More

    ಬಿಜೆಪಿಗೆ ಮುಸ್ಲಿಮರ ಮತ ಬೇಕಿಲ್ಲ: ಕೆ.ಎಸ್​. ಈಶ್ವರಪ್ಪ

    ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

    ಇನ್ನು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಚುನಾವಣಾ ಪ್ರಚಾರದ ವೇಳೆ ನಮಗೆ ಮುಸ್ಲಿಮರ ಒಂದೇ ಒಂದು ಮತ ಬೇಡ ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ಧಾರೆ.

    ಬೇಡವೇ ಬೇಡ

    ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಮನೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರು ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಮುಸ್ಲಿಮರು ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ನೋಡಿ ಮತ ಹಾಕುವುದಿಲ್ಲ ಎಂದಿದ್ದಾರೆ.

    ಆರೋಗ್ಯ ಹಾಗೂ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ನಮ್ಮ ಬಳಿ ಸಹಾಯ ಪಡೆದಿರುವ ಮುಸಲ್ಮಾನರು ನಮಗೆ ಮತ ನೀಡುತ್ತಾರೆ. ಯಾರು ಕೂಡ ನಮ್ಮನ್ನು ಒಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ಧಾರೆ.

    KSE BSY

    ಇದನ್ನೂ ಓದಿ: ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 65 ಲಕ್ಷ ರೂ. ವಶಕ್ಕೆ

    ಹಿಂದೂಗಳಿಗೆ ಮಾದರಿ

    ಮಾತನಾಡುವ ವೇಳೆ ಮಾಜಿ ಸಿಎಂ ಬಿಎಸ್​ವೈರನ್ನು ಹಾಡಿ ಹೊಗಳಿದ ಈಶ್ವರಪ್ಪ ಇವರು ಲಿಂಗಾಯತರು ಸೇರಿದಂತೆ ಹಿಂದೂಗಳಿಗೆ ಮಾದರಿ ನಾಯಕರಾಗಿದ್ದು ಪಕ್ಷದ ಅಭ್ಯರ್ಥಿ ಚೆನ್ನಬಸಪ್ಪ ಹಿಂದೂ ಸಮಾಜವನ್ನು ಕಟ್ಟಬಲ್ಲ ಪ್ರಬಲ ನಾಯಕರಾಗಿದ್ದಾರೆ ಎಂದುಹಾಡಿ ಹೊಗಳಿದ್ಧಾರೆ.

    ಎಷ್ಟೋ ಜನ ನನ್ನ ಬಳಿ ಹೇಳುತ್ತಿದ್ದಾರೆ ಬಿಜೆಪಿ ಬಿಟ್ಟು ಬೇರೆ ಪಕ್ಷ ಗೆದ್ದರೆ ಹಿಂದೂಗಳಿಗೆ ಉಳಿಗಾಲ ಇಲ್ಲ ಎಂದು. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ.

    ಕಾಂಗ್ರೆಸ್​​ನವರು ಬರೋದಿಲ್ಲ

    ಶಿವಮೊಗ್ಗದಲ್ಲಿ 56,000 ಮುಸ್ಲಿಮರಿದ್ದಾರೆ ಎಂದು ಹೇಳುತ್ತಾರೆ ನಮಗೆ ಅವರ ಒಂದು ವೋಟ್​ ಕೂಡ ಬೇಡ. ಹರ್ಷ ಕೊಲೆಯಾದ ಸಂದರ್ಭದಲ್ಲಿ ಕಾಂಗ್ರೆಸ್​​ನವರು ಸುಮ್ಮನಿದ್ದರು. ನಾಣು ಒಮ್ಮೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಜೊತೆ ಮಾತನಾಡುವ ಸಮಯದಲ್ಲಿ ಲವ್​ ಜಿಹಾದ್​ ಬಗ್ಗೆ ಪ್ರಸ್ತಾಪಿಸಿದ್ದೆ.

    ಲವ್​ ಜಿಹಾದ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳು ದೂರು ನೀಡಲು ಹಿಂಜರಿಯುತ್ತಾರೆ. ಹಿಂದು ಹೆಣ್ಣು ಮಕ್ಕಳಿಗೆ ಮುಸಲ್ಮಾನರು ಕಾಟ ಕೊಟ್ಟರೆ ಕಾಂಗ್ರೆಸ್​ನವರು ಬರೋದಿಲ್ಲ. ನಾವು ಯೋಚನೆ ಮಾಡಬೇಕಾಗಿರುವುದು ವೈಯಕ್ತಿಕ ಜೀವನ ಹಾಗೂ ಧರ್ಮದ ಬಗ್ಗೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts