More

    ನಿರಾಣಿ-ಯತ್ನಾಳ್ ‘ಜಗಳ್​ಬಂದಿ’; ವಾಗ್ವಾದಕ್ಕೆ ಸಿಎಂ ಗೃಹ ಕಚೇರಿಯೇ ಅಖಾಡ

    ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರಸ್ಪರ ಹೀಗಳೆಯುವ ‘ಜಗಳ್​ಬಂದಿ’ಗೆ ಮುಖ್ಯಮಂತ್ರಿ ಗೃಹ ಕಚೇರಿ ಆವರಣ ಶುಕ್ರವಾರ ಸಾಕ್ಷಿಯಾಯಿತು.

    ಸೂರ್ಯ-ಚಂದ್ರ ಇರುವವರೆಗೂ ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಲ್ಲ ಎಂದು ನಿರಾಣಿ ವಿರುದ್ಧ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದು, ದೊಡ್ಡವರ ಬಗ್ಗೆ ಮಾತನಾಡಲ್ಲ ಎಂದು ಯತ್ನಾಳ್ ವಿರುದ್ಧ ನಿರಾಣಿ ಕಿಡಿಕಾರಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿರಾಣಿಯವರು ಹೊಲಿಸಿಕೊಂಡಿದ್ದ ಸೂಟು-ಬೂಟು ಮಾರಾಟಕ್ಕಿಡಲಾಗಿದೆ. ಅಮೆರಿಕದಲ್ಲಿ ಸೂಟು-ಬೂಟು ಆಕ್ಷನ್​ಗೆ ಇಡ್ತಾರೆ, ನಿಮ್ಮಲ್ಲಿ ಯಾರಾದ್ರೂ ಸಿಎಂ ಆಗಬೇಕು ಅಂದುಕೊಂಡಿದ್ದರೆ ಸೂಟು-ಬೂಟು ಖರೀದಿಸಬಹುದು ಎಂದು ಯತ್ನಾಳ್ ವ್ಯಂಗ್ಯವಾಡಿದರು.

    ಇದನ್ನೂ ಓದಿ: #MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!

    ನಿರಾಣಿ ಗರಂ: ಯತ್ನಾಳ್ ನಿರ್ಗಮಿಸುತ್ತಿದ್ದಂತೆಯೇ ಸಿಎಂ ಗೃಹ ಕಚೇರಿಗೆ ಆಗಮಿಸಿದ ನಿರಾಣಿ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದರು. ಯತ್ನಾಳ್ ತುಂಬಾ ದೊಡ್ಡವರು, ದೊಡ್ಡವರ ಬಗ್ಗೆ ನಾನು ಮಾತಾಡಲ್ಲ, ಸಿಎಂ ಆಗೋದು ಬಿಡೋದು ನನ್ನ ಕೈಯಲ್ಲಿ ಇಲ್ಲ ಎಂದರು.

    ತಿರುಗೇಟು: ಸೂಟು ಹೊಲಿಸಿಕೊಂಡಿದ್ದಾರೆಂಬ ಯತ್ನಾಳರ ಮತ್ತೊಂದು ಆರೋಪ ಕುರಿತು ನಿರಾಣಿ ಉತ್ತರಿಸಿ, ನಾನು ಸೂಟ್ ಹೊಲಿಸಿಕೊಂಡಿದ್ದೇನೆ. ಸೂಟ್ ಇಲ್ಲದೆ ನಿತ್ಯ ಹೇಗೆ ಓಡಾಡಲಿ? ನನ್ನ ಸೂಟ್ ಬಗ್ಗೆ ಅಸೂಯೆಪಡದೆ ಅವರೂ ಸೂಟ್ ಹೊಲಿಸಿಕೊಂಡು ಓಡಾಡಲಿಎಂದು ಯತ್ನಾಳ್​ಗೆ ನಿರಾಣಿ ತಿರುಗೇಟು ನೀಡಿದರು.

    ಇದನ್ನೂ ಓದಿ: ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ

    ನಿರಾಣಿ ಪೀಠ: ಕೂಡಲಸಂಗಮ ಸ್ವಾಮೀಜಿ ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ. ಸಮುದಾಯದ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅವರ ಮಟ್ಟಕ್ಕೆ ಯಾವ ಪೀಠ ಬರುವುದಿಲ್ಲ. ಹರಿಹರ ಹಾಗೂ ಮೂರನೇ ಪೀಠ ನಿರಾಣಿ ಪೀಠಗಳು. ಕೂಡಲ ಸಂಗಮ ಪೀಠ ಮಾತ್ರ ಪಂಚಮಸಾಲಿ ಸಮುದಾಯದ ಪೀಠ ಎಂದು ಯತ್ನಾಳ್ ಲೇವಡಿ ಮಾಡಿದರು.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts