More

    ನಾನಿನ್ನು ಕ್ವಾರಂಟೈನ್​ನಲ್ಲಿರುವೆ, ದಯವಿಟ್ಟು ಯಾರು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಾಹ ಅಭಿಮಾನಿಗಳಲ್ಲಿ ಮನವಿ ಮಾಡಿದ್ಯಾಕೆ?

    ನವದೆಹಲಿ: 14ನೇ ಆವೃತ್ತಿಯ ಐಪಿಎಲ್​ ಅರ್ಧಕ್ಕೆ ಮೊಟಕುಗೊಂಡ ಬೆನ್ನಲ್ಲೇ ಕೋವಿಡ್​-19 ಸೋಂಕಿಗೆ ಒಳಗಾಗಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ವೃದ್ಧಿಮಾನ್​ ಸಾಹಗೆ ಮತ್ತೊಮ್ಮೆ ಪಾಸಿಟಿವ್​ ಕಾಣಿಸಿಕೊಂಡಿದೆ. ಶುಕ್ರವಾರ ಸ್ವತಃ ಮಾಹಿತಿ ನೀಡಿರುವ ಸಾಹ, ದೈನಂದಿನ ತಪಾಸಣೆಯಲ್ಲಿ ನಡೆಸಿದ ಎರಡು ಪರೀಕ್ಷೆಗಳ ಪೈಕಿ ಒಂದು ನೆಗೆಟಿವ್​ ಮತ್ತೊಂದು ಪರೀಕ್ಷೆ ವರದಿಯಲ್ಲಿ ಪಾಸಿಟಿವ್​ ಅಂಶಕಾಣಿಸಿಕೊಂಡಿದೆ ಎಂದು ಟ್ವೀಟ್​ ಮಾಡಿದ್ದಾರೆ. ನನ್ನ ಕ್ವಾರಂಟೈನ್​ ಅವದಿ ಇನ್ನು ಮುಕ್ತಾಯಗೊಂಡಿಲ್ಲ. ದೈನಂದಿನ ತಪಾಸಣೆಯಲ್ಲಿ ನಡೆಸಿದ 2 ಪರೀಕ್ಷೆಯಲ್ಲಿ ಒಮ್ಮೆ ನೆಗೆಟವ್​ ಮತ್ತೊಂದೆಡೆ ಪಾಸಿಟಿವ್​ ವರದಿ ಬಂದಿದೆ. ನನ್ನ ಆರೋಗ್ಯವಂತು ಸುಧಾರಿಸುತ್ತಿದೆ. ಯಾರು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಸಾಹ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಭಾರತದ ವಿರುದ್ಧದ ಸೋಲಿಗೆ ನೆಪಹೇಳಿ ಟ್ರೋಲ್ ಆದ ಆಸೀಸ್ ನಾಯಕ ಟೀಮ್ ಪೆನ್

    ವೃದ್ಧಿಮಾನ್​ ಸಾಹ ಅವರನ್ನು ಡಬ್ಲ್ಯುಟಿಸಿ ಫೈನಲ್​ ಹಾಗೂ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿಗೆ ಆಯ್ಕೆ ಮಾಡಲಾಗಿದೆ. ಸಾಹ ಹಾಗೂ ಕೆಎಲ್​ ರಾಹುಲ್​ ಪೂರ್ಣಪ್ರಮಾಣದಲ್ಲಿ ಫಿಟ್​ ಆದರಷ್ಟೇ ತಂಡದೊಂದಿಗೆ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಮೇ 4ರಂದು ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ನಡುವಿನ ಪಂದ್ಯಕ್ಕೂ ಸಾಹಗೆ ಕೋವಿಡ್​-19 ದೃಢಪಟ್ಟಿತ್ತು. ಅದೇ ದಿನ ಡೆಲ್ಲಿ ಕ್ಯಾಪಿಟಲ್ಸ್​ ತಮಡದ ಅಮಿತ್​ ಮಿಶ್ರಾಗೂ ಕೋವಿಡ್​ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಬಿಸಿಸಿಐ ಹಾಗೂ ಐಪಿಎಲ್​ ಆಡಳಿತ ಮಂಡಳಿ ಅನಿದಿರ್ಷ್ಟಾವಧಿವರೆಗೆ ಟೂರ್ನಿಯನ್ನು ಮುಂದೂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts