More

    ರಾತ್ರಿ ವೇಳೆ ಯುವತಿ ಬೆತ್ತಲೆಯಾಗಿ ಓಡಾಡುವ ಪ್ರಕರಣ: ಪೊಲೀಸ್​ ತನಿಖೆಯಲ್ಲಿ ಅಸಲಿ ಸಂಗತಿ ಬಯಲು

    ಲಖನೌ: ಕೊರೆಯುವ ಚಳಿಯಲ್ಲಿ ಪೂರ್ತಿ ಬೆತ್ತಲೆಯಾಗಿ ಉತ್ತರ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಅಳುಕಿಲ್ಲದೆ ಅಲೆದಾಡುತ್ತಿದ್ದ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್​ ತನಿಖೆಯ ಬಳಿಕ ಹೊರಬಿದ್ದಿದೆ.

    ಉತ್ತರ ಪ್ರದೇಶದ ರಾಂಪುರದ ಬೀದಿಗಳಲ್ಲಿ ಯುವತಿ ಬೆತ್ತಲೆಯಾಗಿ ಅಲೆದಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿತ್ತು. ಬಳಿಕ ಪೊಲೀಸರ ಗಮನಕ್ಕೆ ಬಂದು ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.

    ಯುವತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ ಐದು ವರ್ಷಗಳಿಂದ ಆಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಯುವತಿಯ ಪೋಷಕರನ್ನು ಪತ್ತೆಹಚ್ಚಿದ ಬಳಿಕ ಪೊಲೀಸರಿಗೆ ಈ ಮಾಹಿತಿ ದೊರಕಿದೆ. ರಾತ್ರಿ ವೇಳೆ ಮನೆಯಿಂದ ಹೊರಗೆ ಹೋಗದಂತೆ ಯುವತಿ ಮತ್ತು ಆಕೆಯ ಪಾಲಕರಿಗೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡುರಾತ್ರಿಯಲ್ಲಿ ಮಹಿಳೆಯೊಬ್ಬರು ಪೂರ್ತಿ ಬೆತ್ತಲೆಯಾಗಿ ಮನೆಗಳ ಕರೆಗಂಟೆ ಬಾರಿಸುತ್ತಿರುವ ಸಿಸಿಟಿವಿ ವಿಡಿಯೋ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಜಿಲ್ಲೆಯ ಜನರು ಭಯಭೀತರಾಗಿದ್ದರು. ಮಿಲಾಕ್ ಗ್ರಾಮದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣದ ಮೂಲಕ ದೇಶಾದ್ಯಂತ ಹರಡಿತ್ತು.

    ಯುವತಿಯು ಮನೆಗಳ ಕರೆಗಂಟೆಗಳನ್ನು ಬಾರಿಸುತ್ತಿದ್ದಳು ಮತ್ತು ಯಾರೆಂದು ನೋಡುವಷ್ಟರಲ್ಲಿ ಆಕೆ ಕಣ್ಮರೆಯಾಗಿರುತ್ತಿದ್ದಳು. ಇದರಿಂದ ಆ ಪ್ರದೇಶದಲ್ಲಿ ನಾನಾ ಊಹಾಪೋಹಗಳು ಹರಡಿತ್ತು. ಇದೀಗ ತನಿಖೆಯಿಂದ ಅಸಲಿ ಸಂಗತಿ ಭೇದಿಸಿರುವ ಪೊಲೀಸರು, ಭಯ ಅಥವಾ ಗೊಂದಲವನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹಂಚಿಕೊಳ್ಳದಂತೆ ಜನರನ್ನು ವಿನಂತಿಸಿದ್ದಾರೆ. (ಏಜೆನ್ಸೀಸ್​)

    ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿಗೆ ಕಾಂಗ್ರೆಸ್​ನಿಂದ ಪ್ರಶ್ನೆಗಳ ಸುರಿಮಳೆ: ಇದು ಮೋದಿ ಗ್ಯಾರೆಂಟಿ ಎಂದು ವ್ಯಂಗ್ಯ

    ಗ್ರೀನ್ ಮೊಬಿಲಿಟಿ ರ‍್ಯಾಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ

    ಮೂರನೇ ಬಾರಿಗೆ ಗ್ರ್ಯಾಮಿ ಅವಾರ್ಡ್​ ಗೆದ್ದ ಬೆಂಗಳೂರು ಮೂಲದ ರಿಕ್ಕಿ ಕೇಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts