More

    ಚೀನಾದ ಮೊಬೈಲ್​ಫೋನ್​ ಕಂಪನಿಯಿಂದ ಭಾರತಕ್ಕೆ ಮೋಸ; 5,551 ಕೋಟಿ ರೂ. ವಶ ಅಧಿಕೃತ

    ನವದೆಹಲಿ: ಚೀನಾ ಮೊಬೈಲ್​ಫೋನ್​ ಕಂಪನಿಯಿಂದ ಆರ್ಥಿಕ ಅಪರಾಧ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬೃಹತ್ ಮೊತ್ತವನ್ನು ವಶಪಡಿಸಿಕೊಂಡಿದೆ. ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮೊತ್ತ ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದಿರುವ ಇ.ಡಿ., ಈ ನಡೆ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿ ಇಂದು ಸಮರ್ಥಿಸಿಕೊಂಡಿದೆ.

    ಚೀನಾ ಮೂಲದ ಮೊಬೈಲ್​ಫೋನ್​ ಉತ್ಪಾದನಾ ಕಂಪನಿ ಆಗಿರುವ ಷಿಯೊಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್​ನಿಂದ ಏಪ್ರಿಲ್​ನಲ್ಲಿ 5,551 ಕೋಟಿ ರೂಪಾಯಿ ವಶಪಡಿಸಿಕೊಂಡಿರುವುದು ಸರಿಯಾಗಿದೆ ಎಂಬುದಾಗಿ ಫಾರಿನ್ ಎಕ್ಸ್​ಚೇಂಜ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​ (ಎಫ್​ಇಎಂಎ) ಒಪ್ಪಿದೆ ಎಂದು ಜಾರಿ ನಿರ್ದೇಶನಾಲಯ ಇಂದು ಖಚಿತಪಡಿಸಿದೆ.

    ಈ ಮೊಬೈಲ್​ಫೋನ್​ ಕಂಪನಿ ಭಾರತದಿಂದ ಹೊರಕ್ಕೆ ಅಕ್ರಮವಾಗಿ ಹಣವನ್ನು ರವಾನಿಸಿದೆ. ಹೀಗಾಗಿ ಈ ಕಂಪನಿ ವಿರುದ್ಧ ಫಾರಿನ್ ಎಕ್ಸ್​ಚೇಂಜ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​ (ಎಫ್​ಇಎಂಎ) ಅನುಸಾರ ಪ್ರಕರಣ ದಾಖಲಿಸಲಾಗಿದೆ. ಈ ಕಂಪನಿಯು ಚೀನಾ ಮೂಲದ ಷಿಯೊಮಿ ಮಾಲೀಕತ್ವದಲ್ಲಿದ್ದು, 2014ರಲ್ಲಿ ಭಾರತದಲ್ಲಿ ವಹಿವಾಟು ಆರಂಭಿಸಿತ್ತು. ನಂತರದ ವರ್ಷದಿಂದಲೇ ಭಾರತದಿಂದ ಹೊರಕ್ಕೆ ಹಣ ಕಳುಹಿಸಲು ಶುರು ಮಾಡಿತ್ತು ಎಂಬುದಾಗಿ ಇ.ಡಿ. ತಿಳಿಸಿದೆ.

    ಡಿ.ಕೆ.ಶಿವಕುಮಾರ್ ಡ್ಯಾನ್ಸ್ ಚಿತ್ರೀಕರಣ​ಕ್ಕೆ ಅಡ್ಡಿ, ಡ್ರೋಣ್ ಕ್ಯಾಮೆರಾ ಕಿತ್ತೊಯ್ದ ರಾಹುಲ್ ಭದ್ರತಾ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts