More

    ಕರೊನಾ ಲಾಕ್​ಡೌನ್​ ಎಫೆಕ್ಟ್​: ವುಹಾನ್​ ಯುವಕನ ತೂಕ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ!

    ಬೀಜಿಂಗ್​: ಚೀನಾದ ವುಹಾನ್​ ನಗರದಲ್ಲಿ ಹುಟ್ಟಿದ ಕರೊನಾ ವೈರಸ್​ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಕರೊನಾ ಕಪಿಮುಷ್ಠಿಯಿಂದ ಪಾರಾಗಲು ಎಲ್ಲ ರಾಷ್ಟ್ರಗಳು ಲಾಕ್​ಡೌನ್​ನಂತಹ ಕ್ರಮಗಳನ್ನು ತೆಗೆದುಕೊಂಡಿವೆ. ಲಾಕ್​ಡೌನ್​ನಿಂದ ಅನೇಕರು ಸಂಕಷ್ಟಕ್ಕೆ ಸಿಲುಕ್ಕಿದ್ದು, ಕರೊನಾದಿಂದ ಯಾವಾಗ ಮುಕ್ತಿ ಸಿಗುತ್ತದೆ ಎಂದು ಕಾದುಕುಳಿತ್ತಿದ್ದರೆ, ಚೀನಾದ ವುಹಾನ್​ ನಗರದ 26 ವರ್ಷದ ಅಸಾಮಿಯೊಬ್ಬ ಇದೇ ಸಮಯದಲ್ಲಿ ದೇಹ ಊದಿಸಿಕೊಂಡು ಎಲ್ಲ ಅಚ್ಚರಿಗೆ ಕಾರಣನಾಗಿದ್ದಾನೆ.

    ಕರೊನಾ ಲಾಕ್​ಡೌನ್​ ಎಫೆಕ್ಟ್​: ವುಹಾನ್​ ಯುವಕನ ತೂಕ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ!

    ವುಹಾನ್​ನಲ್ಲೂ ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಲಾಕ್​ಡೌನ್​ ಹೇರಲಾಗಿತ್ತು. ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಮಿಸ್ಟರ್​ ಜೌ ಎಂಬಾತ ಬರೋಬ್ಬರಿ 224 ಪೌಂಡ್​ (101 ಕೆ.ಜಿ) ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. ದಿಢೀರ್​ ದೇಹ ತೂಕದಿಂದ ಅನಾರೋಗ್ಯಕ್ಕೀಡಾಗಿರುವ ಜೌನನ್ನು ಈ ತಿಂಗಳ ಆರಂಭದಲ್ಲೇ ವುಹಾನ್​ ಆಸ್ಪತ್ರೆಗೆ ಆಂಬುಲೆನ್ಸ್​ ಮೂಲಕ ದಾಖಲಿಸಲಾಗಿದೆ. ಇದನ್ನೂ ಓದಿ: ಅನ್ಯ ಧರ್ಮದ ಯುವಕನ ಜತೆ ನಾಪತ್ತೆಯಾಗಿದ್ದ ಹಿಂದು ಯುವತಿ ಪತ್ತೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಆರೋಪಿ

    ಅಂದಹಾಗೆ ಜೌ ಒಟ್ಟು 616 ಪೌಂಡ್​ (279 ಕೆ.ಜಿ) ತೂಕವಿದ್ದಾರೆ. ಈ ಮೂಲಕ ವುಹಾನ್​ನ​ ಅತಿತೂಕದ ಮನುಷ್ಯ ಎಂಬ ಹೆಸರು ಗಳಿಸಿದ್ದಾರೆ. ಜೌ, ಇಂಟರ್ನೆಟ್​ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ. ಕರೊನಾ ಲಾಕ್​ಡೌನ್​ ಹೇರಿದ ಬಳಿಕ ಕೆಫೆ ನಿಲ್ಲಿಸಿ, ಮನೆಯಲ್ಲಿ ಉಳಿದುಕೊಂಡಿದ್ದ. ಮೊದಲೇ ದಪ್ಪಗಿದ್ದ ಜೌ, ತನ್ನ ಫ್ಲ್ಯಾಟ್​ನಿಂದ ಸುಮಾರು 5 ತಿಂಗಳು ಹೊರಗೆಲ್ಲೂ ಹೋಗದೇ ಇದ್ದುದ್ದರಿಂದ ದೇಹ ಮತ್ತಷ್ಟು ಬೆಳೆದಿದೆ.

    ಕರೊನಾ ಲಾಕ್​ಡೌನ್​ ಎಫೆಕ್ಟ್​: ವುಹಾನ್​ ಯುವಕನ ತೂಕ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ!

    ಜೌ ತೂಕದ ಬಗ್ಗೆ ಮಾತನಾಡಿರುವ ವುಹಾನ್​ನ ಜೋಂಗ್ನಾನ್​ ಆಸ್ಪತ್ರೆಯ ವೈದ್ಯರು, ಜೌ ತನ್ನ ದೇಹದ ತೂಕವನ್ನು ಇಳಿಸಿಕೊಳ್ಳಲು ಏನೇ ಪ್ರಯತ್ನ ಮಾಡಿದರೂ, ಇಡೀ ಜೀವನ ತನ್ನ ತೂಕದಿಂದಲೇ ಸಾಕಷ್ಟು ಹೋರಾಡಬೇಕಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಸೇಫ್ ರೂಮ್​​ ರಹಸ್ಯ!: 100ಕ್ಕೂ ಹೆಚ್ಚು ಚಿನ್ನದ ಪ್ಯಾಕೆಟ್​ಗಳು ಎಸ್​ಬಿಐ ಶಾಖೆಯಿಂದ ನಿಗೂಢವಾಗಿ ನಾಪತ್ತೆ!

    ಕಳೆದ ವರ್ಷದ ಅಂತ್ಯದಲ್ಲಿ ಜೌ, 392 ಪೌಂಡ್ (177 ಕೆ.ಜಿ.) ತೂಕವಿದ್ದ. ಎಂದು ತಿಳಿದುಬಂದಿದೆ. ಆತನನ್ನು ಆಸ್ಪತ್ರೆಗೆ ಸಾಗಿಸುವುದು ಸಹ ಆಸ್ಪತ್ರೆಯ ಸಿಬ್ಬಂದಿಗೆ ಬಹುದೊಡ್ಡ ಸವಾಲಗಿತ್ತು. ಇನ್ನು ಪಾಲಕರಿಗಂತೂ ಜೌ ಸ್ಥಿತಿ ಕಂಡು ಕಣ್ಣೀರಿಡುವಂತಾಗಿದೆ. ಪ್ರಾಯದ ಮಗ ಎದ್ದು ತಿರುಗಾಡುತ್ತಿಲ್ಲವಲ್ಲ ಎಂದು ಕೊರಗು ಪಾಲಕರಲ್ಲಿದೆ. ಆಘಾತಕಾರಿಯೆಂದರೆ ತನ್ನ ದೇಹದ ತೂಕದಿಂದಾಗಿ 48 ಗಂಟೆಗಳ ಕಾಲ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ ಎಂದು ಜೌ ಹೇಳಿಕೊಂಡಿದ್ದಾರೆ. ಸದ್ಯ ಜೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್)

    ಕರೊನಾ ಲಾಕ್​ಡೌನ್​ ಎಫೆಕ್ಟ್​: ವುಹಾನ್​ ಯುವಕನ ತೂಕ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ!

    3 ಲಕ್ಷ ದಾಟಿದ ಪ್ರಕರಣ: ಮಹಾರಾಷ್ಟ್ರದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕರೊನಾ ಕೇಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts