More

    ಸಂಘಟನೆ ಬಲಪಡಿಸಲು ಒಗ್ಗಟ್ಟಾಗಿ ಶ್ರಮ; ದಿನಕರರಾವ್​ ಕುಲಕರ್ಣಿ

    ಕಲಬುರಗಿ: ಕೆಲ ಗೊಂದಲಗಳಿAದಾಗಿ ಅಖಿಲ ಭಾರತ ಹಿಂದು ಮಹಾಸಭಾ ದೆಹಲಿ ಘಟಕೆ ವಿಸರ್ಜನೆಗೊಂಡಿದ್ದರಿAದ ಸಂಘಟನೆ ನಿಷ್ಕಿöçಯವಾಗಿತ್ತು. ಆದರೆ ಅಸಂಖ್ಯ ಕಾರ್ಯಕರ್ತರ ಆಪೇಕ್ಷೆಯಂತೆ ಹಿಂದು ಮಹಾಸಭಾ ಕರ್ನಾಟಕ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಎಲ್ಲೆಡೆ ಸಂಘಟನೆ ಬಲಿಷ್ಠಗೊಳಿಸುವುದಾಗಿ ಹಿರಿಯ ಉಪಾಧ್ಯಕ್ಷ ದಿನಕರರಾವ್ ಕುಲಕರ್ಣಿ ತಿಳಿಸಿದ್ದಾರೆ.

    ಸಂಘಟನೆ ಹಿರಿಯರೆಲ್ಲರೂ ವಿಜಯದಶಮಿ ದಿನ ಮಂಗಳೂರಿನ ಸುರತ್ಕಲ್‌ನಲ್ಲಿ ಸಭೆ ಸೇರಿ ಮಹಾಸಭಾ ಕರ್ನಾಟಕ ಘಟಕ ಆರಂಭಿಸಿz್ದೆÃವೆ. ರಾಜಕೀಯರಹಿತ ಸಂಘಟನೆಯಾಗಿರುವ ಇದು ಹಿಂದುಗಳ ರಕ್ಷಣೆಗೆ ಶ್ರಮಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

    ಪದಾಧಿಕಾರಿಗಳು: ರಾಜೇಶ ಪವಿತ್ರನ್ (ಸಂಸ್ಥಾಪಕ ಅಧ್ಯಕ್ಷ), ಡಾ.ವಿನಾಯಕ ಮಾಲದಕರ್ ಹುಬ್ಬಳ್ಳಿ (ಗೌರವಾಧ್ಯಕ್ಷ), ಡಾ.ಎಲ್.ಕೆ. ಸುವರ್ಣ ದಕ್ಷಿಣ ಕನ್ನಡ (ಅಧ್ಯಕ್ಷ), ದಿನಕರರಾವ್ ಕುಲಕರ್ಣಿ ಕಲಬುರಗಿ (ಹಿರಿಯ ಉಪಾಧ್ಯಕ್ಷ), ಕೃಷ್ಣ ಮೆನೋನ್ ಬೆಂಗಳೂರು (ಪ್ರಧಾನ ಕಾರ್ಯದರ್ಶಿ), ಬಸವರಾಜ ಹಡಪದ ಉತ್ತರ ಕನ್ನಡ, ಹಣಮಂತ ಎಂ.ಎ. ಹಾವೇರಿ (ಉಪಾಧ್ಯಕ್ಷರು), ಕಮಲೇಶ ಸುವರ್ಣ ಬೆಂಗಳೂರು (ಸಂಘಟನಾ ಕಾರ್ಯದರ್ಶಿ), ಮಂಜುಳಾ ನಟರಾಜ (ಕಾರ್ಯದರ್ಶಿ), ಲೋಕೇಶ ಉಳ್ಳಾಲ (ಖಜಾಂಚಿ), ಎನ್.ಸಿ. ಗಿರಿಧರ ಮೈಸೂರು, ಡಾ.ರವಿಚಂದ್ರನ್ ಗುರೂಜಿ (ಧಾರ್ಮಿಕ ಸಭಾ ಅಧ್ಯಕ್ಷರು), ಸುಕುಮಾರ ಸುರತ್ಕಲ್ ಮಂಗಳೂರು (ಶ್ರಮಿಕ ಸಭಾ ಪ್ರಮುಖ), ಪ್ರದೀಪನ್ ಬೆಂಗಳೂರು (ಮಾಧ್ಯಮ ಸಂಯೋಜಕ) ನೇಮಕಗೊಂಡಿದ್ದಾರೆ.

    ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಹಿಂದು ಮಹಾಸಭಾ ಕರ್ನಾಟಕ ಸಂಘಟನೆ ಬಲಪಡಿಸಲಾಗುವುದು. ಹಳೆಯ ಕಾರ್ಯಕರ್ತರನ್ನು ಸೇರಿಸಿ ಹೊಸ ಸದಸ್ಯತ್ವ ನೀಡಲಾಗುವುದು. ಶೀಘ್ರದಲ್ಲಿಯೇ ಜಿಲ್ಲಾ ಘಟಕ ಹಾಗೂ ಇನ್ನುಳಿದ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
    | ದಿನಕರರಾವ್ ಕುಲಕರ್ಣಿ
    ಹಿರಿಯ ಉಪಾಧ್ಯಕ್ಷ, ಹಿಂದು ಮಹಾಸಭಾ ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts