More

    ಮೌಲ್ಯಯುತ ಬದುಕಿಗೆ ಒತ್ತು ಕೊಡುವಂತೆ ಶ್ರೀ ಬಸವಪ್ರಭು ಸ್ವಾಮೀಜಿ ಕಿವಿಮಾತು

    ಹರಿಹರ (ದಾವಣಗೆರೆ ಜಿಲ್ಲೆ): ಅತಿಯಾದ ಹಣ, ಆಸ್ತಿ ಮನುಷ್ಯನ ನೆಮ್ಮದಿಗೆ ಭಂಗ ತರಲಿದ್ದು, ಮೌಲ್ಯಯುತ ಜೀವನಕ್ಕೆ ಒತ್ತು ನೀಡಬೇಕು ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ಗುರುಭವನದಲ್ಲಿ ಭಾನುವಾರ ಚಿಂತನ ಪ್ರತಿಷ್ಠಾನ ಹಮ್ಮಿಕೊಂಡಿದ್ದ ದಾರಿದೀಪ ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

    ವ್ಯಾಮೋಹದ ಸಮಾಜದಲ್ಲಿ ಮನುಷ್ಯನ ಬದಲು ಹಣ ಮಾಡುವ ಯಂತ್ರಗಳನ್ನು ತಯಾರು ಮಾಡುತ್ತಿದ್ದೇವೆ. ಪ್ರೀತಿ, ವಿಶ್ವಾಸ, ವಿನಯವಂತಿಕೆಯುಳ್ಳ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಾದ ಅವಶ್ಯಕೆ ಇದೆ. ದಾರಿದೀಪ ಪುಸ್ತಕ ಬದುಕಿನ ದಾರಿಯನ್ನು ತೋರಿಸುತ್ತದೆ ಎಂದರು.

    ಆರೋಗ್ಯ ಮಾತೆ ಚರ್ಚ್ ಧರ್ಮಗುರು ಡಾ.ಅಂತೋನಿ ಪೀಟರ್ ಮಾತನಾಡಿ, ಹಣಕೊಟ್ಟು ಪುಸ್ತಕ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕಗಳನ್ನು ಖರೀದಿಸಿ ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದರು.

    ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯ್ಯಪ್ಪ ಮಾತನಾಡಿ, ದಾರಿದೀಪ ಕೃತಿ ಸಂಗ್ರಹಯೋಗ್ಯವಾಗಿದೆ. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳ ಗ್ರಂಥಾಲಯಗಳಿಗೆ ತಲುಪಿಸಿದರೆ ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಲಿದೆ ಎಂದರು.

    ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಮಾತನಾಡಿದರು.

    ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ್ ಗುಂಡಗಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ನಿವೃತ್ತ ಶಿಕ್ಷಕ ರಾಮಕೃಷ್ಣ ಮೂರ್ತಿ, ಬೆಂಗಳೂರಿನ ಚಾರುಮತಿ ಪ್ರಕಾಶನದ ಬಿ.ಎಸ್.ವಿದ್ಯಾರಣ್ಯ, ಲೇಖಕ ಸುಬ್ರಹ್ಮಣ್ಯ ನಾಡಿಗೇರ್, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಫ್ರಾನ್ಸಿಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts