More

    ವಿಶ್ವ ಐವಿಎಫ್ ದಿನಾಚರಣೆ: ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್ ಕಾರ್ಯಕ್ರಮ ​

    ಧಾರವಾಡ: ವಿಶ್ವ ಐವಿಎಫ್ ದಿನಾಚರಣೆ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ’ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿ ವಾಹಿನಿ ಸಹಯೋಗದಲ್ಲಿ ಇಂದು ಫೋನ್- ಇನ್ ಕಾರ್ಯಕ್ರಮ ನೆರವೇರಿತು.

    ಧಾರವಾಡದ ಹೆಸರಾಂತ ಸರ್ವೋದಯ ಆಸ್ಪತ್ರೆ, ಸಂತಾನಹೀನತೆ ಚಿಕಿತ್ಸೆ (ಐವಿಎಫ್) ಹಾಗೂ ಸಂಶೋಧನಾ ಕೇಂದ್ರದ ತಜ್ಞ ವೈದ್ಯರಾದ ಡಾ. ಗೀತಾ ಭರತ್ (ಉತ್ತೂರ) ಹಾಗೂ ಡಾ. ಗಾಯತ್ರಿ ಎ. ಉದಗಟ್ಟಿ (ಉತ್ತೂರ) ಅವರು ಕೇಳುಗರ ಪ್ರಶ್ನೆಗೆ ಉತ್ತರಿಸಿದರು.

    ಕಾರ್ಯಕ್ರಮಕ್ಕೂ ಮುನ್ನ VRL ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ತಜ್ಞ ವೈದ್ಯರಿಗೆ ಸಸಿ ನೀಡುವ ಮೂಲಕ ಸ್ವಾಗತಿಸಿದರು. ಬಳಿಕ ದೂರದ ಅಮೇರಿಕ, ಮಹಾರಾಷ್ಟ್ರ ಸೇರಿದಂತೆ ಬೆಂಗಳೂರು, ವಿಜಯಪುರ, ಕಲಬುರಗಿ, ಬೆಳಗಾವಿ, ಮಂಗಳೂರು, ಧಾರವಾಡ, ಹಾವೇರಿ, ಗದಗ, ಉತ್ತರಕನ್ನಡ, ಕೊಪ್ಪಳ ಸೇರಿ ರಾಜ್ಯದ ಮೂಲೆ ಮೂಲೆಯಿಂದ ನೂರಾರು ಕರೆಗಳ ಮಹಾಪೂರವೇ ಹರಿದುಬಂದವು.

    ಕೇಳುಗರ ಪ್ರಶ್ನೆಗಳಿಗೆ ಸಮಾಧಾನವಾಗಿಯೇ ಉತ್ತರಿಸಿದ ವೈದ್ಯರು, ಪುರುಷ-ಮಹಿಳೆಯರಲ್ಲಿ ಪ್ರಣಾಳಶಿಶು ಚಿಕಿತ್ಸೆ ಅಂಡಾಣುಗಳ ಶೀತಲೀಕರಣ, ಫಲವತ್ತತೆಯ ಸಂರಕ್ಷಣಿ, ಕೃತಕ ಗರ್ಭಧಾರಣೆ, ಪ್ರನಾಳ ಚಿಕಿತ್ಸೆ, ಪುನರಾವರ್ತಿ ಗರ್ಭಪಾತ, ಅಂಡಾಣು ಶಿತಲೀಕರಣ, ಫಲವತ್ತತೆ ಸಂರಕ್ಷಣೆ, ಐವಿಎಫ್ ತಂತ್ರಜ್ಞಾನ ಸೇರಿದಂತೆ ಮೊದಲಾದ ವಿಷಯಗಳ ಕುರಿತು ಪರಿಹಾರ ನೀಡಿದರು.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
    0836-2468000
    6361351318

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts