More

    ಮಹಾಲಿಂಗೇಶ್ವರ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ : ಅಥಣಿ ಪೈಲ್ವಾನ್ ಮಲ್ಲಪ್ಪಗೆ ಬೆಳ್ಳಿ ಗದೆ

    ಮಹಾಲಿಂಗಪುರ: ಗುರು ಮಹಾಲಿಂಗೇಶ್ವರ ಜಾತ್ರೆಯ ಕೊನೆಯ ದಿನವಾದ ಭಾನುವಾರ ಸಂಜೆ ಸರ್ಕಾರಿ ಕಾಲೇಜು ಆವರಣದ ಮೈದಾನದಲ್ಲಿ ಜರುಗಿದ ಜಂಗಿ ನಿಕಾಲಿ ಕುಸ್ತಿಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕುಸ್ತಿಪಟುಗಳು ಸೆಣಸಾಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

    ಅಥಣಿಯ ಪೈಲ್ವಾನ್ ಮಲ್ಲಪ್ಪ ಹಾಗೂ ಇಂಗಳಿಯ ಪೈಲ್ವಾನ್ ಸಂಜು ನಡುವಿನ ಕುಸ್ತಿ ರೋಚಕವಾಗಿತ್ತು. ಜಿಟಿ-ಜಿಟಿ ಮಳೆ ನಡುವೆ ಇಬ್ಬರು ಪೈಲ್ವಾನ್‌ರು ಅರ್ಧ ಗಂಟೆ ವಿವಿಧ ಕಸರತ್ತು ಮೂಲಕ ಸೆಣಸಾಡಿದರು. ಪ್ರೇಕ್ಷಕರು ಸಿಳ್ಳೆ-ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಅಥಣಿಯ ಮಲ್ಲಪ್ಪ ಪೈಲ್ವಾನ್ ಇಂಗಳಿಯ ಪೈಲ್ವಾನ್ ಸಂಜು ಅವರನ್ನು ಚಿತ್ ಮಾಡುವ ಮೂಲಕ ಡಾ. ಎ.ಆರ್.ಬೆಳಗಲಿ ಅವರು ವಿಶೇಷ ಬಹುಮಾನವಾಗಿ ನೀಡಿದ 30 ಸಾವಿರ ರೂ. ಮೌಲ್ಯದ ಬೆಳ್ಳಿ ಗದೆ ಎತ್ತಿ ಹಿಡಿದು ಬೀಗಿದರು.

    ಪಂದ್ಯಾವಳಿಯಲ್ಲಿ 74 ಪೈಲ್ವಾನ್ ಭಾಗವಹಿಸಿದ್ದರು. ಕರ್ನಾಟಕ ಕೇಸರಿ ಗೋಪಾಲ ಮತ್ತು ಹರಿಯಾಣದ ರೋಹಿತ್ ನಡುವೆ 45 ನಿಮಿಷದವರೆಗೆ ರೋಚಕ ಕುಸ್ತಿ ನಡೆಯಿತು. ಅಂತಿಮವಾಗಿ ಕುಸ್ತಿ ನಿಕಾಲಿಯಾಗದೆ ಸಮಬಲ ಸಾಧಿಸಿತು.

    ಪುಣೆಯ ಸುನೀಲ ವಿರುದ್ಧ ಅಸ್ಲಮ್‌ಕಾಜಿಯ ಮಹಾರುದ್ರ ಕಾಳೆ ಜಯಶಾಲಿಯಾದರು. ಮೈಸೂರಿನ ಯಶವಂತ ಹಾಗೂ ಅಸ್ಲಮಕಾಜಿಯ ಜಮೀರ ಮುಲಾನಿ, ಬೆಳಗಾವಿಯ ಶಿವಯ್ಯ ಪೂಜೇರಿ ವಿರುದ್ಧ ಕುರಡೆವಾಡಿಯ ದಾದಾ ಮುಲಾನಿ, ಮೋಮಿನ ಪಟೇಲ್ ಹಾಗೂ ಶಿವಾನಂದ ನಿರವಾನಟ್ಟಿ ನಡುವಿನ ಕುಸ್ತಿ ಸೇರಿದಂತೆ ಪ್ರಮುಖ 5 ಕುಸ್ತಿ ಪಂದ್ಯಗಳಲ್ಲಿ 4 ಕುಸ್ತಿಗಳು ಸಮಬಲವಾದವು.

    ಮಹಾಲಿಂಗೇಶ್ವರ ಮಠದ ಈಶ್ವರ ಮಠದ ಅವರು ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿದರು. ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಕೃಷ್ಣಗೌಡ ಪಾಟೀಲ ಅವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಅಶೋಕಗೌಡ ಪಾಟೀಲ, ಹನುಮಂತ ಬುರುಡ, ಭೀಮಸಿ ಮಾಳಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

    ಕುಸ್ತಿ ಕಮಿಟಿ ಸದಸ್ಯರಾದ ನಿಂಗಪ್ಪ ಬಾಳಿಕಾಯಿ, ಮುದಕಪ್ಪ ಮಾಳಿ, ಪರಪ್ಪ ಹಟ್ಟಿ, ಮಹಾಲಿಂಗ ಮಾಳಿ, ಹಣಮಂತ ಬುರುಡ, ಅಪ್ಪಾಸಿ ಕಾರಜೋಳ ಕುಸ್ತಿ ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದರು.

    ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ, ಡಾ.ಎ.ಆರ್.ಬೆಳಗಲಿ, ಬಸವರಾಜ ಕೊಣ್ಣೂರ, ಲಕ್ಷ್ಮಣಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೋಳ್ಳಿ, ಶ್ರೀಮಂತ ಹಳ್ಳಿ, ಶಿವಲಿಂಗ ಘಂಟಿ, ಈರಪ್ಪ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಯ್ಯ ಛಟ್ಟಿಮಠ, ಮಹಾದೇವ ಮಾರಾಪೂರ, ಪ್ರಕಾಶ ಅರಳಿಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts