More

    ಮಹಿಳೆಯನ್ನು ಹೊತ್ತೊಯ್ದ ಮೊಸಳೆ ಬೇಟೆಯಾಡಿ ಹೊಟ್ಟೆ ಬಗೆದು ನೋಡಿದಾಗ ಕಾದಿತ್ತು ಶಾಕ್​!

    ಜಕಾರ್ತ: ಮೀನು ಹಿಡಿಯುತ್ತಿದ್ದ ಮಹಿಳೆಯನ್ನು ಹೊಂಚು ಹಾಕಿ ನೀರಿನೊಳಗೆ ಎಳೆದೊಯ್ದ ಮೊಸಳೆಯನ್ನು ಸ್ಥಳೀಯರು ಬೇಟೆಯಾಡಿ ಅದರ ಉದರವನ್ನು ಬಗೆದು ನೋಡಿದಾಗ ಅವರಿಗೆ ಅಕ್ಷರಶಃ ಶಾಕ್​ ಎದುರಾಗಿತ್ತು.

    ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಇಂಡೋನೇಷ್ಯಾದ ನಾರ್ಥ್​ ಕಲಿಮಂಟನ್​ನಲ್ಲಿನ ನದಿಯಲ್ಲಿ ಫಾತಿಮಾ (45) ಎಂಬಾಕೆ ಮೀನು ಹಿಡಿಯುತ್ತಿದ್ದಾಗ ಇದಕ್ಕಿದ್ದಂತೆ ಆಕೆ ಗೋಳಾಡುವುದನ್ನು ಕೇಳಿ ಆಕೆಯಿದ್ದ ಸ್ಥಳಕ್ಕೆ ಆಪ್ತರು ಹೋಗಿ ನೋಡಿದ್ದಾರೆ. ಈ ವೇಳೆ ಮೊಸಳೆಯೊಂದು ಫಾತಿಮಾ ದೇಹವನ್ನು ತನ್ನ ಬಿಗಿಯಾದ ದವಡೆಗಳಿಂದ ಹಿಡಿದು ನೀರಿನೊಳಗೆ ಎಳೆದೊಯ್ದಿದ್ದನ್ನು ಆಪ್ತರು ಕಣ್ಣಾರೆ ಕಂಡಿದ್ದಾರೆ. ಇದನ್ನೂ ಓದಿ: VIDEO| ರಾತ್ರಿ ತನ್ನಷ್ಟಕ್ಕೆ ತಾನೇ ವರ್ಕೌಟ್​ ಮಾಡುತ್ತಿರೋ ಜಿಮ್​ ಯಂತ್ರ: ನಿಗೂಢ ಭೇದಿಸಿದ ಪೊಲೀಸರು!

    ಮರುದಿನ ಬೆಳಗ್ಗೆ 19 ಅಡಿ ಉದ್ದದ ಬೃಹತ್​ ಮೊಸಳೆಯನ್ನು ಉದ್ರಿಕ್ತ ಸ್ಥಳೀಯರು ಪೊಲೀಸರು ಸಹಾಯದಿಂದ ಸೆರೆಹಿಡಿದು ಅದರ ಉದರವನ್ನು ಬಗೆದು ನೋಡಿದ್ದಾರೆ. ಈ ವೇಳೆ ಫಾತಿಮಾ ಕೈಕಾಲುಗಳನ್ನು ಮೊಸಳೆಯ ಹೊಟ್ಟೆಯಿಂದ ಹೊರತೆಗೆದಿದ್ದಾರೆ. ಇದಕ್ಕೂ ಮೊದಲು ಮೊಸಳೆ ತಿರಸ್ಕರಿಸಿದ್ದ ಫಾತಿಮಾ ದೇಹದ ಇತರೆ ಭಾಗಗಳು ಸಮೀಪದಲ್ಲೇ ಪತ್ತೆಯಾಗಿತ್ತು.

    ಮೊಸಳೆ ಪತ್ತೆ ಹೇಗಾಯಿತು?
    ಫಾತಿಮಾಳನ್ನು ಮೊಸಳೆ ಎಳೆದೊಯ್ದ ಸುದ್ದಿ ಕೇಳಿದ ಅಲ್ಲಿನ ಪೊಲೀಸರು ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸುತ್ತಾರೆ. ಬಹು ಸಮಯದವರೆಗೆ ಶೋಧ ಕಾರ್ಯ ನಡೆಸಿದಾಗ ಮೊದಲು ಫಾತಿಮಾ ದೇಹದ ಒಂದು ಮಾಂಸ ಖಂಡ ಪತ್ತೆಯಾಗುತ್ತದೆ. ಅದಾದ ಬೆನ್ನಲ್ಲೇ ಆಕೆಯ ತುಂಡರಿಸಿದ ತಲೆ ಪತ್ತೆಯಾಗುತ್ತದೆ. ಶೋಧ ಕಾರ್ಯ ಮುಂದುವರಿಸಿದಾಗ ನದಿಯ ದಡದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮೊಸಳೆಯು ಪತ್ತೆಯಾಗುತ್ತದೆ. ಬಳಿಕ ಪೊಲೀಸರು ಮೊದಲು ಶೂಟ್​ ಮಾಡಿ ಮೊಸಳೆಯನ್ನು ಕೊಲ್ಲುತ್ತಾರೆ. ಬಳಿಕ ಸ್ಥಳೀಯರು ಅದರ ಉದರವನ್ನು ಸೀಳಿ ಫಾತಿಮಾ ಕೈಕಾಲುಗಳನ್ನು ಹೊರ ತೆಗೆಯುತ್ತಾರೆ. ಕೊನೆಯಲ್ಲಿ ಆಕೆಯ ಅಂಗಾಗಗಳನ್ನು ಅವರ ಕುಟುಂಬಕ್ಕೆ ಒಪ್ಪಿಸುತ್ತಾರೆ. ಇದನ್ನೂ ಓದಿ: ಡ್ಯಾಂಗಳಲ್ಲಿ ನೀರಿಗಿಳಿಯೋ ಮುನ್ನ ಈ ವಿಡಿಯೋ ನೋಡಿ: ಈಜುತ್ತಿದ್ದವನನ್ನು ಎಳೆದೊಯ್ದ ಮೊಸಳೆ, ಬದುಕಿದ್ದೆ ಅಚ್ಚರಿ!

    ನದಿಯಲ್ಲಿ ಹೆಚ್ಚು ಮೊಸಳೆಗಳು ಇರುವುದರಿಂದ ನದಿಯ ನೀರಿನಿಂದ ಭಾರಿ ಅಂತರವನ್ನು ಕಾಯ್ದುಕೊಳ್ಳಿ ಎಂದು ಅಲ್ಲಿನ ರಕ್ಷಣಾ ಮುಖ್ಯಸ್ಥ ಅಮಿರುದ್ದೀನ್​ ಎಚ್ಚರಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

    VIDEO| ಲವ್​ ಮಾಡಿದ್ದಕ್ಕೆ ಹುಡುಗನ ಮೇಲೆ ಪುಡಿ ರೌಡಿಗಳ ಅಟ್ಟಹಾಸ: ಪಾರ್ಕ್​ಗೆ ಕರೆದೊಯ್ದು ಥಳಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts