More

    ವಿಶ್ವದ ಮೊದಲ ಹಾರುವ ಬೈಕ್!; ಬೆಲೆ 5.08 ಕೋಟಿ ರೂಪಾಯಿ

    ಟೊಕಿಯೊ: ಜಪಾನ್​ನ ನವೋದ್ಯಮ ಎ.ಎಲ್.ಐ ಟೆಕ್ನಾಲಜೀಸ್ ಜಗತ್ತಿನ ಮೊದಲ ವಾಣಿಜ್ಯ ಹೊವರ್ ಬೈಕ್ ಎಕ್ಸ್​ಟುರಿಸ್ಮೊ ಲಿಮಿಟೆಡ್ ಎಡಿಷನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಿಂತ ಸ್ಥಳದಲ್ಲೇ 3 ಮೀಟರ್ ಎತ್ತರಕ್ಕೆ ಹಾರಿ ಬಳಿಕ ಗಂಟೆಗೆ 30 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಫ್ಲೈಯಿಂಗ್ ಬೈಕ್ ಇದು. ಇದಕ್ಕೆ 77.7 ದಶಲಕ್ಷ ಯೆನ್ (5.084 ಕೋಟಿ ರೂಪಾಯಿ) ದರ ನಿಗದಿ ಮಾಡಿದೆ.

    ಜಪಾನ್​ನ ಶಿಝುುವೊಕಾ ಪ್ರಿಫೆಕ್ಚರ್​ನ ಫುಜಿ ಸ್ಪೀಡ್​ವೇ ರೇಸಿಂಗ್ ಕೋರ್ಸ್​ನ ರೇಸ್ ಟ್ರಾ್ಯಕ್​ನಲ್ಲಿ ಈ ವಾಹನವನ್ನು ಅನಾವರಣಗೊಳಿಸಲಾಗಿದೆ. ಈ ನವೋದ್ಯಮಕ್ಕೆ ಫುಟ್ಬಾಲ್ ತಾರೆ ಕೈಸುಕೆ ಹೊಂಡಾ ಹೂಡಿಕೆ ಮಾಡಿದ್ದಾರೆ. ನಾಲ್ಕು ವರ್ಷದ ಸತತ ಪರಿಶ್ರಮದ ಫಲವಾಗಿ ಈ ಬೈಕ್ ರೂಪುಗೊಂಡಿದೆ. ಇದು 3.7 ಮೀಟರ್ ಉದ್ದ ಇದ್ದು ಆರು ಪ್ರೊಪೆಲ್ಲರ್​ಗಳನ್ನು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹೊಂದಿದೆ. ಈ ಪ್ರೊಪೆಲ್ಲರ್​ಗಳು ತಿರುಗಲಾರಂಭಿಸಿದಾಗ ಇದು ಹಾರಾಟ ಶುರುಮಾಡುತ್ತದೆ. ಸಾಂಪ್ರದಾಯಿಕ ಇಂಜಿನ್ ಮತ್ತು ಕನಿಷ್ಠ 4 ಬ್ಯಾಟರಿ ಇದರಲ್ಲಿದೆ.

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts