More

    ವಾಸ್ತವವಾಗಿ ಸಿಂಧಿಯಾಗೆ ಬಿಜೆಪಿಯಲ್ಲಿ ಏನು ಸಿಗಲಿದೆ?: ರಾಹುಲ್​ ಗಾಂಧಿ ಹೇಳಿದ್ದು ಹೀಗೆ…

    ನವದೆಹಲಿ: ಬಿಜೆಪಿಗೆ ಪಕ್ಷಾಂತರಗೊಂಡಿರುವ ತನ್ನ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಿಂಧಿಯಾ ತನ್ನ ರಾಜಕೀಯ ಭವಿಷ್ಯದ ಚಿಂತೆಯಿಂದ ತನ್ನ ಆದರ್ಶಗಳನ್ನು ಬದಿಗೊತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್​, ಸಿಂಧಿಯಾ ಮನಸ್ಸಿನಲ್ಲಿರುವುದಕ್ಕೂ ಹಾಗೂ ಸದ್ಯ ಹೇಳುತ್ತಿರುವ ಮಾತಿಗೂ ತುಂಬಾನೇ ವ್ಯತ್ಯಾಸವಿದೆ. ಕಾಲೇಜು ದಿನಗಳಿಂದಲೂ ನಾವಿಬ್ಬರು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ ಎಂದರು.

    ಇದೊಂದು ಸಿದ್ಧಾಂತವಾದ ಹೋರಾಟ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್​ ಒಂದು ಬದಿಯಲ್ಲಿದ್ದರೆ, ಬಿಜೆಪಿ-ಆರ್​ಎಸ್​ ಇನ್ನೊಂದು ಬದಿಯಲ್ಲಿದೆ. ಸಿಂಧಿಯಾ ಕಾಲೇಜು ದಿನಗಳಲ್ಲಿ ನನ್ನೊಂದಿಗೆ ಇದ್ದಿದ್ದರಿಂದ ಅವರ ಸಿದ್ಧಾಂತ ಏನೆಂಬುದು ನನಗೆ ತಿಳಿದಿದೆ. ತನ್ನ ರಾಜಕೀಯ ಭವಿಷ್ಯದ ಬಗ್ಗೆ ಸಿಂಧಿಯಾ ಚಿಂತಿಸುತ್ತಿದ್ದರು. ಇದೀಗ ತನ್ನ ಸಿದ್ಧಾಂತವನ್ನು ಪಾಕೆಟ್​ನಲ್ಲಿಟ್ಟು ಆರ್​ಎಸ್​ಎಸ್​ನೊಂದಿಗೆ ಹೋಗಿದ್ದಾರೆ ಎಂದು ರಾಹುಲ್​ ಕಿಡಿಕಾರಿದರು.

    ವಾಸ್ತವವೆಂದರೆ, ಸಿಂಧಿಯಾಗೆ ಬಿಜೆಪಿಯಲ್ಲಿ ಯಾವ ಗೌರವವೂ ಸಿಗುವುದಿಲ್ಲ. ಅವರ ಹೃದಯಕ್ಕೆ ಯಾವುದೇ ಸಮಾಧಾನವೂ ದೊರೆಯುವುದಿಲ್ಲ. ನಾವಿಬ್ಬರು ಹಳೆಯ ಸ್ನೇಹಿತರು ಎಂದು ತಿಳಿಸಿದರು.

    ಮಧ್ಯಪ್ರದೇಶದ ಕಮಲ್​ನಾಥ್​ ಸರ್ಕಾರದ ವಿರುದ್ಧ ಸಿಡಿದೆದ್ದ ಸಿಂಧಿಯಾ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ. ಸಿಂಧಿಯಾರೊಂದಿಗೆ ಅವರ ಬೆಂಬಲಿತ ಶಾಸಕರು ಕೂಡ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದು, ಕಮಲ್​ನಾಥ್​ ಸರ್ಕಾರ ಪತನದ ಅಂಚಿನಲ್ಲಿದೆ. (ಏಜೆನ್ಸೀಸ್​)

    ಜ್ಯೋತಿರಾದಿತ್ಯ ಸಿಂಧಿಯಾರ ಕೈ ಹಿಡಿದು ಸ್ವಾಗತ ಕೋರಿದ ಅಮಿತ್​ ಷಾ; ಪಕ್ಷದ ಬಲ ಹೆಚ್ಚಿತು ಎಂದ್ರು ರಾಜನಾಥ್​ ಸಿಂಗ್​

    ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಲಿದ್ದಾರಾ ತಲೈವಾ? ರಾಜಕೀಯಕ್ಕೆ ಇಳಿಯುವುದನ್ನು ದೃಢಪಡಿಸಿದ ನಟ ರಜನೀಕಾಂತ್ ನಿಲುವು ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts