More

    ಭಾರತ-ಚೀನಾ ಜನಸಂಖ್ಯೆ ಕುರಿತು ವ್ಯಂಗ್ಯಚಿತ್ರ; ವ್ಯಾಪಕ ಖಂಡನೆ

    ನವದೆಹಲಿ: ಇತ್ತೀಚಿಗೆ ವಿಶ್ವ ಸಂಸ್ಥೆಯೂ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಎಂದು ವರದಿ ನೀಡಿತ್ತು.

    ಇದೀಗ ಇದೇ ವಿಚಾರವಾಗಿ ಜರ್ಮನಿಯ ಮ್ಯಾಗಜಿನ್​ ಒಂದು ಪ್ರಕಟಿಸಿರುವ ವ್ಯಂಗ್ಯ ಚಿತ್ರ ಭಅರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

    ಭಾರತೀಯರನ್ನು ಅಣಕಿಸುವ ಚಿತ್ರ

    ಇನ್ನು ಡೆರ್ ಸ್ಪೀಗೆಲ್ ಮ್ಯಾಗಜಿನ್​ ಪ್ರಕಟಿಸಿರುವ ವ್ಯಂಗ್ಯ ಚಿತ್ರದಲ್ಲಿ ಚೀನಾ ದೇಶದವರು ಬುಲೆಟ್​ ಟ್ರೈನಿನಲ್ಲಿ ಹೋಗುತ್ತಿದ್ದರೆ ಅತ್ತ ಮತ್ತೊಂದು ಬದಿಯಲ್ಲಿ ಭಾರತೀಯರು ರೈಲಿನ ಮೇಲೆ ಕುಳಿತು ತ್ರಿವರ್ಣ ಧ್ವಜವನ್ನು ಹಿಡಿದು ಮುನ್ನುಗುತ್ತಿರುವುದು ಕಂಡು ಬರುತ್ತದೆ.

    ಈ ಮೂಲಕ ಭಾರತ ಮೂಲ ಸೌಕರ್ಯದಲ್ಲಿ ಹಿಂದೆ ಉಳಿದಿದ್ದು ಚೀನಾ ತಾಂತ್ರಿಕ ಪ್ರಗತಿಯಲ್ಲಿ ಮುಂದಿದೆ ಎಂದು ವ್ಯಂಗ್ಯ ಚಿತ್ರದ ಹೇಳುವ ಮೂಲಕ ಭಾರತೀಯರನ್ನು ಕೆರಳಿಸಿದೆ.

    ವಾಸ್ತವಾಂಶವನ್ನು ತಿರುಚಲಾಗಿದೆ

    ಈ ಕುರಿತು ಪ್ರತಿಕ್ರಿಯಿಸಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸಲಹೆಗಾರ ಕಾಂಚನ್​ ಗುಪ್ತಾ ಇದು ಜನಾಂಗೀಯ ನಿಂದನೆಯ ಪ್ರತೀಕವಾಗಿದ್ದು ವಾಸ್ತವಾಂಶವನ್ನು ತಿರುಚಿ ಚೀನಾವನ್ನು ಭಾರತದಿಂದ ಮುಂದುವರೆದ ದೇಶ ಎಂದು ತೋರಿಸಲಾಗಿದೆ.

    ನನ್ನ ಪ್ರಕಾರ ಇದು ಒಂದು ಕೆಟ್ಟ ವ್ಯಂಗ್ಯ ಚಿತ್ರವಾಗಿದ್ದು ಭಾರತ ಮಂಗಳಯಾನ ಕೈಗೊಂಡ ದೇಶ ಎಂಬ ವಿಚಾರ ನಿಮ್ಮ ನೆನಪಿನಲ್ಲಿ ಇರಲಿ ಎಂದು ಡೆರ್ ಸ್ಪೀಗೆಲ್ ಮ್ಯಾಗಜಿನ್ ಅವರನ್ನು ಎಚ್ಚರಿಸಿಗದ್ದಾರೆ.

    ಇದನ್ನು ಓದಿ: ಸುಡಾನ್ ಬಿಕ್ಕಟ್ಟು; ಭಾರತೀಯರ ರಕ್ಷಣೆಗೆ ‘ಆಪರೇಷನ್​ ಕಾವೇರಿ’ ಪ್ರಾರಂಭ

    ಇದು ಭಾರತ ಬಾಂಗ್ಲಾದೇಶ ಅಲ್ಲ

    ಈ ಕುರಿತು ಪ್ರತಿಕ್ರಿಯಿಸಿರುವ ಇಂಡೋ-ಯುರೋಪಿಯನ್​ ಸಂಗೀತಗಾರ ಮೈಕೆಲ್​ ಮಖಲ್​ ಜರ್ಮನರು ಟ್ರೈನಿನ ಮೇಲೆ ಕುಳಿತಿರುವ ಬಾಂಗ್ಲಾದೇಶಿಯರನ್ನು ಭಾರತದವರೆಂದು ತಿಳಿದುಕೊಂಡಿದ್ದಾರೆ.

    ನಾನು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವ್ಯತ್ಯಾಸವನ್ನು ಜರ್ಮನ್​ ಪ್ರಜೆಗೆ ಬರ್ಲಿನ್​ನಿಂದ ಫ್ರಾಂಕ್​ಫರ್ಟ್​ಗೆ ಪ್ರಯಾಣಿಸುವ ವೇಳೆ ವಿವರಿಸಿದ್ಧೇನೆ. ನಾವು ಗಡಿಯನ್ನು ಹಂಚಿಕೊಂಡು ಒಂದೇ ರೀತಿ ಕಂಡರೂ ನಮಗೂ ಮತ್ತು ಅವರಿಗೂ ತುಂಬಾ ವ್ಯತ್ಯಾಸವಿದೆ ಎಂಬುದನ್ನು ಅವರಿಗೆ ಅರ್ಥೈಸಿದ್ದೇನೆ ಎಂದು ಡೆರ್ ಸ್ಪೀಗೆಲ್ ಮ್ಯಾಗಜಿನ್ ವ್ಯಂಗ್ಯ ಚಿತ್ರಕ್ಕೆ ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts