More

    ವರ್ಕ್ ಫ್ರಂ ಹೋಮ್, ಮಹಿಳೆಗೆ 89 ಸಾವಿರ ರೂ. ವಂಚನೆ

    ಶಿವಮೊಗ್ಗ: ವರ್ಕ್ ಫ್ರಂ ಹೋಮ್ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದ ಮಹಿಳೆಯೊಬ್ಬರು ಬರೋಬ್ಬರಿ 89 ಸಾವಿರ ರೂ. ವಂಚನೆಗೆ ಒಳಗಾಗಿದ್ದಾರೆ. ಟೆಲಿಗ್ರಾಂ ಅಪ್ಲಿಕೇಷನ್‌ನಲ್ಲಿ ಟಾಸ್ಕ್ ಪೂರೈಸಿದರೆ ಕಮಿಷನ್ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ನಗರದ ಗೃಹಿಣಿಯೊಬ್ಬರು ಮನೆಯಲ್ಲೇ ಕುಳಿತು ಕೆಲಸ(ವರ್ಕ್ ಫ್ರಮ್ ಹೋಮ್)ಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಿದ್ದರು. ಅವರ ಟೆಲಿಗ್ರಾಂ ಖಾತೆಗೆ ವಿಕ್ಕಿ ಎಂಬಾತನ ಹೆಸರಿನಲ್ಲಿ ಮೆಸೇಜ್ ಬಂದಿದ್ದು, ಹಣ ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದರೆ ಮತ್ತು ತಮ್ಮ ಉತ್ಪನ್ನಗಳನ್ನು ಖರೀದಿಸಿದರೆ ಕಮಿಷನ್ ನೀಡುವುದಾಗಿ ತಿಳಿಸಿದ್ದ. ಆತನ ಮಾತುಗಳನ್ನು ನಂಬಿದ ಗೃಹಿಣಿ ವಾಚ್ ಖರೀದಿಸಿದ್ದರು. ಹಾಗಾಗಿ ಅವರ ಖಾತೆಗೆ 1,500 ರೂ. ಕಮಿಷನ್ ರೂಪದಲ್ಲಿ ಬಂದಿತ್ತು.
    ಮತ್ತಷ್ಟು ವಸ್ತುಗಳನ್ನು ಖರೀದಿಸಿದರೆ ಕಮಿಷನ್ ಹಾಕುವುದಾಗಿ ತಿಳಿಸಿದ ವಂಚಕ ಫೋನ್ ಪೇ ಐಡಿ ಕಳುಹಿಸಿದ್ದ. ಹಲವು ವಸ್ತುಗಳ ಖರೀದಿಗೆ ಗೃಹಿಣಿ ಹಣ ವರ್ಗಾಯಿಸಿದ್ದರು. 89,500 ರೂ. ವರ್ಗಾಯಿಸಿದರೂ ಮತ್ತಷ್ಟು ಹಣ ಹಾಕುವಂತೆ ಆತ ಒತ್ತಾಯಿಸಿದ್ದ. ಇದರಿಂದ ಅನುಮಾನಗೊಂಡು ಪತಿಗೆ ವಿವರಿಸಿದಾಗ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೃಹಿಣಿ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts