More

    ಯುಪಿ ವಾರಿಯರ್ಸ್‌ಗೆ ಸೋಲು: ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರ ಹೀಗಿದೆ!

    ನವದೆಹಲಿ: ಆಲ್ರೌಂಡರ್ ದೀಪ್ತಿ ಶರ್ಮ (88* ರನ್, 60 ಎಸೆತ, 9 ಬೌಂಡರಿ, 4 ಸಿಕ್ಸರ್ ಹಾಗೂ 22ಕ್ಕೆ 2 ವಿಕೆಟ್) ಕೊನೆವರೆಗೂ ನಡೆಸಿದ ಹೋರಾಟದ ನಡುವೆಯೂ ಯುಪಿ ವಾರಿಯರ್ಸ್‌ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಎದುರು 8 ರನ್‌ಗಳಿಂದ ವೀರೋಚಿತ ಸೋಲು ಅನುಭವಿಸಿದೆ. ಇದರೊಂದಿಗೆ ಯುಪಿ ವಾರಿಯರ್ಸ್‌ ತಂಡ ಪ್ಲೇಆ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದರೆ, ಗುಜರಾತ್ ಜೈಂಟ್ಸ್ ತಂಡ ಟೂರ್ನಿಯಲ್ಲಿ 2ನೇ ಗೆಲುವಿನೊಂದಿಗೆ ಪ್ಲೇಆ್ ಆಸೆ ಜೀವಂತವಿರಿಸಿದೆ. ಮಂಗಳವಾರ ನಡೆಯಲಿರುವ ಆರ್‌ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದ ಲಿತಾಂಶ ಮಹತ್ವ ಪಡೆದುಕೊಂಡಿದೆ.

    ಪ್ಲೇಆ್ ಲೆಕ್ಕಾಚಾರ: ಟೂರ್ನಿಯ ಲೀಗ್ ಪಂದ್ಯಗಳು ಬುಧವಾರ ಮುಕ್ತಾಯಗೊಳ್ಳಲಿದ್ದು, ಅಂಕಪಟ್ಟಿಯ ಅಗ್ರ 3 ಸ್ಥಾನ ಪಡೆಯುವ ತಂಡಗಳು ಪ್ಲೇಆ್ಗೇರಲಿವೆ. ಟೇಬಲ್ ಟಾಪರ್ ನೇರವಾಗಿ ೈನಲ್‌ಗೆ ಅರ್ಹತೆ ಪಡೆದರೆ, ನಂತರದ 2 ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಎದುರಾಗಲಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈಗಾಗಲೆ ಪ್ಲೇಆ್ ಸ್ಥಾನ ಖಾತ್ರಿಪಡಿಸಿಕೊಂಡಿವೆ. ಇನ್ನುಳಿದ 1 ಸ್ಥಾನಕ್ಕೆ ಆರ್‌ಸಿಬಿ ಹಾಗೂ ಯುಪಿ ವಾರಿಯರ್ಸ್‌ ನಡುವೆ ಪೈಪೋಟಿ ಏರ್ಪಟ್ಟಿದ್ದು, ಗುಜರಾತ್ ಕೂಡ ಕ್ಷೀಣ ಆಸೆ ಹೊಂದಿದೆ.

    ಯುಪಿ ವಾರಿಯರ್ಸ್‌ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸೋಲು ಕಂಡಿರುವುದರಿಂದ ಪ್ಲೇಆ್ ಆಸೆಯನ್ನು ಬಹುತೇಕ ಕೈಚೆಲ್ಲಿದೆ. ಇನ್ನು ಆರ್‌ಸಿಬಿ ತಂಡ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಹೀನಾಯವಾಗಿ ಸೋತು ರನ್‌ರೇಟ್‌ನಲ್ಲಿ ತನಗಿಂತ ಕುಸಿದರೆ ಮತ್ತು ಗುಜರಾತ್ ಕೊನೇ ಪಂದ್ಯ ಗೆದ್ದರೂ ರನ್‌ರೇಟ್‌ನಲ್ಲಿ ಸುಧಾರಣೆ ಕಾಣದಿದ್ದರೆ ಮಾತ್ರ ಯುಪಿ ಪ್ಲೇಆ್ಗೇರಲಿದೆ. ಆರ್‌ಸಿಬಿ ತಂಡಕ್ಕೆ ಇನ್ನು ಕೊನೇ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತರೂ ಪ್ಲೇಆ್ಗೇರುವ ಅವಕಾಶವಿದೆ. ಆದರೆ ರನ್‌ರೇಟ್‌ನಲ್ಲಿ ಮೇಲುಗೈ ಉಳಿಸಿಕೊಳ್ಳಬೇಕಾಗುತ್ತದೆ. ಗುಜರಾತ್ ಜೈಂಟ್ಸ್ ಪ್ಲೇಆ್ಗೇರಬೇಕಾದರೆ, ಆರ್‌ಸಿಬಿ ತನ್ನ ಕೊನೇ ಲೀಗ್ ಪಂದ್ಯ ಸೋಲಲೇಬೇಕು. ಜತೆಗೆ ಡೆಲ್ಲಿ ಎದುರು ಗೆದ್ದು ರನ್‌ರೇಟ್‌ನಲ್ಲೂ ಆರ್‌ಸಿಬಿ ಹಾಗೂ ಯುಪಿ ತಂಡಗಳನ್ನು ಹಿಂದಿಕ್ಕಿದರಷ್ಟೇ ಗುಜರಾತ್ ಪ್ಲೇಆ್ಗೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts