More

    ಜಿಲ್ಲೆಗೆ ‘ಮಹಿಳಾ ಮಣಿ’ ಮುಕುಟ

    ಶಿವಾನಂದ ಹಿರೇಮಠ ಗದಗ,
    ಜಿಲ್ಲೆಯಲ್ಲಿ ತಮ್ಮದೇ ಶಕ್ತಿ ಪ್ರದರ್ಶನ ಮೂಲಕ ಆಡಳಿತ ಮತ್ತು ಅಧಿಕಾರವನ್ನು ಸುಲಲಿತವಾಗಿ ನಡೆಸುತ್ತಿರುವ ಮಹಿಳಾಧಿಕಾರ ವರ್ಗವೇ ಅಧಿಕವಾಗಿದ್ದು, “ಮಹಿಳಾ ಮಣಿ’ ಮುಕುಟದಂತೆ ಜಿಲ್ಲೆಗೆ ಮಹಿಳಾ ಅಧಿಕಾರಿ ಮತ್ತು ಮಹಿಳಾ ಜನಪ್ರತಿನಿದಿಗಳು ಕೀರ್ತಿ ತಂದಿದ್ದಾರೆ. ಜತೆಗೆ ಜಿಲ್ಲೆಯ ಮಹಿಳಾ ವರ್ಗಕ್ಕೂ ಸ್ಪೂರ್ತಿ.
    ಮಾ.8 ರಂದು ಮಹಿಳಾ ದಿನಾಚರಣೆ ಆಚರಿಸುವ ನಾವುಗಳೆಲ್ಲರೂ ಜಿಲ್ಲೆಯ ಮಹಿಳಾ ಅಧಿಕಾರಿ ಮತ್ತು ಮಹಿಳಾ ಜನಪ್ರತಿನಿಧಿಗಳನ್ನು, ಅವರ ವೃತ್ತಿಯನ್ನು ಸ್ಮರಿಸಿಕೊಳ್ಳುವುದು ಅತಿಶೋಕ್ತಿಯಲ್ಲ. ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ಅಬಲೆಯಲ್ಲ, ಸಬಲೆ ಎಂಬುದನ್ನು ಜಿಲ್ಲೆಯ ಮಹಿಳಾ ವರ್ಗ ಸಾಭಿತುಪಡಿಸಿದೆ.
    ಜಿಲ್ಲೆಯಲ್ಲಿ ಜರುಗಿದ ಲಕ್ಕುಂಡಿ ಉತ್ಸವ, ಚುನಾವಣಾ ಪೂರ್ವ ಸಿದ್ಧತೆ, ಕಪ್ಪತಗುಡ್ಡ ತಪ್ಪಲಿಗೆ ಬೆಂಕಿ ಬಿದ್ದಾಗ ನಂದಿಸುವ ಕಾರ್ಯ, ಜಿಲ್ಲಾಡಳಿತ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ ಮೇಲಿನ ನಿಯಂತ್ರಣ ಸೇರಿದಂತೆ ಹಲವು ಆಯಾಮಗಳಲ್ಲಿ ಕೌಟುಂಬಿಕ ನಿರ್ವಹಣೆ ಜತೆಗೆ ವೃತ್ತಿ ಜೀವನವನ್ನೂ ಸಬಲವಾಗಿ ಮುನ್ನಡೆಸುವರು ಮಹಿಳೆಯರು ಎಂಬುದು ನಿಶ್ಚಿತ.
    ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​. ಜಿಲ್ಲೆಗೆ ಹೊಸಬರಾದರೂ ಜಿಲ್ಲೆಯನ್ನು ಅತೀ ಕಡಿಮೆ ಅವಧಿಯಲ್ಲಿ ಅರ್ಥೈಸಿಕೊಂಡರು. ಚುನಾವಣಾ ಪೂರ್ವ ಸಿದ್ಧತೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಸಿಇಒ ಬಿ.ಸುಶಿಲಾ, ಅರಣ್ಯಾಧಿಕಾರಿ ದೀಪಿಕಾ ಬಾಜಪೇಯಿ, ಎಸಿ ಅನ್ನಪೂರ್ಣ ಸೇರಿದಂತೆ ಹಲವು ಮಹಿಳಾ ಅಧಿಕಾರಿಗಳೂ ಲಕ್ಕುಂಡಿ ಉತ್ಸವ ಯಶಸ್ವಿಗೊಳಿಸಿದ್ದಾರೆ.
    ಉಷಾ ದಾಸರ ನಗರಸಬೆ ಅಧ್ಯೆ ಸ್ಥಾನ ಅಲಂಕರಿಸಿ ಒಂದು ವರ್ಷವೇ ಕಳೆಯಿತು. ಮೊದಲ ಬಾರಿ ನಗರಸಭೆ ಸದಸ್ಯರಾಗಿ, ಮೀಸಲಾತಿ ಅಡಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಬಿಜೆಪಿಗೆ ಅದೃಷ್ಟ ಲಕ್ಷ್ಮಿಯಾದರು. 35 ಸದಸ್ಯರ ಬಲ ಹೊಂದಿದ್ದ ಗದಗ ನಗರಸಭೆಯು ಕೊನೆಯ ಹಂತದ ಮತದಾನ ಕೌಂಟಿಂಗ್​ ನಲ್ಲಿ ಉಷಾ ದಾಸರ ಆಯ್ಕೆಗೊಂಡಿದ್ದರಿಂದ ಅವರನ್ನು ಅದೃಷ್ಟ ಲಕ್ಷ್ಮಿಯಂದೇ ಸಂಬೋಂಧಿಸುತ್ತಾರೆ.

    ಮಹಿಳೆ ಕುರಿತು ಜ್ಯೊತಿಷ್ಯಶಾಸ್ತ್ರ:
    ತಾಮಸಿಕಗುಣ, ರಾಜಸಿಕಗುಣ ಮತ್ತು ಸಾತ್ವಿಕಗುಣ ಹೀಗೆ ತ್ರಿಗುಣಗಳನ್ನು ಹೊಂದಿರುವ ಮಹಿಳೆಯು ಭೂಮಿ ಮೇಲಿನ ಅದ್ಭುತ ಮತ್ತು ವಿಶಿಷ್ಟ ಸೃಷ್ಟಿ. ಈ ಗುಣಗಳು ಮಹಿಳೆಯ ವೈವಿಧ್ಯತೆ, ರೋಚಕತೆಯನ್ನು ನಿರ್ಣಯಿಸುತ್ತದೆ. ಸ್ತ್ರೀಯು ಕಾರ್ಯಪ್ರವೃತ್ತಳಾದಾಗ ಯಾವ ಗುಣ ಅಧಿಕ ಪ್ರಮಾಣದಲ್ಲಿರುವುದೋ ಆ ಗುಣ ಸ್ವಭಾವವಾಗಿ ಅಭಿವ್ಯಕ್ತವಾಗುತ್ತದೆ. ಎಲ್ಲ ವಲಯಗಳಲದಲಿ ತನ್ನ ಸಾಮರ್ಥ್ಯ, ಪ್ರಾಬಲ್ಯವನ್ನು ಮೆರೆದಿದ್ದಾಳೆ. ಕೆಲಸವನ್ನು ಶ್ರೇಣಿಕರಿಸಿದೇ ಸಮಾನ ಆಸಕ್ತಿ, ಪ್ರೀತಿ ಮತ್ತು ದಕ್ಷತೆಯಿಂದ ನಿಭಾಯಿಸಬಲ್ಲರು. ಸ್ತ್ರೀಯರ ಮನೋಬಲ ಪುರುಷರಿಗಿಂತ ಅಧಿಕ. ಆಂತರ್ಯದಲ್ಲಿ ಮಹಿಳೆಯ ಸಂಕಲ್ಪಶಕ್ತಿ ದೃಢವಾಗಿರುತ್ತದೆ. ಮನಸ್ಸಿನ ಈ ವಿಭಿನ್ನ ಸ್ವಭಾವಕ್ಕೆ ತಾಮಸಿಕಗುಣ, ರಾಜಸಿಕಗುಣ ಮತ್ತು ಸಾತ್ವಿಕಗುಣಗಳೇ ಆಧಾರ ಎನ್ನುತ್ತದೆ ಜ್ಯೊತಿಷ್ಯಶಾಸ್ತ್ರ.

    ಮಹಿಳಾ ಜನಪ್ರತಿನಿಧಿಗಳು
    -ಗದಗ ನಗರಸಭೆ ಅದ್ಯಕ್ಷೆ ಉಷಾ ದಾಸರ
    -ನರಗುಂದ ಪುರಸಭೆ ಅದ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಉಪಾಧ್ಯೆ ಅನ್ನಪೂರ್ಣ ಎಲೆಗಾರ
    -ರೋಣ ಪುರಸಭೆ ಅದ್ಯಕ್ಷೆ ರಂಗವ್ವ ಭಜಂತ್ರಿ
    -ಗಜೇಂದ್ರಗಡ ಪುರಸಭೆ ಅದ್ಯಕ್ಷೆ ಲೀಲಾವತಿ ಒನ್ನಾಲ
    -ನರೇಗಲ್​ ಪಟ್ಟಣ ಪಂಚಾಯಿತಿ ಅಧ್ಯೆ ವಿಜಯಲಕ್ಷಿ$್ಮ ಚಲವಾದಿ
    -ಲಕ್ಷ್ಮೇಶ್ವರ ಪುರಸಭೆ ಅದ್ಯಕ್ಷೆ ಜಯಮ್ಮ ಅಂಬಲಗಿ, ಉಪಾಧ್ಯಕ್ಷ ಪೂಜಾ ಕರಾಟೆ
    -ಮುಂಡರಗಿ ಪುರಸಭೆ ಅದ್ಯಕ್ಷೆ ಕವಿತಾ ಉಳ್ಳಾಗಡ್ಡಿ
    -ಶಿರಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯೆ ಗಂಗಮ್ಮ ಆಲೂರ
    -ಮುಳಗುಂದ ಪಟ್ಟಂ ಪಂಚಾಯಿತಿ ಅದ್ಯಕ್ಷೆ ಉಮಾ ಮಟ್ಟಿ

    ಮಹಿಳಾ ಅಧಿಕಾರಿಗಳು
    -ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​, ಸಿಇಒ ಸುಶಿಲಾ ಬಿ, ಎಸಿ ಅನ್ನಪೂರ್ಣ ಮುದಕಮ್ಮನ್ನವರ, ಅರಣ್ಯಾಧಿಕಾರಿ ದೀಪಾ ಬಾಜಪೇಯಿ
    -ನರಗುಂದ ತಾಪಂ ಇಒ ಮಂಜುಳಾ ಹಕಾರಿ
    -ರೋಣ ತಹಸೀಲ್ದಾರ್​ ವಾಣಿ ಊಂಕಿ,
    -ಗಜೇಂದ್ರಗಡ ಕಂದಾಯ ನಿರೀಕ್ಷಕಿ ಗೌರಮ್ಮ ಆನಂದಪ್ಪನ್ನವರ.
    -ಮುಂಡರಗಿ ತಹಸೀಲ್ದಾರ ಶೃತಿ ಮಳ್ಳಪ್ಪಗೌಡ, ಅಬಕಾರಿ ನಿರಿಕ್ಷಕಿ ಸುವರ್ಣಾ ಕೋಟಿ
    -ಮುಂಡರಗಿ ಜಿಪಂ ಎಇಇ ನಾಗರತ್ನ, ಅರಣ್ಯಾಧಿಕಾರಿ ಸುನಿತಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts