More

  ಶಿವಮೊಗ್ಗದಲ್ಲಿ ಮಹಿಳಾ ಮತದಾರರರೇ ಹೆಚ್ಚು

  ಅರವಿಂದ ಅಕ್ಲಾಪುರ ಶಿವಮೊಗ್ಗ
  ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತಲೂ ಹೆಚ್ಚು. ಒಟ್ಟು 17.29 ಲಕ್ಷ ಮತದಾರರ ಪೈಕಿ 8.77 ಲಕ್ಷ ಮಂದಿ ಮಹಿಳಾ ಮತದಾರರಿದ್ದಾರೆ.

  ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಮಹಿಳಾ ಮತದಾರರದ್ದೇ ಪಾರಮ್ಯ. ಇನ್ನೊಂದು ಕ್ಷೇತ್ರದಲ್ಲಿ ಇವರ ಸಂಖ್ಯೆ ಪುರುಷರಿಗಿಂತ ನೂರು ಮಾತ್ರ ಕಡಿಮೆ. ಮತ್ತೊಂದು ಕ್ಷೇತ್ರದಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಒಂದು ಸಾವಿರ ಮಾತ್ರ ಹೆಚ್ಚಿದೆ.
  ಮತದಾರರ ಪಟ್ಟಿ ಸೇರ್ಪಡೆಗೆ ಇನ್ನೂ ಅವಕಾಶವಿರುವುದರಿಂದ ಮಹಿಳೆಯರು ಪುರುಷರಿಗಿಂತ ಕಡಿಮೆ ಇರುವ ಎರಡು ವಿಧಾನಸಭಾ ಕ್ಷೇತ್ರಗಳ ಅಂಕಿ ಸಂಖ್ಯೆಯಲ್ಲೂ ಬದಲಾವಣೆಯಾದರೆ ಅಚ್ಚರಿಯಿಲ್ಲ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಕಾಯ್ದೆ ಜಾರಿಯಾದರೆ ಮುಂದಿನ 10 ವರ್ಷಗಳಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂಬುದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಮುನ್ಸೂಚನೆ ನೀಡುತ್ತಿದೆ.
  ಶಿವಮೊಗ್ಗ ಹಾಗೂ ಭದ್ರಾವತಿ ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆ ಹಾಗೂ ಪುರುಷ ಮತದಾರರ ಸಂಖ್ಯೆಯಲ್ಲಿ ತಲಾ ಏಳು ಸಾವಿರ ವ್ಯತ್ಯಾಸವಿದೆ. ಬೈಂದೂರಿನಲ್ಲಿ ಐದು, ಶಿವಮೊಗ್ಗ ಗ್ರಾಮಾಂತರದಲ್ಲಿ ಮೂರು, ಸಾಗರದಲ್ಲಿ ಎರಡು ಸಾವಿರದಷ್ಟು ಮಹಿಳಾ ಮತದಾರರೇ ಹೆಚ್ಚಿದ್ದಾರೆ.
  ಇಷ್ಟು ಚುನಾವಣೆಗಳಲ್ಲಿ ಜಾತಿ, ಉಪಜಾತಿ, ಧರ್ಮ ಆಧರಿಸಿ ಮತ ಲೆಕ್ಕಾಚಾರ ಹಾಕುತ್ತಿದ್ದ ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಪ್ರಚಾರ ತಂತ್ರವನ್ನೇ ಬದಲಿಸಿದ್ದಾರೆ. ಅದು ಪ್ರಚಾರಕಣದ ಆರಂಭದಲ್ಲೇ ಬಹಿರಂಗವಾಗಿ ಕಾಣುತ್ತಿದೆ. ಮಹಿಳೆಯರ ವಿಶ್ವಾಸ ಗಳಿಸಿದರಷ್ಟೇ ಗೆಲುವು ಸುಲಭ ಎಂಬುದು ರಾಜಕೀಯ ಪಕ್ಷಗಳಿಗೆ ಮನದಟ್ಟಾಗುತ್ತಿದೆ.
  ಮಹಿಳಾ ಸಮಾವೇಶಕ್ಕೆ ಒತ್ತು: ಹಿಂದಿನ ಚುನಾವಣೆಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ಸೇರಿದಂತೆ ಜಾತಿಯಾಧಾರಿತ ಮತದಾರರ ಸಮಾವೇಶಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಎಲ್ಲ ಸಮಾವೇಶಗಳನ್ನು ಹಿಂದಿಕ್ಕಿ ಮಹಿಳಾ ಸಮಾವೇಶಗಳು ಸದ್ದು ಮಾಡುತ್ತಿವೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಈಗಾಗಲೇ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಮಾವೇಶಗಳನ್ನು ನಡೆಸಿ ಸಾಧನೆಗಳ ಪಟ್ಟಿ ಮುಂದಿಟ್ಟಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts