More

    #MeToo ಪ್ರತಿಭಟನೆ; ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್​ ನೋಟಿಸ್​

    ನವದೆಹಲಿ: ಕುಸ್ತಿಪಟುಗಳು ತಮ್ಮ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನೋಟಿಸ್​ ಜಾರಿ ಮಾಡಿದೆ.

    ಘಟನೆ ಸಂಬಂಧ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್​ ನೋಟಿಸ್​ ಜಾರಿ ಮಾಡಿದ್ದು ರೆಸ್ಲಿಂಗ್​ ಫೆಡರೇಷನ್​ ಸಂಸ್ಥೆ ಮುಖ್ಯಸ್ಥ(WFI) ಮುಖ್ಯಸ್ಥ ಬಿಜೆಪಿ ಸಂಸದ ಬ್ರಿಜ್​ಭೂಷನ್​ ಶರಣ್​ ಸಿಂಗ್​ ವಿರುದ್ಧ FIR ದಾಖಲಿಸುವಂತೆ ಸೂಚಿಸಿದೆ.

    ಗಂಭೀರ ಪ್ರಕರಣ

    ಅರ್ಜಿ ವಿಚಾರಣೆ ನಡೆಸಿದ ಡಿ.ವೈ.ಚಂದ್ರಚೂಡ್​ ಅವರಿದ್ದ ಏಕಸದಸ್ಯ ಪೀಠವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕುಸ್ತಿಪಟುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಆರೋಪಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪವಾಗಿದ್ದು ನ್ಯಾಯಾಲಯ ಇದನ್ನು ಪರಿಗಣಿಸುತ್ತದೆ. ಈಗಾಗಲೇ ನೀಡಿರುವ ದೂರುಗಳ ಮರುಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    wrestlers Protest

    ಇದನ್ನೂ ಓದಿ: VIDEO| #MeToo ಪ್ರತಿಭಟನೆ; ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಪ್ರಕರಣ

    ಯಾವುದೇ ಕ್ರಮ ಕೈಗೊಂಡಿಲ್ಲ

    ಕಿರುಕುಳದ ಸಂಬಂಧ ಜನವರಿ ತಿಂಗಳಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಕ್ರೀಡಾ ಸಚಿವಲಾಯ ಮಧ್ಯ ಪ್ರವೇಶಿಸಿ ಕಠಿಣ ಕ್ರಮದ ಭರವಸೆ ನೀಡಿದ ನಂತರ ಕುಸ್ತಿಪಟುಗಳು ಪ್ರತಿಭಟನೆಯನ್ನು ಕೈ ಬಿಟ್ಟಿದ್ದರು.

    ಆದರೆ, ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಕಳೆದ ಬಾರಿ ನಮ್ಮನ್ನು ದಾರಿ ತಪ್ಪಿಸಲಾಗಿತ್ತು ಈ ಭಾರಿ ಯಾವುದೇ ರಾಜಕೀಯ ಮಾಡಲು ನಾವು ಬಿಡುವುದಿಲ್ಲ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts