More

    VIDEO| ಆಸ್ಟ್ರೇಲಿಯಾದ ಸಮದ್ರದಲ್ಲಿ ಸಿಕ್ಕಿತು ವಿಶ್ವದ ಅತಿ ಉದ್ದದ ಜೀವಿ: ಇದರ ಗಾತ್ರ ಕೇಳಿದ್ರೆ ಬೆಚ್ಚಿ ಬೀಳುವುದು ಗ್ಯಾರೆಂಟಿ!

    ಕ್ವೀನ್ಸ್‌ಲ್ಯಾಂಡ್‌: ಸಮುದ್ರ ತನ್ನ ಒಡಲೊಳಗೆ ಅಸಂಖ್ಯ ಅದ್ಭುತ, ವಿಚಿತ್ರಗಳನ್ನು ಅಡಗಿಸಿಕೊಂಡಿದೆ. ಲೆಕ್ಕವಿಲ್ಲದಷ್ಟು ಜೀವಿಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಚಿತ್ರ-ವಿಚಿತ್ರ ಎನಿಸುವ ಜೀವಿಗಳ ಪತ್ತೆಯನ್ನು ಸಂಶೋಧಕರು ಮಾಡುತ್ತಲಿದ್ದರೂ. ಇನ್ನೂ ಹೊಸ ಹೊಸ ಹಿಂದೆಂದೂ ಕೇಳರಿಯದ ಜೀವಿಗಳು ಪತ್ತೆಯಾಗುತ್ತಲೇ ಇರುತ್ತವೆ.

    ಅಂಥದ್ದೇ ಒಂದು ಅಪರೂಪದ ಜೀವಿಯನ್ನು ಆಸ್ಟ್ರೇಲಿಯಾದ ಸಂಶೋಧಕರು ಪತ್ತೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಆಳವಾದ ಸಮುದ್ರದಲ್ಲಿ ಸಿಕ್ಕಿರುವ ಈ ಜೀವಿ, ವಿಚಿತ್ರ ಮಾತ್ರವಲ್ಲದೇ, ಇದೀಗ ಸಮುದ್ರದಾಳದ ಅತ್ಯಂತ ದೊಡ್ಡ ಜೀವಿ ಎಂಬ ದಾಖಲೆಯನ್ನೂ ಮಾಡಿದೆ. ಸಮುದ್ರದ ಮಾತ್ರವಲ್ಲದೇ ವಿಶ್ವದ ಅತಿ ಉದ್ದದ ಪ್ರಾಣಿ ಎನ್ನುವ ಬಿರುದೂ ಇದಕ್ಕೆ ಬಂದಿದೆ.

    ಹಾಗಿದ್ದರೆ ಇದರ ಅಳತೆ ಎಷ್ಟು ಎನ್ನುತ್ತೀರಾ? ಅದನ್ನು ಕೇಳಿದರೆ ಖಂಡಿತವಾಗಿಯೂ ಶಾಕ್‌ ಆಗುತ್ತೀರಿ. ಹೌದು. ಸ್ಟ್ರಿಂಗ್‌ ರೀತಿಯಲ್ಲಿ ಇರುವ ಈ ಪ್ರಾಣಿಯ ದೇಹ ಉಂಗುರಾಕಾರವಾಗಿದ್ದು, ಅದರ ಅಳತೆ 154 ಅಡಿ ಇದೆ. 390 ಅಡಿಗಳಿಗಿಂತಲೂ ಉದ್ದದ ದೇಹಾಕೃತಿಯನ್ನು ಇದು ಹೊಂದಿದೆ. ಅಂದರೆ ಎಲ್ಲರಿಗೂ ತಿಳಿಯುವಂತೆ ಹೇಳುವುದಾದರೆ ಈ ಅಳತೆ ಸುಮಾರು 11 ಅಂತಸ್ತಿನ ಗಾತ್ರದಷ್ಟಾಗಿದೆ ಎಂದು ಅಂದಾಜಿಸಲಾಗಿದೆ.

    ಇದರ ದೇಹಾಕೃತಿಯನ್ನು ಗಮನಿಸಿದರೆ ಇದು ಇಲ್ಲಿಯವರೆಗೆ ದಾಖಲಾಗಿರುವ ‘ವಿಶ್ವದ ಅತಿ ಉದ್ದದ ಪ್ರಾಣಿ’ ಎಂದು ಎನಿಸುತ್ತದೆ ಎಂದಿದ್ದಾರೆ ಸಂಶೋಧಕರು. ಇದನ್ನು ‘ಪ್ರಾಣಿ’ ಎಂದು ಸಾಮಾನ್ಯವಾಗಿ ಕರೆಯಬಹುದಾದರೂ ಇದು ಪ್ರಾಣಿಯಲ್ಲ. ಅಪೊಲೆಮಿಯಾ ಎಂಬ ಸಿಫೊನೊಫೋರ್‌ನ ಜಾತಿಗೆ ಸೇರಿದ ಜೀವಿ ಇದು. ಇದೇ ಜಾತಿಗೆ ಸೇರಿರುವ ಜೀವಿಗಳನ್ನು ಈಗಾಗಲೇ ಪತ್ತೆ ಮಾಡಲಾಗಿದ್ದು ಅದು ಕೇವಲ 20 ಅಡಿ ಉದ್ದವಿತ್ತು. ಆದರೆ ಇಷ್ಟೊಂದು ಬೃಹದಾಕಾರದಲ್ಲಿ ಇರುವ ಜೀವಿ ಪತ್ತೆಯಾಗಿದ್ದು ಇದೇ ಮೊದಲು ಎಂದಿದ್ದಾರೆ ತಜ್ಞರು.

    ಸ್ಮಿತ್ ಓಷನ್ ಇನ್ಸ್ಟಿಟ್ಯೂಟ್ (ಎಸ್‌ಒಐ) ಈ ಜೀವಿಯ ವೀಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. (ಏಜೆನ್ಸೀಸ್‌)

    ರೈತಾಪಿ ವರ್ಗದವರಿಗೆ ಇಲ್ಲಿದೆ ಖುಷಿಯ ಸಮಾಚಾರ…. ಇದನ್ಯಾರೋ ಜ್ಯೋತಿಷಿ ಹೇಳಿದ್ದಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts