More

    ‘ಎಣ್ಣೆ’ ಮಾರುತ್ತಿದ್ದ ದಂಪತಿಗೆ ಗ್ರಾಮಸ್ಥರಿಂದಲೇ ಗೃಹಬಂಧನ!

    ಲಕ್ಷ್ಮೇಶ್ವರ: ಕುಡಿತದಿಂದ ಹೆಚ್ಚುತ್ತಿರುವ ಕೌಟುಂಬಿಕ ಕಲಹಗಳಿಂದ ಬೇಸತ್ತ ತಾಲೂಕಿನ ಯತ್ನಳ್ಳಿ ಗ್ರಾಮದ ಮಹಿಳೆಯರು ಅಕ್ರಮ ಮದ್ಯ ಮಾರುತ್ತಿದ್ದ ಕುಟುಂಬದವರನ್ನು ಶನಿವಾರ ಕೂಡಿಹಾಕಿ ಪ್ರತಿಭಟನೆ ನಡೆಸಿದರು.

    ಯತ್ನಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಆಗಾಗ್ಗೆ ವಿರೋಧ ವ್ಯಕ್ತವಾಗುತ್ತಲೇ ಬಂದಿತ್ತು. ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ನಿತ್ಯವೂ ಗಂಡ-ಹೆಂಡತಿ ಜಗಳ ಸಾಮಾನ್ಯವಾಗಿದ್ದವು.

    ದನ್ನೂ ಓದಿ ಮಾವು ಮಂಡಿಯಲ್ಲಿ ಕಮಿಷನ್​ ದಂಧೆ, ಬಿಲ್​ ಕೇಳಿದ್ರೆ ಫಸಲು ಖರೀದಿಸಲ್ಲ!

    ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ರೋಸಿ ಹೋಗಿದ್ದ ಗ್ರಾಮದ ಮಹಿಳೆಯರು ಏಪ್ರಿಲ್ ತಿಂಗಳಲ್ಲೇ ‘ಗ್ರಾಮವನ್ನು ಮದ್ಯ ಮುಕ್ತವನ್ನಾಗಿಸುವುದಕ್ಕೆ ಎಲ್ಲರೂ ಕೈ ಜೋಡಿಸಿ’ ಎಂಬ ಭಿತ್ತಿಪತ್ರಗಳನ್ನು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಅಂಟಿಸಿದ್ದರು.

    ಗ್ರಾಮದ ಎಸ್‌ಸಿ ಕಾಲನಿಯಲ್ಲಿ ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಅಕ್ರಮವಾಗಿ ಮದ್ಯ ಮಾರಾಟ ಮುಂದುವರಿದಿತ್ತು.
    ಮದ್ಯವ್ಯಸನಿಗಳು ತಂದೆ-ತಾಯಿ, ಹೆಂಡತಿ-ಮಕ್ಕಳೊಂದಿಗೆ ಜಗಳ ಮಾಡಿ, ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಮಾರಿ ಮದ್ಯ ಸೇವಿಸುತ್ತಿದ್ದಾರೆ. ಅನೇಕರು ಅನಾರೋಗ್ಯಕ್ಕೀಡಾದರೆ, ಕೆಲವರು ಮೃತಪಟ್ಟಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

    ಇದರಿಂದ ರೋಸಿ ಹೋದ ಮಹಿಳೆಯರು ಶನಿವಾರ ಬೀದಿಗಿಳಿದು ಗ್ರಾಮದಲ್ಲಿ ಅಕ್ರಮ ಮದ್ಯ ಮಾರುತ್ತಿದ್ದ ರತ್ನವ್ವ ಡೋಣಿ ಮತ್ತು ಆಕೆಯ ಪತಿ ಮಂಜಪ್ಪ ಡೋಣಿ ಅವರನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ. ಸಾವಿರಾರು ರೂ. ಮೌಲ್ಯದ ಅಕ್ರಮ ಮದ್ಯ ಮತ್ತು ಇಬ್ಬರನ್ನೂ ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.

    ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಧಾವಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಅಕ್ರಮ ಮದ್ಯ ಮಾರಾಟಗಾರರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಹಿಂದು ಧರ್ಮಕ್ಕೆ ಮರಳುತ್ತಿವೆ ಮುಸ್ಲಿಂ ಕುಟುಂಬಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts