More

    COVID19 ರ ಅತ್ಯಂತ ಕೆಟ್ಟ ಪರಿಣಾಮ ಎದುರಿಸಲು ಸಜ್ಜಾಗಿ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

    ಜಿನೇವಾ: ಕರೊನಾ ವೈರಸ್ COVID19ರ ಕೆಟ್ಟ ಪರಿಣಾಮ ಇನ್ನೂ ವ್ಯಕ್ತವಾಗಿಲ್ಲ. ಅದು ಇನ್ನು ಮುಂದಿದೆ. ಅದನ್ನು ಎದುರಿಸುವುದಕ್ಕೆ ಸಜ್ಜಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಡೈರೆಕ್ಟರ್ ಜನರಲ್​ ಟೆಡ್ರೋಸ್​ ಅಧನೊಂ ಘೆಬ್ರೆಯೆಸೆಸ್​ ಎಚ್ಚರಿಸಿದ್ದಾರೆ.

    ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ತಗುಲಿರುವ ಸೋಂಕು, ಸಾವಿರಾರು ಜನರ ಪ್ರಾಣವನ್ನೂ ಬಲಿತೆಗೆದುಕೊಂಡಿದೆ. ಈ ಸಾಂಕ್ರಾಮಿಕ ರೋಗದ ಭೀಕರತೆ ಇನ್ನಷ್ಟೇ ಗೋಚರಿಸಲಿದೆ. ಅದಕ್ಕಾಗಿ ಸಿದ್ಧರಾಗಬೇಕು ಎಂದು ಟೆಡ್ರೋಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

    ನಮ್ಮನ್ನು ನಂಬಿ. ಮುಂದೆ ಭಾರಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಿದೆ. ದುರಂತವನ್ನು ತಡೆಯೋಣ. ಸೋಂಕು ಹರಡುತ್ತಿರುವುದು ವೈರಸ್ ಎಂಬುದು ಇನ್ನೂ ಅನೇಕ ಜನರು ಅರ್ಥಮಾಡಿಕೊಳ್ಳುತ್ತಿಲ್ಲ. ಡಬ್ಲ್ಯುಎಚ್​ಒ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗೌಪ್ಯತೆ ಮಾಡುತ್ತಿಲ್ಲ. ಮುಚ್ಚಿಸುವಂತಹ ಯಾವ ವಿಷಯವೂ ಇಲ್ಲಿಲ್ಲ. ಈ ವೈರಸ್ ಬಹಳ ಅಪಾಯಕಾರಿಯಾದುದು. ನಮ್ಮೊಳಗೆ ಭಿನ್ನಾಭಿಪ್ರಾಯಗಳು ಬಂದಾಗ ಅದರ ಲಾಭ ವೈರಸ್ ಪಾಲಾಗುತ್ತದೆ ಎಂದು ಟೆಡ್ರೋಸ್ ಪರೋಕ್ಷವಾಗಿ ಅಮೆರಿಕವನ್ನು ಎಚ್ಚರಿಸಿದ್ದಾರೆ.

    ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್​ ಸಿಬ್ಬಂದಿ ಡಬ್ಲ್ಯುಎಚ್​ಒ ಕೆಲಸವನ್ನು ಬೆಂಬಲಿಸುತ್ತಿದ್ದಾರೆ. ಇದು ಡಬ್ಲ್ಯುಎಚ್​ಒ ಇಟ್ಟುಕೊಂಡಿರುವ ಪಾರದರ್ಶಕತೆಯ ಫಲ. ಅಮೆರಿಕದಿಂದ ಮುಚ್ಚಿಡುವಂತದ್ದು ಏನೂ ಇಲ್ಲ. ನಮ್ಮಲ್ಲಿರುವ ಮಾಹಿತಿಯನ್ನು ಯಾರು ಕೇಳಿದರೂ ತತ್​ಕ್ಷಣವೇ ಕೊಡುತ್ತಿದ್ದೇವೆ ಇದು ಸಿಡಿಸಿ ಸಿಬ್ಬಂದಿಗಳಿಗೂ ಗೊತ್ತಿರುವ ವಿಚಾರವೇ ಎಂದು ಟೆಡ್ರೋಸ್ ತಮ್ಮ ನಡೆಯನ್ನು, ನಿಲುವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಮಾಡಿದ್ದಾರೆ. (ಏಜೆನ್ಸೀಸ್)

    ಡಬ್ಲ್ಯುಎಚ್​ಒ ಮುಖ್ಯಸ್ಥ ರಾಜೀನಾಮೆ ಕೊಡಲಿ- ಇಲ್ಲಾಂದ್ರೆ ಫಂಡ್ ಕೊಡಬೇಡಿ- ಅಧ್ಯಕ್ಷ ಟ್ರಂಪ್​ಗೆ ರಿಪಬ್ಲಿಕನ್ನರ ಒತ್ತಡ

    ‘ಚೀನಾದ ಮೇಲೆ ಖಂಡಿತ ಕೋಪವಿದೆ…’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​; ಡ್ರ್ಯಾಗನ್​ ರಾಷ್ಟ್ರಕ್ಕೊಂದು ಖಡಕ್​ ಎಚ್ಚರಿಕೆ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts