More

    ಪೂರ್ತಿ ಪ್ರಪಂಚವೇ ಮನೆಯೊಳಗೆ ಕುಳಿತಿದ್ದರೂ ಭಾರತದಲ್ಲಿ ಸಾಧ್ಯವಿಲ್ಲ ವರ್ಕ್​ ಫ್ರಮ್​ ಹೋಮ್​ ಸೌಲಭ್ಯ

    ನವದೆಹಲಿ: ಕರೊನಾ ವೈರಸ್​ ಚೀನಾದಲ್ಲಿ ಮೊದಲು ಪತ್ತೆಯಾಗಿ ಇದೀಗ ವಿಶ್ವದಾದ್ಯಂತ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. 120ಕ್ಕೂ ಹೆಚ್ಚು ದೇಶಗಳಲ್ಲಿ ಕರೊನಾ ವೈರಸ್​ ದಾಳಿ ಮುಂದುವರೆಯುತ್ತಿದ್ದು, ಬಹುತೇಕ ದೇಶಗಳಲ್ಲಿನ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಿವೆ. ಆದರೆ ಭಾರತದಲ್ಲಿ ಮಾತ್ರ ಈ ಸೌಲಭ್ಯ ಸಾಧ್ಯವಿಲ್ಲದ್ದಾಗಿದೆ.

    ಭಾರತದಲ್ಲಿ ಎಲ್ಲೋ ಕೆಲ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ತಿಳಿಸಿವೆ. ಮೈಕ್ರೋಸಾಫ್ಟ್​, ಗೂಗಲ್​, ಇನ್ಫೋಸಿಸ್​ನಂತಹ ಪ್ರಸಿದ್ಧ ಟೆಕ್​ ಸಂಸ್ಥೆಗಳಲ್ಲಿ ಇಂತದ್ದೊಂದು ಸೌಲಭ್ಯ ಲಭ್ಯವಿದೆ. ಪ್ರಸಿದ್ಧ ಐಟಿ ಸರ್ವೀಸ್​ ಮ್ಯಾನೇಜ್ಮೆಂಟ್​ ಸಂಸ್ಥೆಯಾಗಿರುವ ಗಾರ್ಟ್ನರ್​ ನೀಡಿರುವ ವರದಿಯ ಪ್ರಕಾರ ದೇಶದಲ್ಲಿ ಶೇ.54 ಕಂಪನಿಗಳಲ್ಲಿ ಸಿಬ್ಬಂದಿ ಮನೆಯಿಂದ ಕೆಲಸ ಮಾಡುವಂತಹ ಸೌಲಭ್ಯ ಇಲ್ಲ.

    ಸಾಫ್ಟ್​ವೇರ್​ ಸಮಸ್ಯೆ, ಇಂಟರ್​ನೆಟ್​ ಸಮಸ್ಯೆ, ತಾಂತ್ರಿಕ ಜ್ಞಾನದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳ ಕಾರಣದಿಂದಾಗಿ ಭಾರತದ ಕಂಪನಿಗಳ ಸಿಬ್ಬಂದಿ ಮನೆಯಿಂದ ಕೆಲಸ ಮಾಡುವ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅನೇಕ ಕಂಪನಿಗಳಲ್ಲಿ ಗೂಗಲ್​ ಹ್ಯಾಂಗ್​ಔಟ್​, ಸ್ಕೈಪ್​, ಝೂಮ್​, ಸಿಸ್ಕೋ ವೆಬ್​ಎಕ್ಸ್​, ಗೋಟು ಮೀಟಿಂಗ್​, ಮೈಕ್ರೋಸಾಫ್ಟ್​ ಟೀಮ್ಸ್​, ಗ್ರೂಪ್​ಚಾಟ್​ನಂತಹ ಸಾಫ್ಟ್​ವೇರ್​ಗಳ ಪರಿಚಯವೇ ಇಲ್ಲದಿರುವುದು ವಿಪರ್ಯಾಸ.

    ಅನೇಕ ಸಂಸ್ಥೆಗಳಲ್ಲಿ ದುಬಾರಿ ಸಾಫ್ಟ್​ವೇರ್​ಗಳನ್ನು ಬಳಸಲಾಗುತ್ತಿದ್ದು, ಅವುಗಳನ್ನು ಪ್ರತಿ ಸಿಬ್ಬಂದಿಯ ಲ್ಯಾಪ್​ಟಾಪ್​ಗೆ ಹಾಕುವುದು ಕಷ್ಟಸಾಧ್ಯವಾಗಿದೆ. ಇನ್ನು ಅನೇಕ ಸಾಫ್ಟ್​ವೇರ್​ಗಳು ಲ್ಯಾಪ್​ಟಾಪ್​ನಲ್ಲಿ ಕಾರ್ಯನಿರ್ವಹಿಸುವುದಿಲ್ಲವೆನ್ನುವ ದೂರು ಕೂಡ ಕೇಳಿಬಂದಿದೆ. ಬಿಪಿಒ ಸಂಸ್ಥೆಗಳಲ್ಲಿ ಮನೆಯಿಂದ ಕೆಲಸ ಮಾಡುವ ಸೌಲಭ್ಯವನ್ನು ನೀಡುವುದು ಸಾಧ್ಯವೇ ಇಲ್ಲ ಎನ್ನುವುದು ಕೆಲ ಸಂಸ್ಥೆಗಳ ಮಾತು. ಹೀಗಿರುವಾಗ ಕರೊನಾ ಬಂದಿದ್ದು, ಎಲ್ಲೋ ಕೆಲ ಸಂಸ್ಥೆಗಳ ಸಿಬ್ಬಂದಿ ಮಾತ್ರ ತಮ್ಮ ಮನೆಗಳಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಇನ್ನುಳಿದ ಎಲ್ಲಾ ಕಂಪನಿಗಳ ಸಿಬ್ಬಂದಿ ಕರೊನಾ ಭೀತಿಯ ನಡುವೆಯೇ ಆಫೀಸುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಕರೊನಾ ಬಂದರೂ ವರ್ಕ್​ ಔಟ್​ ಬಿಡದ ಜನ; ಅಪಾರ್ಟ್​ಮೆಂಟ್​ನಲ್ಲೇ ನಡೆಯುತ್ತೆ ವರ್ಕ್​ಔಟ್​ ಕ್ಲಾಸ್​

    ಪ್ರೇಯಸಿಗೆ ಹೊಡೆದ ಯುವಕನಿಗೆ ಕ್ಲಾಸ್​ ತೆಗೆದುಕೊಂಡಿದ್ದ ನೇಹಾ ಧೂಪಿಯಾ ಪತಿಗಿದ್ದಾರಂತೆ ಐವರು ಗರ್ಲ್​ಫ್ರೆಂಡ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts