More

    ನಾಳೆಯಿಂದ ಮಹಿಳೆಯರ ಟಿ20 ವಿಶ್ವಕಪ್​

    ಮಹಿಳಾ ಕ್ರಿಕೆಟ್​ನಲ್ಲಿ ಬಹಳ ವರ್ಷಗಳಿಂದ ಶಕ್ತಿಕೇಂದ್ರವಾಗಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ, ಆಸೀಸ್ ಪ್ರಾಬಲ್ಯವನ್ನು ಮುರಿಯುವ ತಂಡವಾಗಿ ಗೋಚರಿಸಿದ ಇಂಗ್ಲೆಂಡ್ ಮತ್ತೊಮ್ಮೆ ವಿಶ್ವ ಚಾಂಪಿಯನ್​ಷಿಪ್ ಕಣದಲ್ಲಿ ಹೋರಾಟ ನಡೆಸಲಿವೆ. 7ನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್​ಗೆ ಶುಕ್ರವಾರ ಆಸ್ಟ್ರೇಲಿಯಾದಲ್ಲಿ ಚಾಲನೆ ಸಿಗಲಿದ್ದು, 5ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಆಸ್ಟ್ರೇಲಿಯಾ ಫೇವರಿಟ್ ಆಗಿ ಕಣಕ್ಕಿಳಿಯಲಿದೆ.

    ಫೆ. 21ರಂದು ಸಿಡ್ನಿಯ ಶೋಗ್ರೌಂಡ್ ಸ್ಟೇಡಿಯಂನಲ್ಲಿ ಆತಿಥೇಯ ಆಸ್ಟ್ರೇಲಿಯಾ, ಭಾರತ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8 ರಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೂರ್ನಿಯ ಫೈನಲ್ ನಡೆಯಲಿದೆ. 10 ತಂಡಗಳನ್ನು ತಲಾ ಐದು ತಂಡಗಳ ಎರಡು ಗುಂಪುಗಳನ್ನಾಗಿ ಮಾಡಲಾಗಿದೆ, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೇರಲಿದೆ.

    ಭಾರತದ ವೇಳಾಪಟ್ಟಿ

    ಫೆ. 21: ಆಸ್ಟ್ರೇಲಿಯಾ ಮ.1.30

    ಫೆ. 24: ಬಾಂಗ್ಲಾದೇಶ ಸಂ 4.30

    ಫೆ. 27: ನ್ಯೂಜಿಲೆಂಡ್ ಬೆ. 9.30

    ಮಾ. 1: ಶ್ರೀಲಂಕಾ ಮ.1.30

    ನೇರಪ್ರಸಾರ: ಸ್ಟಾರ್​ಸ್ಪೋರ್ಟ್ಸ್

    ನೆಟ್​ವರ್ಕ್, ಡಿಡಿ ಸ್ಪೋರ್ಟ್ಸ್.

    ನಾಳೆಯಿಂದ ಮಹಿಳೆಯರ ಟಿ20 ವಿಶ್ವಕಪ್​

    ನಾಳೆಯಿಂದ ಮಹಿಳೆಯರ ಟಿ20 ವಿಶ್ವಕಪ್​

    ನಾಳೆಯಿಂದ ಮಹಿಳೆಯರ ಟಿ20 ವಿಶ್ವಕಪ್​

    ನಾಳೆಯಿಂದ ಮಹಿಳೆಯರ ಟಿ20 ವಿಶ್ವಕಪ್​

    ನಾಳೆಯಿಂದ ಮಹಿಳೆಯರ ಟಿ20 ವಿಶ್ವಕಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts