More

    ಮಾಜಿ ಶಾಸಕ ವೈ.ಎಸ್​.ವಿ.ದತ್ತ ಅವರು ರೈತರ ಜಮೀನಿಗೆ ತೆರಳಿ ಮಾಡಿದ ಕೆಲಸ ಮೆಚ್ಚುವಂಥದ್ದು..

    ಚಿಕ್ಕಮಗಳೂರು: ಲಾಕ್​ಡೌನ್​ನಿಂದಾಗಿ ರೈತರ ಪಾಡು ಸಂಕಷ್ಟಕ್ಕೀಡಾಗಿದೆ. ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದಂತಾಗಿದೆ. ರೈತರ ಪರವಾಗಿ ಸರ್ಕಾರ ನಿಂತಿದೆ. ಆದರೂ ಪ್ರತಿ ಹಳ್ಳಿಯ ರೈತರನ್ನು ತಲುಪುವುದು ಕೊಂಚ ಕಷ್ಟವೇ ಆಗುತ್ತಿದೆ.

    ಹೀಗಿರುವಾಗ ಮಾಜಿ ಶಾಸಕ ವೈ.ಎಸ್​.ವಿ.ದತ್ತ ಕಡೂರು ರೈತರ ನೆರವಿಗೆ ನಿಂತಿದ್ದಾರೆ. ಜಮೀನಿಗೇ ಹೋಗಿ ಅವರು ಬೆಳೆದ ಹಣ್ಣು, ತರಕಾರಿ ಖರೀದಿ ಮಾಡಿದ್ದಾರೆ.

    ಇದನ್ನೂ ಓದಿ: ಏರ್​ ಇಂಡಿಯಾದ ಐವರು ಪೈಲಟ್​ಗಳಲ್ಲಿ ಕರೊನಾ ಸೋಂಕು; ಚೀನಾವೇ ಮೂಲ…!

    ಸುಮಾರು ಒಂದೂವರೆ ಲಕ್ಷ ರೂ.ಮೌಲ್ಯದ 10 ಟನ್​ ಕಲ್ಲಂಗಡಿ, 3 ಟನ್​ ಟೊಮ್ಯಾಟೋವನ್ನು ಅದರ ಬೆಳೆಗಾರರಿಂದಲೇ ನೇರವಾಗಿ ಖರೀದಿಸಿ ಔದಾರ್ಯ ತೋರಿಸಿದ್ದಾರೆ.

    ಕಡೂರಿನ ಕೆಲವು ರೈತರು ತಮ್ಮ ಕಲ್ಲಂಗಡಿ, ಟೊಮ್ಯಾಟೋಗಳನ್ನೆಲ್ಲ ಮಾರಾಟ ಮಾಡಲು ಸಾಧ್ಯವಾಗದೆ ಜಮೀನಿನಲ್ಲಿಯೇ ಬಿಟ್ಟಿದ್ದರು. ಅವರಿಗೆಲ್ಲ ಹಣ ಪಾವತಿಸಿ ಖರೀದಿ ಮಾಡಿದ ವೈ.ಎಸ್​.ವಿ.ದತ್ತ, ಅದನ್ನು ಕಡೂರು, ಬೀರೂರು ಮತ್ತಿತರ ಕಡೆ ಉಚಿತವಾಗಿ ಹಂಚಲು ತೀರ್ಮಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಇದನ್ನೂ ಓದಿ: ಬೇಕರಿ ಮಾಲೀಕನ ಬಂಧನ..ಕಾರಣ ಅಂಗಡಿಯೆದುರು ಹಾಕಿದ್ದ ಒಂದು ಜಾಹೀರಾತು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts