More

    ಏಳು ದಿನದಲ್ಲಿ ಬೆಂಗಳೂರಿನಿಂದ ಒಡಿಶಾ; ಸಾವಿರ ಕಿ.ಮೀ ಕ್ರಮಿಸಿದರು ಸಂಬಳ ಸಿಗದ ಕಾರ್ಮಿಕರು!

    ಬೆಂಗಳೂರು: ಭತ್ತದ ಕೊಯ್ಲು ಅವಧಿ ಮುಗಿದ ನಂತರ ಕೆಲಸ ಸಿಗದೆ, ಒಡಿಶಾ ರಾಜ್ಯದ ಕಾಳಹಂಡಿ ಜಿಲ್ಲೆಯ ಜೈಪಟ್ನಾ ಬ್ಲಾಕ್‌ನ ದೈನಂದಿನ ಕೂಲಿಕಾರರಾದ ಕಟರ್ ಮಾಜ್ಹಿ, ಬುಡು ಮಾಜ್ಹಿ ಮತ್ತು ಭಿಕಾರಿ ಮಾಝಿ ಜೀವನೋಪಾಯಕ್ಕಾಗಿ ಜನವರಿ ಮಧ್ಯದಲ್ಲಿ ದೂರದ ಬೆಂಗಳೂರಿಗೆ ವಲಸೆ ಬಂದರು. ಅವರು ಭಾನುವಾರದಂದು ತಮ್ಮ ಕುಟುಂಬಗಳೊಂದಿಗೆ ಹಿಂತಿರುಗಿದರು.

    ಅವರು ಬೆಂಗಳೂರಿನಿಂದ ಕಾಳಹಂಡಿವರೆಗಿನ 1,000 ಕಿ.ಮೀ ದೂರವನ್ನು ಏಳು ದಿನಗಳ ಅವಧಿಯಲ್ಲಿ ಕ್ರಮಿಸಿದ್ದು ಅವರು ದಾರಿಯಲ್ಲಿ ಭೇಟಿಯಾದ ಜನರ ಸಹಾಯದಿಂದಾಗಿ ಬದುಕುಳಿದರು.

    ಜೈಪಟ್ನಾ ಬ್ಲಾಕ್‌ನ ಜಮ್ಚುವಾ ಮತ್ತು ಟಿಂಗುಪಖಾನ್ ಗ್ರಾಮಗಳ ಮೂವರು ಕಾರ್ಮಿಕ ಗುತ್ತಿಗೆದಾರರೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು 12 ಸದಸ್ಯರ ಗುಂಪಿನ ಭಾಗವಾಗಿದ್ದರು. ಅವರು ಬೆಂಗಳೂರಿಗೆ ವಲಸೆ ಬಂದಿದ್ದರು. ಅಲ್ಲಿ ಅವರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.

    “ನಾವು ಎರಡು ತಿಂಗಳ ಹಿಂದೆ ಸ್ವಲ್ಪ ಹಣವನ್ನು ಸಂಪಾದಿಸಲು ಮತ್ತು ನಮ್ಮ ಕುಟುಂಬವನ್ನು ಬಿಟ್ಟು ಬೆಂಗಳೂರಿಗೆ ಹೋಗಿದ್ದೆವು. ಕೂಲಿ ಮಾಡಿ ಒಂದು ತಿಂಗಳು ಕಳೆದರೂ ಹಣ ಸಿಕ್ಕಿಲ್ಲ. ಹಣ ಕೇಳಿದಾಗ ಗುತ್ತಿಗೆದಾರರು ಥಳಿಸಿದ್ದಾರೆ. ಹೀಗಾಗಿ ನಾವು ಹಿಂತಿರುಗಲು ನಿರ್ಧರಿಸಿದ್ದೇವೆ” ಎಂದು ಕೊರಾಪುಟ್‌ನ ಪೊಟ್ಟಂಗಿಯಲ್ಲಿ ಯಾರೋ ಚಿತ್ರೀಕರಿಸಿದ ವೀಡಿಯೊದಲ್ಲಿ ಕಟರ್ ಮಾಜ್ಹಿ ಹೇಳಿದರು.

    ತಮ್ಮಲ್ಲಿ ಹಣವಿಲ್ಲದೆ, ಕಟಾರ್, ಬುಡು ಮತ್ತು ಭಿಕಾರಿ ಮಾರ್ಚ್ 26 ರಂದು ತಮ್ಮ ಮನೆಗೆ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ತಮ್ಮ ಪ್ರಯಾಣದಲ್ಲಿ ಬಹುತೇಕ ನಡೆದುಕೊಂಡೇ ಪ್ರಯಾಣಿಸಿದ್ದು ನಡುನಡುವೆ ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ಅದರಲ್ಲಿ ಪ್ರಯಾಣಿಸಿದ್ದಾರೆ. ಅವರ ದುರವಸ್ಥೆಯನ್ನು ನೋಡಿದವರು ಅವರಿಗೆ ದಾರಿಯಲ್ಲಿ ಆಹಾರವನ್ನು ನೀಡಿದರು.

    ಕೊರಾಪುಟ್‌ನ ಪೊಟ್ಟಂಗಿ ಕಡೆಯಿಂದ ಮೂವರು ಒಡಿಶಾ ಪ್ರವೇಶಿಸಿದಾಗ, ಕೆಲವು ಸ್ಥಳೀಯರು ಸ್ವಲ್ಪ ಹಣವನ್ನು ಸಹಾಯ ಮಾಡಿ ನೆರೆಯ ನಬರಂಗಪುರ ಜಿಲ್ಲೆಯ ಪಾಪದಹಂಡಿಗೆ ಬಸ್ ಹತ್ತಲು ಸಹಾಯ ಮಾಡಿದರು. ನಂತರ ಮೂವರೂ ಪಾಪದಹಂಡಿಯಿಂದ ಬೆಟ್ಟಗಳ ಮೂಲಕ ತಮ್ಮ ಮನೆಗಳಿಗೆ ನಡೆದುಕೊಂಡು ಹೋದರು.

    ಒಂದು ವಾರದ ಪ್ರಯಾಸಕರ ಪ್ರಯಾಣದ ನಂತರ, ಮೂವರು ಅಂತಿಮವಾಗಿ ಭಾನುವಾರ ತಮ್ಮ ತಮ್ಮ ಮನೆಗಳನ್ನು ತಲುಪಿದರು. “ಯಾರು ಕುಟುಂಬಗಳನ್ನು ಬಿಟ್ಟು ದೂರದ ಸ್ಥಳಗಳಿಗೆ ಹೋಗಲು ಬಯಸುವುದಿಲ್ಲ. ಆದರೆ ನಮಗೆ ಮನೆ ಬಿಡದೇ ಬೇರೆ ಆಯ್ಕೆ ಇಲ್ಲ. ನಮ್ಮ ಗ್ರಾಮದಲ್ಲಿ ನಮಗೆ ಸ್ವಂತ ಜಮೀನಿಲ್ಲ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎಂಜಿಎನ್‌ಆರ್‌ಇಜಿಎಸ್) ಜಾಬ್ ಕಾರ್ಡ್‌ಗಳನ್ನು ಹೊಂದಿದ್ದರೂ, ನಮಗೆ ನಿಯಮಿತವಾಗಿ ಕೆಲಸ ಸಿಗುವುದು ಕಷ್ಟಕರವಾಗಿದೆ, ”ಎಂದು 40 ರ ಹರೆಯದ ಬುಡು ಹೇಳಿದರು.

    ಬುಡುವಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದು, ಹಿರಿಯ ಮಗಳಿಗೆ ವಿವಾಹವಾಗಿದೆ. ಅವರನ್ನು ಬೆಂಗಳೂರಿಗೆ ಕರೆದೊಯ್ದ ಕಾರ್ಮಿಕ ಗುತ್ತಿಗೆದಾರನನ್ನೂ ಬುಡುಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಅವರು ಕೆಲಸ ಮಾಡುತ್ತಿದ್ದ ನಿರ್ಮಾಣ ಸಂಸ್ಥೆಯ ವಿವರಗಳು ಅವರ ಬಳಿ ಇಲ್ಲ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts