More

    ವಿಶ್ವಕಪ್​ 2023: ಭಾರತ, ಆಫ್ರಿಕಾ ಬಿಟ್ಟು ಸೆಮೀಸ್​ ಅರ್ಹತೆಗಾಗಿ ಇತರೆ ತಂಡದ ಲೆಕ್ಕಾಚಾರಗಳೇನು?

    ಮುಂಬೈ: ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿವೆ. ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೆಣಸಾಡುತ್ತಿರುವ ಆಸ್ಟ್ರೇಲಿಯಾ ಕೂಡ ಸೆಮಿಸ್​ ಮೇಲೆ ಕಣ್ಣಿಟ್ಟಿದೆ. ಆದರೆ, ಆಫ್ಘಾನ್​ ತಂಡ ಆ ಆಸೆಗೆ ತಣ್ಣೀರು ಎರಚುವ ಆರಂಭಿಕ ಲಕ್ಷಗಳು ಕಾಣುತ್ತಿದೆ. ನ್ಯೂಜಿಲೆಂಡ್​ ಮತ್ತು ಪಾಕಿಸ್ತಾನ ಕೂಡ ನಾಕೌಟ್​ ಹಂತದಲ್ಲಿ ಸ್ಥಾನ ಪಡೆಯುವ ರೇಸ್​ನಲ್ಲಿವೆ. ಸೆಮಿಸ್​ ಪ್ರವೇಶಕ್ಕೆ ಯಾರು? ಯಾರಿಗೆ? ಯಾವ ರೀತಿ ಅವಕಾಶಗಳು ಇವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ಸಮೀಸ್​ ಸ್ಥಾನ ಖಚಿತಪಡಿಸಿಕೊಂಡಿವೆ. ಭಾರತ ಮೊದಲ ಸ್ಥಾನದಲ್ಲಿದ್ದರೆ, ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್​ ವಿರುದ್ಧ ಪಾಕಿಸ್ತಾನದ ನಿರ್ಣಾಯಕ ಗೆಲುವು ಸಮಿಫೈನಲ್​ ಆಸೆಯನ್ನು ಜೀವಂತವಾಗಿ ಇರಿಸಿದೆ. ಸದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ ನಂತರ ಸೆಮೀಸ್​ ಸೇರುವ ಪ್ರಮುಖ ತಂಡಗಳು ಎನಿಸಿಕೊಂಡಿವೆ. ಆದರೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವು ಸಹ ಸೆಮಿಫೈನಲ್ ಸ್ಥಾನವನ್ನು ಕಸಿದುಕೊಳ್ಳುವ ಹುಡುಕಾಟದಲ್ಲಿವೆ.

    ಮೊದಲ ನಾಲ್ಕರಲ್ಲಿ ಸ್ಥಾನ ಪಡೆಯಲು ಅಥವಾ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ಪ್ರತಿ ತಂಡವು ಏನು ಮಾಡಬೇಕು? ಮತ್ತು ಯಾವ ರೀತಯ ಅವಕಾಶ ಇದೆ ಹಾಗೂ ತಂಡಗಳ ಲೆಕ್ಕಾಚಾರ ಏನು? ಎಂಬುದರ ವಿವರಣೆ ಇಲ್ಲಿದೆ.

    ಭಾರತದ ಅಜೇಯ ಓಟ
    ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಆಡಿರುವ 8 ಪಂದ್ಯಗಳಲ್ಲೂ ಗೆಲುವು ದಾಖಲಿಸಿ 16 ಅಂಕಗಳು ಮತ್ತು +2.456 ರನ್​ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಈಗಾಗಲೇ ಸಮಿಫೈನಲ್​ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ಭಾರತಕ್ಕೆ ಲೀಗ್​ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ. ನವೆಂಬರ್​ 12ರಂದು ನೆದರ್ಲೆಂಡ್​ ವಿರುದ್ಧ ಕಣಕ್ಕಿಳಿಯಲಿದೆ.

    2ನೇ ಸ್ಥಾನದಲ್ಲಿ ಹರಿಣಗಳು
    ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಇದುವರೆಗೂ 8 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಸೋಲುಂಡು 6 ಪಂದ್ಯಗಳಲ್ಲಿ ಜಯಿಸಿದೆ. 12 ಅಂಕಗಳು ಮತ್ತು +1.376 ರನ್​ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಸೆಮಿಫೈನಲ್​ಗೆ ಅರ್ಹತೆ ಪಡೆದಿರುವ ಎರಡನೇ ತಂಡವಾಗಿದೆ. ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ನವೆಂಬರ್​ 10 ರಂದು ಅಫ್ಘಾನಿಸ್ತಾನದ ವಿರುದ್ಧ ಹರಿಣಗಳ ಪಡೆ ಸೆಣಸಾಡಲಿದೆ.

    ಆಸಿಸ್​ ಸಮೀಸ್​ ಪ್ರವೇಶಿಸುತ್ತಾ?
    ವಿಶ್ವಕಪ್​ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಎತ್ತಿಹಿಡಿದಿರುವ ಹೆಗ್ಗಳಿಕೆ ಹೊಂದಿರುವ ಆಸ್ಟ್ರೇಲಿಯಾ ಈ ಬಾರಿ ಕೊಂಚ ಎಡವಿದ್ದರು ಸಹ ಇನ್ನೂ ಸೆಮೀಸ್​ ಆಸೆ ಜೀವಂತವಾಗಿದೆ. ಒಟ್ಟು 7 ಪಂದ್ಯಗಳನ್ನು ಆಡಿರುವ ಆಸಿಸ್​ ಪಡೆ 2 ಸೋಲು 5 ಗೆಲುವುಗಳನ್ನು ಕಂಡಿದೆ. 10 ಅಂಕಗಳು ಮತ್ತು +0.924 ರನ್​ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ (ನ.07) ಮತ್ತು ಬಾಂಗ್ಲಾದೇಶ (ನ.11) ವಿರುದ್ಧ ಎರಡು ಪಂದ್ಯಗಳು ಬಾಕಿ ಉಳಿದಿವೆ. ಇಂದು ಮುಂಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಫ್ಘಾನ್​ ವಿರುದ್ಧ ಸೆಣಸುತ್ತಿರುವ ಆಸಿಸ್​ ಪಡೆ ಸೋಲಿನ ದವಡೆಯಲ್ಲಿ ಸಿಲುಕಿದರೂ ಮ್ಯಾಕ್ಸ್​ವೆಲ್​ ಆಸಿಸ್​ ಆಸೆಯನ್ನು ಜೀವಂತವಾಗಿ ಇರಿಸಿದ್ದಾರೆ.

    ಸಮೀಸ್ ಅರ್ಹತೆಯ​ ಹಾದಿ
    * ಆಸಿಸ್​ ಪಡೆ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ 14 ಅಂಕಗಳೊಂದಿಗೆ ಸೆಮಿಫೈನಲ್​ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
    * ಒಂದು ವೇಳೆ ಎರಡರಲ್ಲಿ ಒಂದು ಪಂದ್ಯ ಗೆದ್ದರೂ 12 ಅಂಕಗಳೊಂದಿಗೆ ಸೆಮೀಸ್​ ತಲುಪಲಿದೆ.
    * ಒಂದು ವೇಳೆ ಎರಡೂ ಪಂದ್ಯವನ್ನು ಆಸಿಸ್​ ಪಡೆ ಸೋತರೆ ರನ್​ರೇಟ್​ ಮೇಲೆ ಸಮೀಸ್​ ತಲುಪುವ ಅವಕಾಶವೂ ಇದೆ. 10 ಅಂಕಗಳೊಂದಿಗೆ ಕೊನೆಗೊಳ್ಳುವ ಇತರ ಕನಿಷ್ಠ ಎರಡು ತಂಡಗಳಿಗಿಂತ (ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ) ಹೆಚ್ಚಿನ ರನ್ ರೇಟ್‌ ಹೊಂದಿದರೆ ಸಮೀಸ್​ ಅರ್ಹತೆ ಪಡೆಯಲಿದೆ.

    ಕಿವೀಸ್​ಗೂ ಇದೆ ಅವಕಾಶ
    ನ್ಯೂಜಿಲೆಂಡ್​ಗೂ ಸಮೀಸ್​ ಪ್ರವೇಶಕ್ಕೆ ಅವಕಾಶ ಇದೆ. 8 ಪಂದ್ಯಗಳನ್ನು ಆಡಿರುವ ಕಿವೀಸ್​ 4 ಗೆಲವು ಮತ್ತು 4 ಸೋಲುಗಳನ್ನು ಕಂಡಿದ್ದು, +0.398 ರನ್​ ರೇಟ್​ ಮತ್ತು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕಿವೀಸ್​ಗೆ ಇನ್ನೊಂದು ಪಂದ್ಯ ಬಾಕಿ ಇದ್ದು, ನವೆಂಬರ್​ 9ರಂದು ಶ್ರೀಲಂಕಾ ವಿರುದ್ಧ ಸೆಣಸಲಿದೆ.

    ಅರ್ಹತೆಯ ಹಾದಿ
    * ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ 10ನೇ ಸ್ಥಾನಕ್ಕೇರಬೇಕಿದೆ ಮತ್ತು 10 ಅಂಕಗಳೊಂದಿಗೆ ಕೊನೆಗೊಳ್ಳುವ ಇತರ ಕನಿಷ್ಠ ಎರಡು ತಂಡಗಳಿಗಿಂತ (ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ) ಹೆಚ್ಚಿನ ರನ್ ರೇಟ್‌ ಹೊಂದಿದರೆ ಸಮೀಸ್​ ಅರ್ಹತೆ ಪಡೆಯಲಿದೆ.

    * ಎರಡೂ ಪಂದ್ಯಗಳನ್ನೂ ಸೋತು 8 ಅಂಕಗಳಿಗೆ ಸೀಮಿತವಾದರೂ ನ್ಯೂಜಿಲೆಂಡ್​ಗೆ ಮತ್ತೊಂದು ಅವಕಾಶವಿದೆ. ಅದೇನೆಂದರೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾವು ಎದರಿಸಲಿರುವ ಎಲ್ಲ ಪಂದ್ಯಗಳಲ್ಲಿ ಸೋಲಬೇಕು ಮತ್ತು ನ್ಯೂಜಿಲೆಂಡ್​ ಈ ಎರಡು ತಂಡಗಳಿಗಿಂತ ಅತ್ಯಧಿಕ ರನ್​ ರೇಟ್​ ಹೊಂದಿರಬೇಕು.

    ಪಾಕ್​ ಸಮೀಸ್​ ಆಸೆ ಜೀವಂತ
    ಪಾಕಿಸ್ತಾನ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 4 ಗೆಲುವು ಮತ್ತು 4ರಲ್ಲಿ ಸೋತಿದ್ದು, +0.036 ರನ್​ ರೇಟ್​ ಮತ್ತು 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ನವೆಂಬರ್​ 11ರಂದು ಇಂಗ್ಲೆಂಡ್​ ವಿರುದ್ಧ ಒಂದು ಪಂದ್ಯ ಬಾಕಿ ಇದೆ.

    ಅರ್ಹತೆಯ ಹಾದಿ
    * ಉಳಿದಿರುವ ಒಂದು ಪಂದ್ಯವನ್ನು ಗೆದ್ದು 10 ಅಂಕಗಳನ್ನು ಗಳಿಸುವುದು ಮಾತ್ರವಲ್ಲದೆ, 10 ಅಂಕಗಳೊಂದಿಗೆ ಕೊನೆಗೊಳ್ಳುವ ಇತರ ಕನಿಷ್ಠ ಎರಡು ತಂಡಗಳಿಗಿಂತ (ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ) ಹೆಚ್ಚಿನ ರನ್ ರೇಟ್‌ ಅನ್ನು ಪಾಕ್​ ಹೊಂದಬೇಕಿದೆ.
    * ಉಳಿದಿರುವ ಪಂದ್ಯದಲ್ಲಿ ಸೋತು 8 ಅಂಕಗಳನ್ನು ಹೊಂದಿದರೂ ಪಾಕ್​ಗೆ ಸಮೀಸ್​ ಹಾದಿ ಜೀವಂತವಾಗಿರಲಿದೆ. ಅದು ಹೇಗೆ ಅಂದರೆ, ನ್ಯೂಜಿಲೆಂಡ್​ ಮತ್ತು ಅಫ್ಘಾನಿಸ್ತಾನ ಉಳಿದಿರುವ ಎಲ್ಲ ಪಂದ್ಯಗಳಲ್ಲೂ ಸೋಲಬೇಕು.

    ಅಫ್ಘಾನಿಸ್ತಾನ
    ಆಫ್ಘಾನ್​ ತಂಡಕ್ಕೂ ಅವಕಾಶ ಇದೆ. ಒಟ್ಟು 7 ಪಂದ್ಯಗಳನ್ನು ಆಡಿರುವ ಆಫ್ಘಾನ್​ 4 ರಲ್ಲಿ ಗೆಲುವು ಮತ್ತು 3ರಲ್ಲಿ ಸೋಲುಂಡಿದೆ. ಆದರೆ, ರನ್​​ರೇಟ್​ (-0.330)ನಲ್ಲಿ ಮೈನಸ್​ ಇದೆ. ಆಸ್ಟ್ರೇಲಿಯಾ (ನ.7) ಮತ್ತು ದಕ್ಷಿಣ ಆಫ್ರಿಕಾ (ನ.10) ವಿರುದ್ಧ ಎರಡು ಪಂದ್ಯಗಳು ಬಾಕಿ ಇವೆ.

    ಅರ್ಹತೆಯ ಹಾದಿ
    * ಉಳಿದಿರುವ ಎರಡೂ ಪಂದ್ಯಗಳಲ್ಲೂ ಗೆದ್ದು 12 ಅಂಕಗಳನ್ನು ಗಳಿಸಿದರೆ, ಸಮಿಫೈನಲ್​ ಸ್ಥಾನ ಖಚಿತವಾಗಲಿದೆ.
    * ಎರಡರಲ್ಲಿ ಒಂದು ಪಂದ್ಯವನ್ನು ಗೆದ್ದು 10 ಅಂಕಗಳನ್ನು ಗಳಿಸಿದರೆ, 10 ಅಂಕಗಳಲ್ಲಿ ಮುಗಿಸಬಹುದಾದ ಕನಿಷ್ಠ ಎರಡು ಇತರ ತಂಡಗಳಿಗಿಂತ (ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ) ಹೆಚ್ಚಿನ ರನ್ ರೇಟ್​ ಹೊಂದಬೇಕಿದೆ.
    * ಎರಡೂ ಪಂದ್ಯಗಳಲ್ಲೂ ಸೋತರೆ 8 ಅಂಕಕ್ಕೆ ಆಫ್ಘಾನ್​ ಸೀಮಿತವಾಗಲಿದೆ. ಆದರೂ ಸಮೀಸ್​ ಆಸೆ ಜೀವಂತವಾಗಿ ಇರಿಸಿಕೊಳ್ಳಬಹುದಾಗಿದೆ. ಅದು ಹೇಗೆಂದರೆ, ನ್ಯೂಜಿಲೆಂಡ್​ ಮತ್ತು ಪಾಕಿಸ್ತಾನ ಎಲ್ಲ ಪಂದ್ಯಗಳಲ್ಲಿ ಸೋಲಬೇಕು. ಅದೇ ರೀತಿ ನೆದರ್ಲೆಂಡ್​ ಕೂಡ 8 ಅಂಕ ಗಳಿಸಬೇಕು.

    ಉಳಿದಂತೆ ಬಾಂಗ್ಲಾದೇಶ, ಶ್ರೀಲಂಕಾ, ನೆದರರ್ಲೆಂಡ್​ ಮತ್ತು ಇಂಗ್ಲೆಂಡ್​ ತಂಡಗಳು ಲೀಗ್​ ಹಂತದಲ್ಲೇ ಕಡಿಮೆ ಅಂಕಗಳೊಂದಿಗೆ ಸಮೀಸ್​ ಅರ್ಹತೆಯಿಂದ ಹೊರಗುಳಿದಿವೆ.

    ಕೊನೇಲಿ ಕೊಹ್ಲಿ​ ಬ್ಯಾಟಿಂಗ್​​…ವಿರಾಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರಾ ಗಂಭೀರ್? ತೊಂದರೆಯಾಗ್ತಿತ್ತು ಅಂದಿದ್ದೇಕೆ ಗೌತಿ

    ಕ್ರಿಕಟ್ ದಿಗ್ಗಜನ ದಾಖಲೆ ಮುರಿದ ಬೆನ್ನಲ್ಲೇ ಕೊಹ್ಲಿಯನ್ನು ಸ್ವಾರ್ಥಿ ಎಂದ ಪಾಕ್ ಮಾಜಿ ಕ್ರಿಕೆಟಿಗ; ವ್ಯಾಪಕ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts