More

    ಮೋಸಕ್ಕೆ ಬಲಿಯಾಗಿ ರಷ್ಯಾ ಸೇನೆ ಸೇರಿಕೊಂಡು ಸಾವನ್ನಪ್ಪಿದ ಈ ಯುವಕ ಯಾರು?, ಮೊದಲು ಮಾಡುತ್ತಿದ್ದ ಕೆಲಸವೇನು ಗೊತ್ತೆ?

    ರಷ್ಯಾ: ರಷ್ಯಾ ಮತ್ತು ಉಕ್ರೇನ್ ನಡುವಿನ ಸುದೀರ್ಘ ಯುದ್ಧದಲ್ಲಿ ಮತ್ತೊಬ್ಬ ಭಾರತೀಯ ಪ್ರಜೆ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವ್ಯಕ್ತಿಯನ್ನು ಮೊಹಮ್ಮದ್ ಅಫ್ಸಾನ್ ಎಂದು ಗುರುತಿಸಲಾಗಿದೆ. ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಫ್ಸಾನ್ ಸಾವನ್ನು ಖಚಿತಪಡಿಸಿದೆ. ಮಾಹಿತಿಯ ಪ್ರಕಾರ, 30 ವರ್ಷದ ಮೊಹಮ್ಮದ್ ಅಫ್ಸಾನ್ ಮೋಸಕ್ಕೆ ಬಲಿಯಾಗಿ ರಷ್ಯಾದ ಸೈನ್ಯಕ್ಕೆ ಸೇರಿದರು.

    ಕೆಲವು ವಾರಗಳ ಹಿಂದೆ, ರಷ್ಯಾದ ಸೇನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ 23 ವರ್ಷದ ಭಾರತೀಯನೊಬ್ಬ ಉಕ್ರೇನ್ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಇದೇ ರೀತಿಯ ವಂಚನೆಗೆ ಬಲಿಯಾದ ನಂತರ, ರಷ್ಯಾದ ಸೈನ್ಯಕ್ಕೆ ಸೇರಲು ತಮ್ಮನ್ನು ಒತ್ತಾಯಿಸಲಾಯಿತು ಎಂದು ಸುಮಾರು ಹನ್ನೆರಡು ಭಾರತೀಯರು ಹೇಳಿಕೆ ಕೊಟ್ಟ ನಂತರ ಈ ಘಟನೆಗಳು ನಡೆಯುತ್ತಲೇ ಇವೆ. ಈ ವರದಿಯಲ್ಲಿ ಮೊಹಮ್ಮದ್ ಅಫ್ಸಾನ್ ಯಾರು ಮತ್ತು ಅವರು ರಷ್ಯಾದ ಸೈನ್ಯಕ್ಕೆ ಹೇಗೆ ಸೇರಿದರು ಎಂದು ನೋಡೋಣ…

    ಮೊಹಮ್ಮದ್ ಅಫ್ಸಾನ್ ಯಾರು?
    ಅಫ್ಸಾನ್ ಹೈದರಾಬಾದ್‌ನ ಬಜಾರ್ ಘಾಟ್ ಪ್ರದೇಶದ ನಿವಾಸಿ. ವಾಣಿಜ್ಯ ಪದವೀಧರರಾದ ಅಫ್ಸಾನ್, ಮೊದಲು ಪುರುಷರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಜೆಂಟ್ ಒಬ್ಬರು ಅಸಿಸ್ಟೆಂಟ್ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ರಷ್ಯಾಗೆ ಕಳುಹಿಸಿದ್ದರು. ಅಫ್ಸಾನ್‌ಗೆ ಮೊದಲ ಮೂರು ತಿಂಗಳಿಗೆ 45,000 ರೂಪಾಯಿ ವೇತನ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆತನ ಸಹೋದರ ಇಮ್ರಾನ್ ಹೇಳಿದ್ದಾರೆ. ಇದರೊಂದಿಗೆ ಮೂರು ತಿಂಗಳ ನಂತರ ಸಂಬಳ 1.5 ಲಕ್ಷ ರೂಪಾಯಿ ಆಗುತ್ತದೆ ಎಂದು ಹೇಳಲಾಗಿದೆ.

    ಒಂದು ವರ್ಷ ಕೆಲಸ ಮಾಡಿದ ನಂತರ ರಷ್ಯಾದ ಪಾಸ್‌ಪೋರ್ಟ್ ಮತ್ತು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅಫ್ಸಾನ್‌ಗೆ ಭರವಸೆ ನೀಡಲಾಯಿತು ಎಂದು ಇಮ್ರಾನ್ ಹೇಳಿದರು. ಆ ಸಮಯದಲ್ಲಿ ಅವರು ಈ ಅವಕಾಶವನ್ನು ಒಳ್ಳೆಯ ಆಫರ್ ಎಂದುಕೊಂಡು ಹಗರಣಗಾರರ ಬಲೆಯಲ್ಲಿ ಸಿಕ್ಕಿಬಿದ್ದರು. ಅಫ್ಸಾನ್ ನವೆಂಬರ್ 9 ರಂದು ಮಾಸ್ಕೋಗೆ ತೆರಳಿದರು. ಮಾಸ್ಕೋದಲ್ಲಿ ಮಾತ್ರ ಕೆಲಸ ಮಾಡಬೇಕು ಎಂದು ಏಜೆಂಟ್ ಹೇಳಿದ್ದರು. ಆದರೆ ಬದಲಾಗಿ 15 ದಿನಗಳ ತರಬೇತಿ ನೀಡಿ ಉಕ್ರೇನ್‌ನ ಕಾಡಿನ ಮಧ್ಯಕ್ಕೆ ಕಳುಹಿಸಲಾಗಿದೆ.

    ರಷ್ಯಾದ ಭಾಷೆಯಲ್ಲಿ ಒಪ್ಪಂದಕ್ಕೆ ಸಹಿ
    ವರದಿಯ ಪ್ರಕಾರ, ಅಫ್ಸಾನ್‌ಗೆ ಕೆಲಸ ನೀಡಿದ ಏಜೆಂಟ್ ಬಾಬಾ ವ್ಲಾಗ್ಸ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾನೆ. ನವೆಂಬರ್ 13 ರಂದು, ರಷ್ಯಾಕ್ಕೆ ಹೋಗುವ ಎಲ್ಲ ಜನರನ್ನು ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿಸಲಾಯಿತು, ಅದು ರಷ್ಯಾದ ಭಾಷೆಯಲ್ಲಿದೆ ಎಂದು ಅಫ್ಸಾನ್ ಈ ಹಿಂದೆ ತಿಳಿಸಿದ್ದರು. ಏಜೆಂಟರ ಮಾತನ್ನು ನಂಬಿ ಅಫ್ಸಾನ್ ಸೇರಿದಂತೆ ಎಲ್ಲರೂ ಸಹಿ ಹಾಕಿದರು.

    3 ಲಕ್ಷ ರೂ ತೆಗೆದುಕೊಂಡಿದ್ದ ಏಜೆಂಟ್
    ವರದಿಗಳ ಪ್ರಕಾರ, ಈ ಕೆಲಸಕ್ಕಾಗಿ ಅಫ್ಸಾನ್ ಏಜೆಂಟ್‌ಗೆ ಮೂರು ಲಕ್ಷ ರೂಪಾಯಿಗಳನ್ನು ನೀಡಿದ್ದರು. ಆದರೆ ಮಾಸ್ಕೋವನ್ನು ತಲುಪಿದ ನಂತರ, ಅಫ್ಸಾನ್ ಅನ್ನು ಉಕ್ರೇನ್ ಗಡಿಯಿಂದ 100 ಕಿಲೋಮೀಟರ್ ದೂರದಲ್ಲಿರುವ ರೋಸ್ಟೊವ್-ಆನ್-ಡಾನ್‌ಗೆ ಕಳುಹಿಸಲಾಯಿತು. ಮೊಹಮ್ಮದ್ ಅಫ್ಸಾನ್ ಅವರ ಸಾವಿನ ಸುದ್ದಿಯನ್ನು ಈಗ ಸ್ವೀಕರಿಸಲಾಗಿದೆ. ಆದರೆ ಅವರು ಯಾವಾಗ ಮತ್ತು ಎಲ್ಲಿ ಸತ್ತರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಫ್ಸಾನ್ ಕೊನೆಯದಾಗಿ ಡಿಸೆಂಬರ್ 31 ರಂದು ತನ್ನ ಕುಟುಂಬದೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು.

    ನಾಲ್ಕನೇ ಮಗುವಿಗೆ ಜನ್ಮ ನೀಡಿ ‘ಪ್ರೆಗ್ನೆನ್ಸಿ ಈಸಿಯಲ್ಲ’ ಎಂದ ಜನಪ್ರಿಯ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts