More

    ಕಬ್ಬಿನ ಗದ್ದೆಯಲ್ಲಿ ನವಜಾತ ಶಿಶು ಪತ್ತೆ

    ಕಲಘಟಗಿ: ತಾಯಿಯೊಬ್ಬಳು ನವಜಾತು ಗಂಡು ಶಿಶುವನ್ನು ಕಬ್ಬಿನ ಗದ್ದೆಯಲ್ಲಿ ಬಿಟ್ಟು ಹೋದ ಅಮಾನವಿಯ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಪಟ್ಟಣದ ಹೊರ ವಲಯದ ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಗದ್ದೆಯಲ್ಲಿ ಮಂಗಳವಾರ ಮಧ್ಯಾಹ್ನ ನವಜಾತ ಶಿಶು ಪತ್ತೆಯಾಗಿದೆ. ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಶಿಶು ಅಳಲು ಆರಂಭಿಸಿದೆ. ಶಿಶುವಿನ ಧ್ವನಿ ಕೇಳಿಸಿಕೊಂಡ ಕಬ್ಬಿನ ಗದ್ದೆಯ ಪಕ್ಕದ ಮನೆಯವರು ಶಿಶುವನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ.
    ಗರ್ಭಿಣಿ ಪಟ್ಟಣದ ಕಬ್ಬಿನ ಗದ್ದೆಯಲ್ಲಿ ಶಿಶುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಕರಳು ಬಳ್ಳಿ ಕತ್ತರಿಕೊಂಡು ಶಿಶುವನ್ನು ಗದ್ದೆಯಲ್ಲೇ ಬಿಟ್ಟು ಹೋಗಿದ್ದಾಳೆ.
    ಶಿಶು ಅದೃಷ್ಟ: ಶಿಶು ಅಳುವುದನ್ನು ಕೇಳಿಸಿಕೊಂಡ ಗದ್ದೆ ಪಕ್ಕದ ಮನೆಯವರು ಶಿಶುವನ್ನು ರಕ್ಷಿಸಿ, ತಮ್ಮ ಮನೆಗೆ ತಂದು ಆರೈಕೆ ಮಾಡಿದ್ದಾರೆ. ಬೀದಿನಾಯಿಗಳು ವಾಸ ಮಾಡುವ ಪ್ರದೇಶದಲ್ಲೇ ಶಿಶು ಪತ್ತೆಯಾಗಿದೆ. ಅದೃಷ್ಟದಿಂದ ಶಿಶು ಬೀದಿ ನಾಯಿಗಳ ಕಣ್ಣಿಗೆ ಬಿದ್ದಿಲ್ಲ. ಮಗುವನ್ನು ಬಿಟ್ಟು ಹೋದ ತಾಯಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ವಿಷಯ ತಿಳಿದ ಸಿಪಿಐ ಶ್ರೀಶೈಲ ಕೌಜಲಗಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts