More

    ಒಲಿಂಪಿಕ್ಸ್‌ನಲ್ಲಿ ಮಹಿಳೆಯರೂ 100 ಮೀ. ಓಡ್ತಾರೆ, 80 ಮೀ. ಅಲ್ಲ ಎಂದಿದ್ದೇಕೆ ಶಿಖಾ ಪಾಂಡೆ?

    ನವದೆಹಲಿ: ಮಹಿಳಾ ಕ್ರಿಕೆಟ್ ಪಂದ್ಯಗಳನ್ನು ಇನ್ನಷ್ಟು ಆಕರ್ಷಕ ಮತ್ತು ಆಕ್ರಮಣಕಾರಿಯಾಗಿಸುವ ನಿಟ್ಟಿನಲ್ಲಿ ಈಗಾಗಲೆ ಚೆಂಡು, ಪಿಚ್ ಸಣ್ಣದಾಗಬೇಕು ಎಂಬ ಸಲಹೆಗಳು ಬಂದಿವೆ. ಆದರೆ ಈ ರೀತಿಯ ಬದಲಾವಣೆಗಳಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ವೇಗಿ ಶಿಖಾ ಪಾಂಡೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಬುಲ್‌ಬುಲ್ ಸಿನಿಮಾ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!

    ‘ಒಲಿಂಪಿಕ್ಸ್‌ನಲ್ಲಿ ಮಹಿಳೆಯರೂ 100 ಮೀಟರ್ ಓಟವನ್ನು ಓಡುತ್ತಾರೆ. ಮಹಿಳೆಯರೆಂದು ಅವರು 80 ಮೀಟರ್ ದೂರ ಓಡುವುದಿಲ್ಲ. ಅವರಿಗೂ ಪುರುಷರಂಥದ್ದೇ ಸಮಯ ಲೆಕ್ಕಾಚಾರದ ಗಡಿಯಾರ ಇರುತ್ತದೆ. ಹೀಗಾಗಿ ಪಿಚ್ ಕಿರಿದಾಗಿಸುವ ಅಗತ್ಯವೇ ಇಲ್ಲ’ ಎನ್ನುವ ಮೂಲಕ ಶಿಖಾ ಪಾಂಡೆ, ಚೆಂಡು, ಪಿಚ್ ಸಣ್ಣದಾಗಿಸುವ ಸಲಹೆಯನ್ನು ವಿರೋಧಿಸಿದ್ದಾರೆ. ಭಾರತೀಯ ವಾಯುಸೇನೆ ಅಧಿಕಾರಿಯಾಗಿರುವ 31 ವರ್ಷದ ಶಿಖಾ ಭಾರತ ಪರ 104 ಏಕದಿನ ಪಂದ್ಯಗಳಲ್ಲಿ 113 ವಿಕೆಟ್ ಕಬಳಿಸಿದ್ದಾರೆ.

    ಇದನ್ನೂ ಓದಿ: ಭಾರತದ ಮೊದಲ ಸಿಕ್ಸರ್ ಸಿಡಿಸಿದ್ದು ಯಾರು ಗೊತ್ತೇ?

    ‘ಮಹಿಳಾ ಕ್ರಿಕೆಟ್ ಅಭಿವೃದ್ಧಿಗಾಗಿ ಸಾಕಷ್ಟು ಸಲಹೆಗಳು ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ ಹೆಚ್ಚಿನ ಸಲಹೆಗಳೆಲ್ಲ ನನಗೆ ಬಹಳ ಅತಿಯಾಯಿತು ಎನಿಸಿತು. ದಯವಿಟ್ಟು ಮಹಿಳಾ ಕ್ರಿಕೆಟ್ ಆಟವನ್ನು ಪುರುಷರ ಕ್ರಿಕೆಟ್ ಜತೆಗೆ ಹೋಲಿಸಿಕೊಳ್ಳಬೇಡಿ. ನಮ್ಮದು ಬಹಳ ಭಿನ್ನವಾದ ಆಟವಾಗಿದೆ. 2020ರ ಮಾರ್ಚ್ 8ರಂದು (ಟಿ20 ವಿಶ್ವಕಪ್ ಫೈನಲ್) ನಮ್ಮ ಆಟವನ್ನು ನೋಡಲು 86,174 ಪ್ರೇಕ್ಷಕರು ಸೇರಿದ್ದರು. ಟಿವಿಯಲ್ಲೂ ಕೋಟ್ಯಂತರ ಜನರು ವೀಕ್ಷಿಸಿದ್ದರು’ ಎಂದು ಶಿಖಾ ಪಾಂಡೆ ವಿವರಿಸಿದ್ದಾರೆ. ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಇತ್ತೀಚೆಗೆ ಮಹಿಳಾ ಕ್ರಿಕೆಟ್‌ನಲ್ಲಿ ಚೆಂಡು, ಪಿಚ್ ಸಣ್ಣದಾಗಬೇಕೆಂದು ಅಭಿಪ್ರಾಯಪಟ್ಟಿದ್ದರು.

    ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts