More

    ಗಣಿತ ಲಿತಾಂಶ ಹೆಚ್ಚಳಕ್ಕೆ ಉಪನ್ಯಾಸಕರ ಶ್ರಮ ಮುಖ್ಯ

    ಧಾರವಾಡ: ಗಣಿತ ವಿಷಯದ ಲಿತಾಂಶ ಹೆಚ್ಚಿಸಲು ಉಪನ್ಯಾಸಕರು ಕೈ ಜೋಡಿಸಬೇಕು. ಈ ಬಾರಿ ಜಿಲ್ಲೆಯ ಲಿತಾಂಶ ಒಂದಂಕಿಯಲ್ಲಿ ಬರುವಂತೆ ಶ್ರಮ ವಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಪಿ. ಸುರೇಶ ಹೇಳಿದರು.
    ಜಿಲ್ಲಾ ಗಣಿತ ಉಪನ್ಯಾಸಕರ ವೇದಿಕೆ ಹಾಗೂ ಕೆ.ಎಲ್.ಇ. ಸಂಸ್ಥೆಯ ಆರ್.ಎಲ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗಣಿತ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಇದೇವೇಳೆ ದ್ವಿತೀಯ ಪಿಯುಸಿಯ ಗಣಿತ ವಿಷಯದ ವಾರ್ಷಿಕ ಪರೀಕ್ಷೆಯ 5 ಮಾದರಿ ಪ್ರಶ್ನೆಪತ್ರಿಕೆಗಳ ಕೈಪಿಡಿ ಬಿಡುಗಡೆ ಮಾಡಲಾಯಿತು.
    ಗಣಿತ ವಿಷಯದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಹಾಗೂ ಕಿತ್ತೂರು ಕಾಲೇಜಿನ ಪ್ರಾಚಾರ್ಯ ಜಿ.ಎಂ. ಗಣಾಚಾರಿ, ಜಿಲ್ಲಾ ಗಣಿತ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಡಾ. ಎಸ್.ಆರ್, ವಿಘ್ನೇಶಿ, ಅಣ್ಣೀಗೇರಿ ಕಾಲೇಜಿನ ಅಧ್ಯಕ್ಷ ನಾಗೇಶ ವೈ. ಅಣ್ಣಿಗೇರಿ, ಪ್ರಾಚಾರ್ಯೆ ಪಿ.ಎಸ್. ಆಲೂರ, ಇತರರಿದ್ದರು.
    ಆರ್‌ಎಲ್‌ಎಸ್ ಕಾಲೇಜಿನ ಪ್ರಾರ್ಯ ಸಿ.ವಿ. ಕಣಬರ್ಗಿ ಅಧ್ಯಕ್ಷತೆ ವಹಿಸಿದ್ದರು. ಎ.ಎ. ಅತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಬಿ. ಚವ್ಹಾಣ ನಿರೂಪಿಸಿದರು. ಗೀತಾ ಹಿರೇಮಠ ಸ್ವಾಗತಿಸಿದರು. ಅಕ್ಷತಾ ಕುರುಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts