More

    ವಾಣಿಜ್ಯೋದ್ಯಮ ಸಂಸ್ಥೆಯಿಂದ ಮಾ.11ಕ್ಕೆ ಮಹಿಳಾ ದಿನಾಚರಣೆ

    ವಿಜಯವಾಣಿ ಸುದ್ದಿಜಾಲ ಗದಗ
    ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ವತಿಯಿಂದ ಮಾ.11ರಂದು ಬೆಳಗ್ಗೆ 10.30ಕ್ಕೆ ನಗರದ ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಸುವರ್ಣ ಮದರಿಮಠ ಹೇಳಿದರು.
    ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಂಟದ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೈಟೆಕ್​ ಮ್ಯಾಗನೇಟಿಕ್​ ಎಲೆಕ್ಟ್ರಾನಿಕ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಉಮಾ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​., ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಈಶ್ವರಪ್ಪ ಮುನವಳ್ಳಿ, ಶೀತಲ ಚಿಲುಮೈ ಆಗಮಿಸಲಿದ್ದಾರೆ ಎಂದರು.
    ಇದೇ ಸಂದರ್ಭದಲ್ಲಿ ವ್ಯಾಪಾರ, ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಠ ಸಾಧನೆ ಮಾಡಿದ ಮೆಜಿಥಿಯಾ -ೌಂಡೇಶನ್​ ಹುಬ್ಬಳ್ಳಿಯ ರಮಿಲಾ ಮೆಜಿಥಿಯಾ, ಗದಗ ನಗರದ ಸುವಿಜಯ ಅಗ್ರಿವೆಂಚರ್​ ಅಂಸ್ಥೆಯ ಜಯಶ್ರೀ ಹುಬ್ಬಳ್ಳಿ, ಆಭಿಯಾನ ಟ್ರೆಡಿಂಗ್​ ಕಂಪನಿಯ ಮಂಗಲಾ ಯಳಮಲಿ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
    ಸುದ್ದಿಗೋಷ್ಠಿಯಲ್ಲಿ ಸಂಸ್ಧೆಯ ಪದಾಕಾರಿಗಳಾದ ಜಯಶ್ರೀ ಹುಬ್ಬಳ್ಳಿ, ವೀಣಾ ಪೋತ್ನಿಸ್​, ಜ್ಯೋತಿ ದಾನಪ್ಪಗೌಡ್ರ, ಸುಜಾತಾ ಗುಡಿಮನಿ, ಭಾಗ್ಯಶ್ರಿ ಕುರುಡಗಿ, ಸುರೇಖಾ ಮಲ್ಲಾಡದ, ಸುಷ್ಮಾ ಜಾಲಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts