿರುವ ಉಳ್ಳೆಸೂಗುರ್ ಕಾಂಪ್ಲೆಕ್ಸ್​ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಓರ್ವ ಮಹಿಳೆ ಗಾಯಾಳುವಾಗಿರುವುದಾಗಿ ಹೇಳಲಾಗಿದೆ. ಕಾಂಪ್ಲೆಕ್ಸ್ ಬಳಿ ಇದ್ದ ಹತ್ತಾರು ಬೈಕ್​ಗಳು ನುಜ್ಜುಗುಜ್ಜಾಗಿರುವ ಮಾಹಿತಿಯಿದೆ.

    ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಾಗಪ್ಪ ಹೆಸರಿನ ರೈತನಿಗೆ ಸೇರಿರುವ ಹಸುವೊಂದಕ್ಕೆ ಸಿಡಿಲು ಬಡಿದಿದ್ದು, ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ಯಾದಗಿರಿ-ಬೆಂಗಳೂರು ರಾಜ್ಯ ಹೆದ್ದರಿಯಲಿ ದೊಡ್ಡ ನೀಲಗಿರಿ ಮರವೊಂದು ಧರೆಗುರುಳಿದೆ. ರಸ್ತೆ ಮೇಲೆ ಮರ ಬಿದ್ದ ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಗ್ರಾಮಸ್ಥರ ನೆರವಿನಿಂದಾಗಿ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ದಿನಕ್ಕೆ 5 ಬಾಟಲಿ ಬಿಯರ್​ ಕುಡಿದು 46 ದಿನಗಳಲ್ಲಿ 18 ಕೆಜಿ ಇಳಿಸಿದ ಭೂಪ!

    ಆ ರೀತಿಯ ವಿಡಿಯೋವನ್ನು ಅಮ್ಮನಿಗೆ ಕಳುಹಿಸಿದ ಮಗಳು! ಇದೆಲ್ಲ ಆ್ಯಪ್​ ತಪ್ಪೆಂದು ಕ್ಷಮೆಯಾಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts