More

    ವಿಶ್ವ ಮಾನವ ಸಂದೇಶ ಜಗತ್ತಿಗೆ ದಾರಿ ದೀಪ

    ಚಿತ್ರದುರ್ಗ: ಕುವೆಂಪು ಅವರ ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಮೈದಳಿದಿರುವ ವಿಶ್ವ ಮಾನವ ಸಂದೇಶ ಜಗತ್ತಿಗೆ ದಾರಿ ದೀಪವಾಗಿದೆ ಎಂದು ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಶಿವಾನಂದಯ್ಯ ಹೇಳಿದರು.

    ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಭಾಷೆ, ಮತ, ಧರ್ಮ, ಗುಂಪು ಇತ್ಯಾದಿ ಸಂಕುಚಿತ ಗೋಡೆಗಳೊಂದಿಗೆ ಪರಸ್ಪರ ಅಪನಂಬಿಕೆಯಿಂದ ಒಬ್ಬರನೊಬ್ಬರು ನೋಡುವಂತಾಗಿದೆ. ದಿನೇ ದಿನೆ ಅಸಹಜತೆ, ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಲೋಕದ ಉದ್ಧಾರ, ಮಾನವ ಸಂತತಿ ಮುಂದುವರಿಕೆಗೆ ಅಗತ್ಯವಿರುವ ವಿಶ್ವ ಶಾಂತಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಾ ಬಂದಿರುವ ಅನೇಕ ದಾರ್ಶನಿಕರ ಆಶಯಗಳಿಗೆ ಪೂರಕವಾಗಿ ಕನ್ನಡ ಲೇಖಕರೂ ಸ್ಪಂದಿಸಿರುವುದು ನಾಡಿಗೆ ಹೆಮ್ಮೆಯ ಸಂಗತಿ. ಮಹನೀಯರ ಆದರ್ಶಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಎಡಿಸಿ ಪರಶುರಾಮ್ ಶಿನ್ನಾಳಕರ್ ಮಾತನಾಡಿ, ಕುವೆಂಪು ಜನ್ಮದಿನವನ್ನು 2015ರಿಂದ ವಿಶ್ವ ಮಾನವ ದಿನವೆಂದು ಆಚರಿಸಲಾಗುತ್ತಿದೆ. ಕುವೆಂಪು ವಿಶ್ವ ಮಟ್ಟದ ಸಾಹಿತಿ. ರೈತರು, ಶೋಷಿತರೆಡೆ ಅವರ ಕಳಕಳಿ ಮಾದರಿ ಎಂದು ಹೇಳಿದರು.

    ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ಸಮಾಜ ಸೇವಕಿ ಗಾಯತ್ರಿ ಶಿವರಾಂ ಇದ್ದರು. ಕಾಲ್ಗೆರೆ ಚಂದ್ರಪ್ಪ ಗೀತಗಾಯನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts