More

    ಸೂಟ್​ಕೇಸ್​ನಲ್ಲಿ ಇದ್ದ ಶವ ಯಾರದ್ದೋ… ಜೈಲಿಗೆ ಹೋಗಿದ್ದು ಮತ್ತ್ಯಾರೋ…

    ನವದೆಹಲಿ: ವರದಕ್ಷಿಣೆ ಕಿರುಕುಳ ನೀಡಿ, ಸೊಸೆಯನ್ನು ಕೊಂದು ಸೂಟ್​ಕೇಸ್​ನಲ್ಲಿ ಶವ ಇರಿಸಿ ಬಿಸಾಡಲಾಗಿದೆ ಎಂಬ ಆರೋಪದಲ್ಲಿ ಸೋಮವಾರ ಬಂಧಿಸಲಾಗಿತ್ತು. ಆದರೆ, ಸೊಸೆಯ ಕುಟುಂಬದವರು ಗುರುತಿಸಿದ್ದ ಶವ ಬೇರೆಯವರದ್ದಾಗಿದ್ದು, ಸೊಸೆ ಜೀವಂತವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

    ಕೆಲವು ವರ್ಷಗಳ ಹಿಂದೆ ವರಿಷಾ ಮತ್ತು ಅಮೀರ್​ ವಿವಾಹವಾಗಿದ್ದರು. ಇವರಿಬ್ಬರೂ ಬುಲಂದ್​ಶಹರ್​ನ ಇಸ್ಲಾಮಾಬಾದ್​ ಪ್ರದೇಶದಲ್ಲಿ ವಾಸವಾಗಿದ್ದರು. ಇವರೊಂದಿಗೆ ಅಮೀರ್​ನ ಪಾಲಕರೂ ಇದ್ದರು. ಜು.23ರಂದು ವರಿಷಾ ದಿಢೀರ್​ನೆ ಕಾಣೆಯಾಗಿದ್ದಳು. ಈ ಬಗ್ಗೆ ಅಮಿರ್​ ಬುಲಂದ್​ಶಹರ್​ ಪೊಲೀಸರಲ್ಲಿ ದೂರು ದಾಖಲಿಸಿದ್ದರು.

    ಘಾಜಿಯಾಬಾದ್​ನ ಸಾಹೀಬಾಬಾದ್​ನಲ್ಲಿ ಜು.27ರಂದು ಸೂಟ್​ಕೇಸ್​ನಲ್ಲಿ ಇರಿಸಲಾಗಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದ ವರಿಷಾ ಪಾಲಕರು ಅದು ವರಿಷಾದ್ದೇ ಎಂದು ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ ವರಿಷಾ ಪತಿ ಅಮೀರ್​ ಮತ್ತು ಅವರ ಪಾಲಕರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದರು. ಇದನ್ನು ಆಧರಿಸಿ ಪೊಲೀಸರು ಅಮೀರ್​ ಮತ್ತು ಅವರ ಪಾಲಕರನ್ನು ಬಂಧಿಸಿದ್ದರು.

    ಇದನ್ನೂ ಓದಿ: ಐವರು ಬಾಲಕಿಯರ ಮೇಲೆ ಸತತ ಮೂರು ದಿನ ಲೈಂಗಿಕ ದೌರ್ಜನ್ಯ ಎಸಗಿದ 65ರ ಮುದುಕ

    ಆದರೆ, ವರಿಷಾ ಆಲಿಗಢದಲ್ಲಿ ತಮ್ಮ ಪರಿಚಿತರ ಮನೆಯಲ್ಲಿ ಇದ್ದರು. ವರದಕ್ಷಿಣ ಹಣ ಪಡೆದುಕೊಂಡು ಬರುವಂತೆ ಅಮೀರ್​ ಮತ್ತವರ ಕುಟುಂಬದವರು ಜು.22ರಂದು ವರಿಷಾರನ್ನು ಥಳಿಸಿದ್ದರು. ಅಂದು ಅವರು ಮನೆಬಿಟ್ಟು ನೋಯ್ಡಾದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಅವರು, ಅಲ್ಲಿಂದ ಆಲಿಗಢದ ಸಂಬಂಧಿಕರ ಮನೆಗೆ ಹೋಗಿದ್ದರು.

    ಆಲಿಗಢದಲ್ಲಿ ಇರುವಾಗ ಘಾಜಿಯಾಬಾದ್​ನಲ್ಲಿ ಸೂಟ್​ಕೇಸ್​ನಲ್ಲಿ ದೊರೆತ ಶವ ತನ್ನದೆಂದು ತನ್ನ ಕುಟುಂಬಸ್ಥರು ಗುರುತಿಸಿರುವ ವಿಷಯ ಆಕೆಗೆ ಗೊತ್ತಾಗಿತ್ತು. ತಕ್ಷಣವೇ ಆಕೆ ಆಲಿಗಢದ ಪೊಲೀಸ್​ ಠಾಣೆಗೆ ಹೋಗಿ, ತಾನೇ ವರಿಷಾ ಆಗಿದ್ದು, ತಾನು ಜೀವಂತವಾಗಿರುವುದಾಗಿ ತಿಳಿಸಿದ್ದಳು. ಅದರಂತೆ ಆಲಿಗಢದ ಪೊಲೀಸರು ಘಾಜಿಯಾಬಾದ್​ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಇದೀಗ ಅಮೀರ್​ ಮತ್ತು ಅವರ ಪಾಲಕರು ಬಿಡುಗಡೆಗೊಂಡಿದ್ದಾರೆ.

    ಮುಂಬೈ ಮುಕ್ತ… ಮುಕ್ತ…, ಏಳೂ ದಿನ ಅಂಗಡಿ ತೆರೆಯಬಹುದು….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts