More

    ‘ನಮ್ಮನೆಯವರೇ ಎಎಸ್​ಐ, ಫೋನ್ ಮಾಡ್ಲಾ?’ ಎಂದು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಮಹಿಳೆ!

    ಮೈಸೂರು: ಈಗ ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ರಸ್ತೆಗಿಳಿದ ವಾಹನ ಸವಾರರನ್ನು ಪೊಲೀಸರು ಅಡ್ಡಗಟ್ಟಿ ಪ್ರಶ್ನಿಸುವುದು, ಸಾರ್ವಜನಿಕರು ಏನೋ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುವುದು ಅಥವಾ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವುದು ಎರಡೂ ಸರ್ವೇಸಾಮಾನ್ಯ. ಅಂಥದ್ದೇ ಒಂದು ಸಂದರ್ಭದಲ್ಲಿ ಪೊಲೀಸ್ ಹಾಗೂ ಪೊಲೀಸರೊಬ್ಬರ ಹೆಂಡ್ತಿ ನಡುವೆ ಭಾರಿ ವಾಗ್ವಾದವೇ ನಡೆದಿದೆ.

    ರಸ್ತೆಯಲ್ಲಿ ಬ್ಯಾರಿಕೇಡ್​ ಹಾಕಿದ್ದರೂ ಅದನ್ನು ಜರುಗಿಸಿ ಮುಂದಕ್ಕೆ ಹೋಗಲು ಯತ್ನಿಸಿದ್ದನ್ನು ಕಂಡು ರಸ್ತೆಬದಿಯಲ್ಲಿದ್ದ ಪೊಲೀಸರೊಬ್ಬರು ದ್ವಿಚಕ್ರವಾಹನದಲ್ಲಿದ್ದ ಆ ಯುವತಿಯನ್ನು ಪ್ರಶ್ನಿಸಿದ್ದಾರೆ. ಆಕೆ ನಾನು ಕೆಲಸಕ್ಕೆ ಹೋಗಬೇಕು ತಡವಾಗುತ್ತಿದೆ ಎಂದು ಸಮಜಾಯಿಷಿ ಕೊಟ್ಟರೂ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಹೀಗೆ ಕೆಲ ನಿಮಿಷಗಳ ಕಾಲ ಇಬ್ಬರೂ ಏರುದನಿಯಲ್ಲೇ ಮಾತನಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಕೊನೆಗೆ ಆ ಯುವತಿ ಜರುಗಿದ ಬ್ಯಾರಿಕೇಡ್ ನಡುವಿನ ಜಾಗದಲ್ಲೇ ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಲು ಯತ್ನಿಸಿದ್ದಾರೆ. ಆಗ ಆ ಪೊಲೀಸ್ ದ್ವಿಚಕ್ರವಾಹನದ ಮುಂದಿನ ಚಕ್ರಕ್ಕೆ ತಮ್ಮ ಕಾಲನ್ನು ಅಡ್ಡ ಇಟ್ಟಿದ್ದಾರೆ. ಆಗ, ‘ನಮ್ಮನೆಯವರೇ ಎಎಸ್​ಐ, ಫೋನ್ ಮಾಡ್ಲಾ?’ ಎಂದು ಆಕೆ ಬೆದರಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ‘ನಿಮ್ಮನೆಯವರು ಪೊಲೀಸ್ ಆದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದಾ? ಮನೆಯವರು ಪೊಲೀಸ್ ಅಂತ ಪೊಲೀಸರ ಮೇಲೇ ಗಾಡಿ ಹರಿಸುತ್ತೀರಾ?’ ಎಂದು ಆ ಪೊಲೀಸ್​ ಆಕೆಯ ದ್ವಿಚಕ್ರವಾಹನವನ್ನು ಸೈಡ್​ಗೆ ಹಾಕಿಸಿದ್ದಾರೆ. ಮೈಸೂರಿನ ಸಿದ್ಧಾರ್ಥ ಬಡಾವಣೆಯಲ್ಲಿ ನಡೆದ ಈ ಘಟನೆಯ ವಿಡಿಯೋ ತುಣುಕು ಇದೀಗ ವೈರಲ್ ಆಗಲಾರಂಭಿಸಿದೆ.

    ಎರಡೂ ಕೈಲಿ ಒಂದೊಂದೇ ಬೆರಳಿದ್ರೂ ಬರೆಯೋದು ಕಲಿತು ಡಿಗ್ರಿ ಮಾಡಿದ ಅಂಗವಿಕಲೆಗೆ ಒಲಿದು ಬಂದ ವರ!

    ಕದಿಯುವಾಗಲೇ ಸಿಕ್ಕಿಬಿದ್ದ ಎಳನೀರು ಕಳ್ಳ; ಮಾರಾಟಗಾರರೇ ಕಾದು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ರು..

    ರಾಜ್ಯದಲ್ಲಿ ಇಳಿಯುತ್ತಿದ್ದ ಸೋಂಕು ಮತ್ತೆ ಏರಿತು!; ಆತಂಕ ಹುಟ್ಟಿಸಿದ ಪಾಸಿಟಿವಿಟಿ ರೇಟ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts