More

    ರೈತಾಪಿ ವರ್ಗದವರಿಗೆ ಇಲ್ಲಿದೆ ಖುಷಿಯ ಸಮಾಚಾರ…. ಇದನ್ಯಾರೋ ಜ್ಯೋತಿಷಿ ಹೇಳಿದ್ದಲ್ಲ

    ನವದೆಹಲಿ: ಈ ಬಾರಿ ಭಾರತದಲ್ಲಿ ಮುಂಗಾರು ಸಾಮಾನ್ಯವಾಗಿರುತ್ತದೆ ಹಾಗೂ ಜೂನ್ ಆರಂಭದಲ್ಲಿಯೇ ಕೇರಳದ ಮೂಲಕ ಭಾರತ ಪ್ರವೇಶಿಸಲಿದೆ.

    ಹಾಗಂತಾ, ಇದನ್ಯಾರೋ ಜ್ಯೋತಿಷಿ ಹೇಳಿಲ್ಲ. ಬದಲಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 2020ರಲ್ಲಿ ಮುಂಗಾರು ಮಳೆ ಶೇ.100 ಸುರಿಯುವ ಸಾಧ್ಯತೆಗಳಿದ್ದು, ಶೇ.5 ಹೆಚ್ಚು ಅಥವಾ ಕಡಿಮೆಯಾಗಬಹುದು ಎಂದು ಕೇಂದ್ರ ಭೂವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಮಾಧವನ್​ ರಾಜೀವನ್​ ಹೇಳಿದ್ದಾರೆ. ಸಹಜವಾಗಿಯೇ ಇದು ರೈತಾಪಿ ವರ್ಗದಲ್ಲಿ ಸಂತಸ ಮೂಡಿಸುವ ವಿಚಾರವಾಗಿದೆ.

    ಹೊಲದಲ್ಲಿ ಬೆಳೆಯಿದ್ದರೂ ಲಾಕ್​ಡೌನ್​ನಿಂದಾಗಿ ಸಾಗಿಸಲಾಗದೆ ರೈತರು ಸಂಕಷ್ಟ ಪಡುತ್ತಿದ್ದಾರೆ. ಅಲ್ಲದೆ, ಇನ್ನೆರಡು ತಿಂಗಳಲ್ಲಿ ಶುರುವಾಗುವ ಮುಂಗಾರು ಹೇಗಿರುತ್ತೋ ಎನ್ನುವ ಚಿಂತೆಗೆ ಒಳಗಾಗಿದ್ದರು. ಹವಾಮಾನ ಇಲಾಖೆಯ ಮುನ್ಸೂಚನೆ ಅವರಲ್ಲಿ ಕೊಂಚ ನಿರಾಳತೆ ಮೂಡಿಸಿದೆ. ಭಾರತದ ಶೇ.70ರಷ್ಟು ಮಳೆ ಮುಂಗಾರು ಹಂಗಾಮಿನಲ್ಲಿಯೇ ಸುರಿಯುತ್ತದೆ. ಜೂನ್​ನಿಂದ ಸೆಪ್ಟೆಂಬರ್​ವರೆಗೆ ಮುಂಗಾರು ಅವಧಿಯಾಗಿದೆ.

    ಜೂನ್ 1ರಂದು ಮುಂಗಾರು ಕೇರಳ ಪ್ರವೇಶಿಸಲಿದೆ. ಚೆನ್ನೈಗೆ 4ರಂದು, ಪಣಜಿಗೆ 7, ಹೈದರಾಬಾದ್​ಗೆ 8, ಪುಣೆಗೆ 10 ರಂದು ಹಾಗೂ ಮುಂಬೈಗೆ ಜೂನ್​ 11 ರಂದು ಮುಂಗಾರು ಮಾರುತಗಳು ಪ್ರವೇಶಿಸಲಿವೆ. ರಾಷ್ಟ್ರ ರಾಜಧಾನಿಗೆ ಜೂನ್​ 27ರಂದು ಎಂಟ್ರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹವಾಮಾನ ಇಲಾಖೆ ನೀಡುವ ದೀರ್ಘಾವಧಿ ಮುನ್ಸೂಚನೆ ಇದಾಗಿದ್ದು, ಇಡೀ ದೇಶಕ್ಕೆ ಅನ್ವಯಿಸುತ್ತದೆ. ಪ್ರಾದೇಶಿಕವಾಗಿ ಸುರಿಯುವ ಮಳೆಯ ಪ್ರಮಾಣವನ್ನು ಇದು ಹೊಂದಿರುವುದಿಲ್ಲ. ಎರಡು ಹಂತದಲ್ಲಿ ಈ ಮುನ್ಸೂಚನೆಯನ್ನು ನೀಡಲಾಗುತ್ತದೆ. ಮೊದಲಿಗೆ ಏಪ್ರಿಲ್​ನಲ್ಲಿ ನಂತರ ಜೂನ್​ನಲ್ಲಿ ಇನ್ನೊಮ್ಮೆ ಮುಂಗಾರು ಸ್ಥಿತಿಗತಿಯನ್ನು ನೀಡಲಾಗುತ್ತದೆ.

    ಅಹಮದಾಬಾದ್​ ಆಸ್ಪತ್ರೆಯಲ್ಲಿ ಧರ್ಮ ಆಧರಿಸಿ ಪ್ರತ್ಯೇಕ ವಾರ್ಡ್​ನಲ್ಲಿ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts